Sunday, April 13, 2025
Homeಸುದ್ದಿಗಳುಸಕಲೇಶಪುರಲಾರಿ - ಬೈಕ್ ನಡುವೆ ಅಪಘಾತ ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರರು

ಲಾರಿ – ಬೈಕ್ ನಡುವೆ ಅಪಘಾತ ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರರು

ಲಾರಿ – ಬೈಕ್ ನಡುವೆ ಅಪಘಾತ ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರರು

ಆಲೂರು : ಮಂಗಳೂರು ಕಡೆಯಿಂದ ಬೆಂಗಳೂರಿಗೆ ಕಬ್ಬಿಣದ ರೋಲ್ ಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಾಳ್ಯ ಗ್ರಾಮದ ಸಮೀಪ ಸಿಂಗಾಪುರ ದೇವಸ್ಥಾನದ ಹತ್ತಿರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಬೈಕ್ ಸವಾರರು ಪಾರಾದ ಘಟನೆ ನಡೆದಿದೆ .

ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿ ಕಾಮಗಾರಿ ನಡೆಯುತ್ತಿದ್ದು ಲಾರಿಯು ಚಲಿಸುತ್ತಿರುವಾಗ ಲಾರಿಯ ಎಡಭಾಗದಲ್ಲಿ ಬೈಕ್ ಸವಾರ ಓವರ್ ಟೆಕ್ ಮಾಡುತ್ತಿರುವಾಗ ಲಾರಿಯ ಚಾಲಕ ಕೂಡ ಎಡಭಾಗಕ್ಕೆ ಬಂದಿದ್ದರಿಂದ ಅಪಘಾತವಾಗಿದೆ ಸದ್ಯ ಬೈಕ್ ಸವಾರರು ಬೈಕ್ ನಿಂದ ಜಿಗಿದಿದ್ದರಿಂದ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ .ಲಾರಿಯ ಚಕ್ರಕ್ಕೆ ಸಿಲುಕಿದ ಬೈಕ್ ಅಪ್ಪಚ್ಚಿಯಾಗಿದೆ .

ಹೆದ್ದಾರಿಯಲ್ಲಿ ಸೂಚನ ಫಲಕ ಇಲ್ಲದಿರುವುದೇ ಅಪಘಾತಕ್ಕೆ ಕಾರಣ: ರಘು ಪಾಳ್ಯ ಆಕ್ರೋಶ 

ಹಾಸನದಿಂದ ಸಕಲೇಶಪುರದ ವರೆಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಎಲ್ಲಿಯೂ  ಸರಿಯಾಗಿ  ಸೂಕ್ತವಾದ  ನಾಮಫಲಕ ಹಾಕದಿರುವುದೇ  ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ತಮ್ಮ ಆಕ್ರೋಶ ಹೊರಹಾಕಿದ್ದಾರೆ 

RELATED ARTICLES
- Advertisment -spot_img

Most Popular