ಆಹಾರಕ್ಕಾಗಿ ಮನೆಯ ಮೇಲೆ ಒಂಟಿ ಸಲಗ ದಾಳಿ
ಸಕಲೇಶಪುರ : ಕಾಡಾನೆಯೊಂದು ಮನೆಯ ಶೀಟ್ ಧ್ವಂಸಗೊಳಿಸಿ ಹಂಚುಗಳನ್ನು ಪುಡಿ ಮಾಡಿರುವ ಘಟನೆ ತಾಲೂಕಿನ ಹೆತ್ತೂರು ಹೋಬಳಿ ಹಾಡ್ಲಳ್ಳಿ ಯಲ್ಲಿ ನೆಡೆದಿದೆ.
ಕಳೆದ ರಾತ್ರಿ 9 ಗಂಟೆ ಸಮಯದಲ್ಲಿ ಗ್ರಾಮದ ಪುಟ್ಟರಾಜು ಎಂಬುವವರ ಕಾಡಾನೆ ದಾಳಿ ನೆಡೆಸಿದೆ ಕಾಡಾನೆ ದಾಳಿಯಿಂದ ಭಯಭೀತರಾಗಿರುವ ವೆಂಕಟೇಶ್ ಕುಟುಂಬ ಕಾಡಾನೆ ದಾಳಿಯಿಂದ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಕೆಲವು ತಿಂಗಳಿಂದ ಹೆತ್ತೂರು ಹೋಬಳಿ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿದ್ದು ಭತ್ತ, ಕಾಫಿ ಬೆಳೆಗಳನ್ನು ನಾಶಪಡಿಸಿದ್ದು ಇದೀಗ ಆಹಾರಕ್ಕಾಗಿ ಮನೆಗಳ ಮೇಲೆ ದಾಳಿ
ನಡೆಸಲು ಮುಂದಾಗುತ್ತಿರುವುದು ಆತಂಕದ ಬೆಳವಣಿಗೆಯಾಗಿದ್ದು ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಕಾಡಾನೆಗಳನ್ನು ಸ್ಥಳಾಂತರಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.