ಆಂಬುಲೆನ್ಸ್ – ಬಸ್ ನಡುವೆ ಭೀಕರ ಅಪಘಾತ..! ಮೂವರಿಗೆ ಗಂಭೀರ ಗಾಯ
ಆಲೂರು : ಕೆ.ಎಸ್. ಆರ್. ಟಿ. ಸಿ ಬಸ್ ಹಾಗೂ ಅಂಬುಲೆನ್ಸ್ ನಡುವೆ ಅಪಘಾತ ನೆಡೆದಿರುವ ಘಟನೆ ಜರುಗಿದೆ.
ತಾಲೂಕಿನ ಪಾಳ್ಯ ಬಳಿ ಅಪಘಾತ ಸಂಭವಿಸಿದ್ದು ಆಂಬುಲೆನ್ಸ್ ನಲ್ಲಿದ ರೋಗಿ ಸೇರಿದಂತೆ ಮೂವರಿಗೆ ತೀವ್ರ ಸ್ವರೂಪದ ಗಾಯಗಳಾಗಿರುವ ವರದಿಯಾಗಿದೆ.ಹಾಸನದಿಂದ ಸಕಲೇಶಪುರ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಪಾಳ್ಯ ಬಳಿ ಬೈಪಾಸ್ ನಿಂದ ಹಳೆಯ ರಸ್ತೆಗೆ ತಿರುಗುವ ವೇಳೆ ಕೊಡ್ಲಿಪೇಟೆ ಕಡೆಯಿಂದ ಹಾಸನದ ಆಸ್ಪತ್ರೆಗೆ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ನಡುವೆ ಡಿಕ್ಕಿ ಸಂಭವಿಸಿದೆ.ಡಿಕ್ಕಿಯ ರಭಸಕ್ಕೆ ಆಂಬುಲೆನ್ಸ್ ಮುಂಭಾಗ ನಜ್ಜುಗುಜ್ಜಾಗಿದ್ದು ಆಂಬುಲೆನ್ಸ್ ಚಾಲಕನಿಗೆ ತೀವ್ರ ಪೆಟ್ಟಾಗಿದ್ದು ಚಾಲಕ ಆಂಬುಲೆನ್ಸ್ ನೊಳಗೆ ಸಿಕ್ಕಿಕೊಂಡಿದ್ದ ಚಾಲಕನನ್ನು ಸ್ಥಳೀಯರ ಸಹಾಯದಿಂದ ಹೊರಗೆ ತೆಗೆದು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಆಂಬುಲೆನ್ಸ್ ನಲ್ಲಿದ್ದ ರೋಗಿ ಹಾಗೂ ಅವರ ಸಹಾಯಕರಿಗೂ ಗಾಯಗಳಾಗಿದ್ದು ಎಲ್ಲರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.