Saturday, April 12, 2025
Homeಸುದ್ದಿಗಳುಸಕಲೇಶಪುರಸಕಲೇಶಪುರದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನದ ಶಾಖ ಮಠ

ಸಕಲೇಶಪುರದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನದ ಶಾಖ ಮಠ

ಸಕಲೇಶಪುರದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನದ ಶಾಖ ಮಠ 

ಸಕಲೇಶಪುರ : ರಾಜ್ಯದ ಪ್ರಮುಖ ಮಠಗಳಲ್ಲಿ ಒಂದಾದ ಆದಿಚುಂಚನಗಿರಿ ಸಂಸ್ಥಾನದಿಂದ ತಾಲೂಕಿನ ಶಾಖ ಮಠ ತೆರೆಯಲು ಸ್ಥಳವನ್ನು ಖರೀದಿಸಲಾಗಿದೆ.

ತಾಲೂಕಿನ ಕಸಬಾ ಹೋಬಳಿ ಮಠಸಾಗರ ಗ್ರಾಮದ ಸರ್ವೇ ನಂ 30/1 ರಲ್ಲಿ ಸುಮಾರು 8.15 ಎಕರೆಯನ್ನು ಖರೀದಿಸಲಾಗಿದೆ. ಐ. ಬಿ. ಸಿ ಕಂಪನಿ ಕಡೆಯಿಂದ ಜಾಗವನ್ನು ಖರೀದಿಸಲಾಗಿದ್ದು ಮುಂದಿನ ದಿನಗಳಲ್ಲಿ ಸಕಲೇಶಪುರ ತಾಲೂಕು ಶೈಕ್ಷಣಿಕ,ಆದ್ಯಾತ್ಮಿಕ ಹಾಗೂ ಸಾಂಸ್ಕೃತಿಕವಾಗಿ ಮನ್ನಣೆ ಗಳಿಸಲಿದೆ ಎಂದು ಸಮಾಜ ಸೇವಕ ಪ್ರತಾಪ್ ಗೌಡ ಬಾಚಿಹಳ್ಳಿ ಅಭಿಪ್ರಾಯ ಪಟ್ಟಿದ್ದಾರೆ. ಶಾಖ ಮಠ ತೆರೆಯಲು ಸ್ಥಳ ಖರೀದಿಸಿದ ಹಿನ್ನೆಲೆಯಲ್ಲಿ ಭಕ್ತರು ಮಠಕ್ಕೆ ತೆರಳಿ ಶ್ರೀ ಶ್ರೀ ಶಂಭುನಾಥ ಮಹಾ ಸ್ವಾಮೀಜಿ ಅವರಿಗೆ ಗೌರವ ಸಮರ್ಪಣೆ ಮಾಡಿದರು.

RELATED ARTICLES
- Advertisment -spot_img

Most Popular