Wednesday, November 27, 2024
Homeಸುದ್ದಿಗಳುಸಕಲೇಶಪುರಬಗರ್ ಹುಕುಂ ಕಡತಗಳ ವಿಲೇವಾರಿಗೆ ಕ್ರಮ: ಶಾಸಕ ಸಿಮೆಂಟ್ ಮಂಜು

ಬಗರ್ ಹುಕುಂ ಕಡತಗಳ ವಿಲೇವಾರಿಗೆ ಕ್ರಮ: ಶಾಸಕ ಸಿಮೆಂಟ್ ಮಂಜು

ಬಗರ್ ಹುಕುಂ ಕಡತಗಳ ವಿಲೇವಾರಿಗೆ ಕ್ರಮ: ಶಾಸಕ ಸಿಮೆಂಟ್ ಮಂಜು.

ಸಕಲೇಶಪುರ: ಬಗರ್‌ಹುಕಂ ಯೋಜನೆಯಡಿ ಸಲ್ಲಿಸಿರುವ ಎಲ್ಲಾ ಕಡತಗಳನ್ನು ಶೀಘ್ರವೆ ವಿಲೇವಾರಿ ಮಾಡುವ ಮೂಲಕ ರೈತಾಪಿ ಜನರ ಮುಖದಲ್ಲಿ ನೆಮ್ಮದಿ ಕಾಣುವುದನ್ನು ಬಯಸುತ್ತೇನೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

     ಸೋಮವಾರ ಪಟ್ಟಣದ ಮಿನಿಧಾನಸೌಧದಲ್ಲಿ ನಡೆದ ಬಗರ್‌ಹುಕುಂ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಫಾರಂ 53 ಹಾಗೂ 57 ರಲ್ಲಿ 3ಸಾವಿರಕ್ಕೂ ಹೆಚ್ಚು ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಈ ಎಲ್ಲಾ ಅರ್ಜಿಗಳ ವಿಲೇವಾರಿಗೆ ಸಾಕಷ್ಟು ಅಡ್ಡಿಗಳಿದ್ದು ಸೆಕ್ಷನ್ 4,ಗೋಮಾಳ,ಡೀಮ್‌ಡ್ ಹಾಗೂ ಮಾಜಿ ಯೋದರಿಗೆ ಮೀಸಲಿಟ್ಟಿರುವ ಜಮೀನು ಹೊರತುಪಡಿಸಿ, ಅರಣ್ಯ ಇಲಾಖೆಯ ನಿರಾಪೇಕ್ಷಣೆ ಪಡೆದ ನಂತರ ಕಡತಗಳನ್ನು ಮಂಜೂರು ಮಾಡಲಾಗುವುದು. ಈ ದಿನದ ಸಭೆ ಯಲ್ಲಿ 34 ಕಡತಗಳಿಗೆ ಮಂಜೂರಾತಿ ನೀಡಲಾಗಿದೆ ಎಂದರು. ಮೊದಲ ಹಂತದಲ್ಲಿ ಯಾವುದೆ ಗೊಂದಲಗಳಿಲ್ಲದ ಕಡತಗಳನ್ನು ವಿಲೇವಾರಿ ಮಾಡಿ ನಂತರದ ಹಂತದಲ್ಲಿ ಇತರ ಕಡತಗಳನ್ನು ವಿಲೇವಾರಿ ಮಾಡಲಾಗುವುದು. ಒಟ್ಟಾರೆಯಾಗಿ ಬಡವರಿಗೆ ನ್ಯಾಯ ದೊರಕಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು.

   ಸಭೆಯಲ್ಲಿ ಬಗರ್ ಹುಕುಂ ಸಮಿತಿ ಸದಸ್ಯರಾದ ಉಚ್ಚಂಗಿ ಉದಯ,ಹಳೆಕೆರೆ ಚಂದ್ರು,ಗೀತಾ, ತಹಸೀಲ್ದಾರ್ ಮೇಘನಾ ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular