ಸಕಲೇಶಪುರ: ಜನಸಾಮಾನ್ಯರ ಪರ ಇರುವ ಸರ್ಕಾರ ಎಂದು ಹೇಳಿಕೊಳ್ಳುವ ಡಬಲ್ ಇಂಜಿನ್ ಸರ್ಕಾರ ಜನಸಾಮಾನ್ಯರಿಂದ ಆಧಾರ್ ಪ್ಯಾನ್ ಕಾರ್ಡ್ ಜೋಡಣೆ ಹೆಸರಿನಲ್ಲಿ ಹಣ ಲೂಟಿ ಮಾಡಲು ಮುಂದಾಗಿದೆ. ಮಾದ್ಯಮಗಳಲ್ಲೂ ಈ ಕುರಿತು ಸರ್ಕಾರದ ಹೇಳಿಕೆ ಇಲ್ಲ , ರೈತರು, ಬಡವರು ಎಲ್ಲಿಂದ 1000/- ತರುತ್ತಾರೆ ಮುತ್ತು ದಂಡ ಕಟ್ಟಲು ಅಪರಾಧ ಏನು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿರವರು ಕನಿಷ್ಠ ಮನ್ ಕೀ ಬಾತ್‌ನಲ್ಲಿ ಸಂದೇಶ ರವಾನೆ ಮಾಡಿದ್ದರೆ ಬಡ ರೈತರು ಕೊನೆಯ ದಿನಾಂಕದೊಳಗೆ ಹಣ ಕಟ್ಟಿಕೊಳ್ಳುತಿದ್ದರು .ಆದಾಯ ತೆರಿಗೆ ಇಲಾಖೆಗೆ ನೆನ್ನೆಯವರೆಗೆ ಸುಮಾರು 17ಕೋಟಿ ರೂ ಹಣ ದಂಡದ ರೂಪದಲ್ಲಿ ಪಾವತಿಯಾಗಿದೆ. ಇದು ಇದು ಹಗಲು ದರೋಡೆಯಾಗಿದ್ದು ಕೂಡಲೇ ಡಬಲ್ ಎಂಜಿನ್ ಸರ್ಕಾರ ಎಚ್ಚತ್ತು ಕೊಂಡು ಶ್ರೀಸಾಮಾನ್ಯನ ನೆರವಿಗೆ ಬರಬೇಕು. ಅಂದು ನೋಟು ಆಮ್ಯಾನಿಕರಣ ಹೆಸರಿನಲ್ಲಿ ಜನಸಾಮಾನ್ಯರನ್ನು ಬ್ಯಾಂಕುಗಳ ಮುಂದೆ ಬಿಸಿಲಿನಲ್ಲಿ ನಿಲ್ಲಿಸಿ ಆಯಿತು. ಇದೀಗ ಮತ್ತಷ್ಟು ಜನಸಾಮಾನ್ಯರಿಗೆ ಕಿರುಕುಳ ನೀಡುವುದು ಎಷ್ಟು ಸರಿ ಎಂದು ಜೆಡಿಎಸ್ ಮುಖಂಡ ಕವನ್ ಗೌಡ ಪ್ರಶ್ನಿಸಿದ್ದಾರೆ.