Wednesday, April 16, 2025
Homeಸುದ್ದಿಗಳುಸಕಲೇಶಪುರ : ಅಪರಿಚಿತರ ಗುಂಡಿಗೆ ಬಲಿಯಾದ ತಂಬಲಗೇರಿಯ ಯುವಕ ಸ್ಥಳಕ್ಕೆ ಸಹಾಯಕ ಪೊಲೀಸ್ ಅಧೀಕ್ಷಕರ...

ಸಕಲೇಶಪುರ : ಅಪರಿಚಿತರ ಗುಂಡಿಗೆ ಬಲಿಯಾದ ತಂಬಲಗೇರಿಯ ಯುವಕ ಸ್ಥಳಕ್ಕೆ ಸಹಾಯಕ ಪೊಲೀಸ್ ಅಧೀಕ್ಷಕರ ಭೇಟಿ ಮುಂದುವರಿದ ತನಿಖೆ.

ಸಕಲೇಶಪುರ : ಅಪರಿಚಿತರ ಗುಂಡಿಗೆ ಬಲಿಯಾದ ತಂಬಲಗೇರಿಯ ಯುವಕ

ಸ್ಥಳಕ್ಕೆ ಸಹಾಯಕ ಪೊಲೀಸ್ ಅಧೀಕ್ಷಕರ ಭೇಟಿ ಮುಂದುವರಿದ ತನಿಖೆ.

ಸಕಲೇಶಪುರ :- ಮೀನು ಹಿಡಿಯಲು ಹೋಗಿದ್ದ ವೇಳೆ ಅಪರಿಚಿತರು ಹಾರಿಸಿದ ಗುಂಡಿಗೆ ಯುವಕನೊಬ್ಬ ಬಲಿಯಾಗಿರುವ ಘಟನೆ ತಾಲೂಕಿನ ಯಸಳೂರು ಹೋಬಳಿ ತಂಬಲಗೇರಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ತಂಬಲಗೇರಿಯ ನವೀನ್ ಅಲಿಯಾಸ್ ಪಚ್ಚಿ (39) ಎಂಬಾತನೇ ಅಪರಿಚಿತರ ಗುಂಡಿಗೆ ಬಲಿಯಾದ ಯುವಕನಾಗಿದ್ದು, ಒಟ್ಟು ನಾಲ್ವರು ಸ್ನೇಹಿತರ ಜೊತೆಗೂಡಿ ಹೇಮಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದರು.

ಇದೇ ವೇಳೆ ಅಪರಿಚಿತರ ಗುಂಡಿಗೆ ದಯಾನಂದ ಹಾಗೂ ಪದ್ಮನಾಭ ಎಂಬುವರಿಗೂ ಗುಂಡು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗಿದ್ದ ಮತ್ತೋರ್ವ ಯುವಕ ರಾಜಾಚಾರಿಗೆ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಹತ್ಯೆಗೀಡಾದ ಯುವಕ ನವೀನ್ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಗುರುತಿಸಿಕೊಂಡಿದ್ದ ಗ್ರಾಮಸ್ಥರ ಜೊತೆ ಸ್ನೇಹಜೀವಿಯಾಗಿದ್ದ ಎಂದು ತಿಳಿದು ಬಂದಿದ್ದು ಒಂದು ವರ್ಷದ ಹಿಂದೆ ನವೀನನ ತಂದೆ ತೀರಿ ಹೋಗಿದ್ದು ಇದೀಗ ಹೆಂಡತಿ ಹಾಗೂ ನಾಲ್ಕು ವರ್ಷದ ಪುಟ್ಟ ಮಗುವನ್ನು ಅಗಲಿದ್ದಾರೆ.

ಈ ಭಾಗದಲ್ಲಿ ಕಾಡು ಪ್ರಾಣಿಗಳಿಗೆಗಾಗಿ ಶಿಕಾರಿ ನಡೆಸುವವರ ಗುಂಡಿಗೆ ಬಲಿಯಾಗಿದ್ದಾರಾ ಅಥವಾ ಉದ್ದೇಶಪೂರ್ವಕವಾಗಿ ಹತ್ಯೆಗೀಡಾಗಿದ್ದಾರ ಎಂಬುವುದರ ಬಗ್ಗೆ ಪೊಲೀಸ್ ತನಿಕೆಯಿಂದಷ್ಟೇ ಸತ್ಯ ತಿಳಿಯಬೇಕಿದೆ.

RELATED ARTICLES
- Advertisment -spot_img

Most Popular