Monday, October 13, 2025
Homeಸುದ್ದಿಗಳುಸಕಲೇಶಪುರಅಬ್ಬನ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಮುಕ್ತಾಂಬಿಕ ಅವಿರೋಧ ಆಯ್ಕೆ.

ಅಬ್ಬನ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಮುಕ್ತಾಂಬಿಕ ಅವಿರೋಧ ಆಯ್ಕೆ.

ಅಬ್ಬನ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಮುಕ್ತಾಂಬಿಕ  ಅವಿರೋಧ ಆಯ್ಕೆ.

ಆಲೂರು : ತಾಲೂಕಿನ ಕೆ ಹೊಸಕೋಟೆ ಹೋಬಳಿ ಅಬ್ಬನ ಗ್ರಾಮ ಪಂಚಾಯತಿ ಅಧ್ಯಕ್ಷರ ಚುನಾವಣೆ ಶುಕ್ರವಾರ ಶಾಂತಿಯುತವಾಗಿ ನೆಡೆಯಿತು.

ಎಂಟು ಸದಸ್ಯ ಬಲದ ಅಬ್ಬನ ಗ್ರಾಮ ಪಂಚಾಯತಿಗೆ ಹಿಂದಿನ ಅಧ್ಯಕ್ಷರಾದ ರವಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಉಡುವನಹಳ್ಳಿ ವಾರ್ಡಿನ ಸದಸ್ಯೆ ಮುಕ್ತಾಂಬಿಕರವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನ 2 ಗಂಟೆಯಿಂದ 4 ಗಂಟೆವರೆಗೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಕಾಲಾವಕಾಶ ನೀಡಿದ ಚುನಾವಣೆ ಅಧಿಕಾರಿಗಳು ಮುಕ್ತಾಂಬಿಕ  ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ  ಚುನಾವಣಾ ಅಧಿಕಾರಿಯಾಗಿದ್ದ  ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸುಬ್ರಮಣ್ಯ ಶರ್ಮ ಅವರು  ಮುಕ್ತಾಂಬಿಕರನ್ನ ಅವಿರೋಧದಿಂದ ಅಧ್ಯಕ್ಷರಾಗಿ  ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.ನಂತರ ಮಾತನಾಡಿದ ನೂತನ ಅಧ್ಯಕ್ಷ ಮುಕ್ತಾಂಬಿಕ,ತಮ್ಮ ಅಧಿಕಾರ ಅವಧಿಯಲ್ಲಿ ಪ್ರಥಮವಾಗಿ ಮೂಲಭೂತ ಸಮಸ್ಯೆಗಳಿಗೆ ವಿಶೇಷ ಗಮನಹರಿಸಲಾಗುವುದು ಎಂದರು. ಶಾಸಕ ಸಿಮೆಂಟ್ ಮಂಜು ಅವರ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ನೆಡೆಸಲಾಗುವುದು. ಅಧ್ಯಕ್ಷೆಯಾಗಿ ಆಯ್ಕೆಯಾಗಲು ಸಹಕರಿಸಿದ ಸಹ ಸದಸ್ಯರಿಗೂ, ಪಕ್ಷದ ಮುಖಂಡರಿಗೂ, ಹಿತೈಷಿಗಳಿಗೂ ಧನ್ಯವಾದ ತಿಳಿಸಿದರು.

 ಇದೇ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು 

ಈ ಸಂಧರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಕೃಷ್ಣಮೂರ್ತಿ,ರವೀಂದ್ರ ಸುಜಾತ ಅಣ್ಣಪ್ಪ ಪೂಜಾರಿ ಬಶೀರ್ ರತ್ನಮ್ಮ ಪೂರ್ಣಿಮಾ,ತಾಲ್ಲೂಕು ಬಿಜೆಪಿ ಕಾರ್ಯದರ್ಶಿ ಕೃಷ್ಣ ಮೂರ್ತಿ ಪಕ್ಷದ ಮುಖಂಡರಾದ, ಬೈರಾಪುರ ಗಣೇಶ್, ಕಿರಣ್, ಶಿವಕುಮಾರ್, ಸಂಪತ್, ಜಯಪ್ರಕಾಶ್, ಸಂತೋಷ್, ಚೇತನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular