ಡಿಕೆಶಿ ದುರಹಂಕಾರ ಕಡಿಮೆ ಮಾಡಿಕೊಳ್ಳಲಿ ಬಿಜೆಪಿ ಕಾರ್ಯಕರ್ತನಿಂದ ಉಪ ಮುಖ್ಯಮಂತ್ರಿಗೆ ಪಾಠ.
ಬಿಜೆಪಿ ಮುಖಂಡರ ವಿರುದ್ಧ ಏಕವಚನ ಪ್ರಯೋಗಿಸಿದ ಡಿಕೆ ಶಿವಕುಮಾರ್ ವಿರುದ್ಧ ಕಾರ್ಯಕರ್ತನ ಆಕ್ರೋಶ
ಆಲೂರು : ಸೋಮವಾರ ಹಾಸನದಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಶ್ರೇಯಸ್ ಪಟೇಲ್ ನಾಮಪತ್ರ ಸಲ್ಲಿಸುವ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಿಜೆಪಿ ಮುಖಂಡರ ವಿರುದ್ಧ ಏಕವಚನ ಪ್ರಯೋಗಿಸಿದಕ್ಕೆ ಬಿಜೆಪಿ ಕಾರ್ಯಕರ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ರೋಡ್ ಶೋ ನೆಡೆಸುವ ಸಂಧರ್ಭದಲ್ಲಿ ಜೆಡಿಎಸ್ ಪಕ್ಷವನ್ನು ಟಿಕೀಸುವ ಸಂಧರ್ಭದಲ್ಲಿ ಶಾಸಕರಾದ ಎಚ್. ಕೆ ಸುರೇಶ್, ಸಿಮೆಂಟ್ ಮಂಜು ಹಾಗೂ ಪ್ರೀತಮ್ ಗೌಡರನ್ನು ಏಕವಚನದಲ್ಲಿ ಮಾತನಾಡಿ ಮುಗಿಸು ಬಿಡುತ್ತಾರೆ ಎಂಬ ಹೇಳಿಕೆ ನೀಡುವ ಮೂಲಕ ಅವಹೇಳನ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ಬೈರಾಪುರ ಗಣೇಶ್ ಇವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಇನ್ನೊಬ್ಬರ ಏಕವಚನದಲ್ಲಿ ಮಾತಾನಾಡುವುದು ಅವರ ಘನತೆಗೆ ಗೌರವ ತಂದು ಕೊಡುವುದಿಲ್ಲ ಡಿಕೆಶಿ ಯವರ ಸಂಸ್ಕಾರ ಯಾವ ರೀತಿ ಎನ್ನುವುದು ನೆನ್ನೆ ಹಾಸನದಲ್ಲಿ ತೋರಿಸಿಕೊಟ್ಟಿದ್ದಾರೆ.ಯಾರನ್ನು ಯಾರು ಕೂಡ ಮುಗಿಸುವುದಕ್ಕೆ ಸಾಧ್ಯವಿಲ್ಲ. ಉಪಮುಖ್ಯಮಂತ್ರಿಯಾಗಿದ್ದುಕೊಂಡು ಸಮಾಧಿ ಮಾಡುತ್ತಾರೆ ಎನ್ನುವ ಹೇಳಿಕೆ ನೀಡಿರುವುದು ಡಿಕೆಶಿಗೆ ನಾಚಿಕೆ ಆಗಬೇಕು. ರಾಜಕೀಯದಲ್ಲಿ ಎಲ್ಲರೂ ಕೂಡ ಅವರ ಸ್ವಂತ ಸಾಮರ್ಥ್ಯದ ಮೇಲೆ ಗೆದ್ದು ಶಾಸಕರಾಗಿದ್ದಾರೆ. ಸಂವಿಧಾನದಲ್ಲಿ ಶಾಸಕರಿಗೆ ಉಪಮುಖ್ಯಮಂತ್ರಿಯಾಗಿರುವ ಡಿಕೆಶಿ ಕೊಡುವ ಗೌರವ ಇದೇನಾ ಇಂದು ಪ್ರಶ್ನೆಸಿದ್ದಾರೆ.ನೆಶೆಯಲ್ಲಿದವರಿಂದ ಮಾತ್ರ ಇಂತ ಭಾಷೆ ಬರುತ್ತದೆ ಇನ್ನೂ ಮುಂದೆ ಶಾಸಕರು ಎಂಬುವುದು ಸಾಂವಿಧಾನಿಕ ಹುದ್ದೆಯಾಗಿದ್ದು ಅ ಸ್ಥಾನದ ಮಹತ್ವ ಅರಿತು ಮಾತನಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಡಿಕೆಶಿ ಅವರು ಇದೇ ರೀತಿ ಸಂಸ್ಕೃತಿ ಮುಂದುವರೆಸಿದರೆ ನಮ್ಮ ಸಂಸ್ಕೃತಿ ಏನೆಂದು ನಾವು ತೋರಿಸಬೇಕಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿರುವ ವಿಡಿಯೋ👇👇👇