Sunday, November 24, 2024
Homeಸುದ್ದಿಗಳುಹೀಲಿಯಂ ಗ್ಯಾಸ್‌ ಬಳಸಿ ಸಕಲೇಶಪುರ ಮೂಲದ ಟೆಕ್ಕಿ ಬೆಂಗಳೂರಿನಲ್ಲಿ ಆತ್ಮಹತ್ಯೆ...!

ಹೀಲಿಯಂ ಗ್ಯಾಸ್‌ ಬಳಸಿ ಸಕಲೇಶಪುರ ಮೂಲದ ಟೆಕ್ಕಿ ಬೆಂಗಳೂರಿನಲ್ಲಿ ಆತ್ಮಹತ್ಯೆ…!

ಹೀಲಿಯಂ ಗ್ಯಾಸ್‌ ಬಳಸಿ ಸಕಲೇಶಪುರ ಮೂಲದ ಟೆಕ್ಕಿ ಬೆಂಗಳೂರಿನಲ್ಲಿ ಆತ್ಮಹತ್ಯೆ…!

ರಾಜಧಾನಿಯಲ್ಲಿ 22 ವರ್ಷದ ಟೆಕ್ಕಿಯೊಬ್ಬ ಹೀಲಿಯಂ ಗ್ಯಾಸ್‌ (Helium Gas) ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರತಿಷ್ಟಿತ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಯಾಗಿರುವ ಈತ, ಬಲೂನ್‌ಗೆ ತುಂಬಲು ಬಳಸುವ ಹೀಲಿಯಂ ಗ್ಯಾಸ್ ಮೂಲಕ ಜೀವ ತೆಗೆದುಕೊಂಡಿದ್ದಾನೆ.ಸಕಲೇಶಪುರ ಮೂಲದ 22 ವರ್ಷದ ಯಾಜ್ಙಿಕ್ ಮೃತಪಟ್ಟ ಟೆಕ್ಕಿ. ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಘಟನೆ ನಡೆದಿದೆ. ಕಳೆದ ಕೆಲವು ತಿಂಗಳುಗಳಿಂದ ವರ್ಕ್ ಫ್ರಂ ಹೋಂನಲ್ಲಿದ್ದ ಟೆಕ್ಕಿ ಯಾಜ್ಙಿಕ್, ಎಂಟೆಕ್ ಎಕ್ಸಾಂ ಬರೆಯುವ ಸಲುವಾಗಿ ಬೆಂಗಳೂರಿಗೆ ಬಂದಿದ್ದ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ಹೋಟೆಲ್‌ನಲ್ಲಿ ಆಗಸ್ಟ್ 16ರಂದು ರೂಂ ಬುಕ್ ಮಾಡಿದ್ದ. ನಿನ್ನೆ ದೊಡ್ಡ ಬ್ಯಾಗ್ ತೆಗೆದುಕೊಂಡು ಪೀಣ್ಯ ಕಡೆ ತೆರಳಿದ್ದಾನೆ.

ಪೀಣ್ಯದಲ್ಲಿ ಹೀಲಿಯಂ ಗ್ಯಾಸ್ ಖರೀದಿ ಮಾಡಿ ಲಾಡ್ಜ್‌ಗೆ ತಂದಿದ್ದಾನೆ. ಕಳೆದ ರಾತ್ರಿ ಲಾಡ್ಜ್‌ನ ಕೋಣೆಯಲ್ಲಿ ಪ್ಲಾಸ್ಟಿಕ್ ಕವರ್‌ಗೆ ಹೀಲಿಯಂ ಗ್ಯಾಸ್ ತುಂಬಿಸಿದ್ದಾನೆ. ಕವರ್ ಮೂಲಕ ಹೀಲಿಯಂ ಗ್ಯಾಸ್ ಇನ್‌ಹೇಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಯಾಜ್ಙಿಕ್ ಮೃತದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ರವಾನಿಸಿದ್ದಾರೆ.

RELATED ARTICLES
- Advertisment -spot_img

Most Popular