ಆಲೂರು : ಚಾಕುವಿನಿಂದ ಇರಿದು ಯುವಕರೊಬ್ಬರನ್ನು ಬರ್ಬರ ಹತ್ಯೆ ಗೈದ ಘಟನೆ ಆಲೂರು ತಾಲೂಕಿನ ಮಗ್ಗೆ ಗ್ರಾಮದ ಚರ್ಚ್ ಕೊಡಿಗೆ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕುಂದೂರು ಗ್ರಾಮದ ಭರತ್ (28) ಕೊಲೆಯಾದ ಯುವಕ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಭರತ್ ಗೆ ಚಾಕುವಿಂದ ಇರಿದು ಕೊಲೆಗೈದು ಅರೊಪಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.