ರಾಷ್ಟ್ರೀಯ ಹೆದ್ದಾರಿ 75ರ ಪಾಳ್ಯ ಬಳಿ ಟಿಟಿ ವಾಹನ ಹಾಗೂ ಆಟೋ ನಡುವೆ ಡಿಕ್ಕಿ.
ಹೆದ್ದಾರಿಯಲ್ಲಿ ಸರಿಯಾದ ಸೂಚನಾ ಫಲಕವಿಲ್ಲದಿರುವುದೇ ಅಪಘಾತಕ್ಕೆ ಮೂಲ ಕಾರಣ ಕರವೇ ರಘು ಪಾಳ್ಯ ಆರೋಪ.
ಶನಿವಾರ ಮಧ್ಯಾಹ್ನ ಪಾಳ್ಯ ಗ್ರಾಮ ಸಮೀಪ ಟಿಟಿ ವಾಹನ ಹಾಗೂ ಆಟೋ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. ಎರಡು ವಾಹನಗಳ ಚಾಲಕ ಸಮಯ ಪ್ರಜ್ಞೆಯಿಂದ ಅದೃಷ್ಟವಾಷತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ರಘು ಪಾಳ್ಯ ಆಕ್ರೋಶ :
ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಚತೃಷ್ಟಪಥ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ನಡೆಸುತ್ತಿರುವ ರಾಜ್ ಕಮಲ್ ಕಂಪನಿಯವರು ವಾಹನ ಸವಾರರಿಗೆ ಸೂಕ್ತವಾದ ನಾಮಫಲಕ ಅಳವಡಿಸದೆ ಇರುವುದು ಅಪಘಾತ ಹೆಚ್ಚಾಗಲು ಕಾರಣವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ಆರಂಭಿಸಿದ್ದಾರೆ.
ಶುಕ್ರವಾರ ರಾತ್ರಿ ಕೂಡ ಬಾಳ್ಳುಪೇಟೆ ಸಮೀಪ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ 2 ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು. ಸಕಲೇಶಪುರದಿಂದ ಹಾಸನದವರೆಗೂ ಇರುವ 40 ಕಿಲೋಮೀಟರ್ ಹೆದ್ದಾರಿಯಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಹೆದ್ದಾರಿಯಲ್ಲಿ ಸೂಕ್ತವಾದ ನಾಮಫಲಕ ಅಳವಡಿಸದಿದ್ದರೆ ಬೃಹತ್ ಪ್ರತಿಭಟನೆ ಮಾಡಿಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.