Saturday, April 12, 2025
Homeಸುದ್ದಿಗಳುಪಾರ್ವತಮ್ಮ ಬೆಟ್ಟಕ್ಕೆ ಸೇರಿದ ಬೃಹತ್ ಗಾತ್ರದ ಪಾರ್ವತಮ್ಮ ದೇವಿಯ ಪ್ರತಿಮೆ

ಪಾರ್ವತಮ್ಮ ಬೆಟ್ಟಕ್ಕೆ ಸೇರಿದ ಬೃಹತ್ ಗಾತ್ರದ ಪಾರ್ವತಮ್ಮ ದೇವಿಯ ಪ್ರತಿಮೆ

 

ಆಲೂರು: ತಾಲೂಕಿನ ಕೆ. ಹೊಸಕೋಟೆ ಹೋಬಳಿಗೆ ಸೇರಿದ ಇತಿಹಾಸ ಪ್ರಸಿದ್ಧ ಪಾರ್ವತಮ್ಮ ದೇವಿಯ 6 ಅಡಿ ಎತ್ತರದ ನೂತನ ವಿಗ್ರಹ ಮೂರ್ತಿಯನ್ನು ಭಾನುವಾರ ಬೆಟ್ಟದ ಮೇಲಿರುವ ದೇವಾಲಯಕ್ಕೆ ಎರಡು ಟ್ರ್ಯಾಕ್ಟರ್ ಗಳ  ಮೂಲಕ ಕೊಂಡೊಯ್ಯಲಾಯಿತು.

 

ಕಳೆದ ನಾಲ್ಕು ವರ್ಷಗಳ ಹಿಂದೆ  ಕಿರಿಗೆಡಿಗಳು ನಿಧಿ ಆಸೆಗಾಗಿ  ಪಾರ್ವತಮ್ಮ ಬೆಟ್ಟದ ಸುತ್ತಲೂ ಹೊಂಚುಹಾಕಿ ನಂತರ ತಡರಾತ್ರಿ ದೇವಾಲಯದ ಒಳಗಡೆ ನುಗ್ಗಿ ದೊಡ್ಡ ದೊಡ್ಡ ಗುಂಡಿಗಳನ್ನ ತೋಡಿ ನಿಧಿಗಾಗಿ ಹುಡುಕಾಟ ನಡೆಸಿದ್ದರು. ನಿಧಿ ಸಿಗದೇ ಇದ್ದಾಗ ದೇವಿಯ ವಿಗ್ರಹವನ್ನು ವಿರೂಪಗೊಳಿಸಿ ಅಲ್ಲಿಂದ ಪರಾರಿಯಾಗಿದ್ದರು.ನಂತರ  ದೇವಾಲಯ ಸಮಿತಿಯವರು ಏನಾದರೂ ಮಾಡಿ ದೇವಿಯ  ವಿಗ್ರಹವನ್ನು ಮಾಡಿಸಲೇಬೇಕೆಂದು ನಿರ್ಧರಿಸಿ ಮೈಸೂರುನಲ್ಲಿ ಸುಮಾರು ನಾಲ್ಕು ಲಕ್ಷ ರೂಗಳ ವೆಚ್ಚದಲ್ಲಿ  ದೇವಿಯ ನೂತನ ವಿಗ್ರಹವನ್ನು

ಮಾಡಿಸಿ ಭಾನುವಾರ ಅದನ್ನ ಬೆಟ್ಟದ ಮೇಲಿರುವ ದೇವಾಲಯಕ್ಕೆ ಎರಡು ಟ್ರ್ಯಾಕ್ಟರ್ ಮೂಲಕ ಕೊಂಡೊಯ್ಯಲಾಯಿತು. ಫೆಬ್ರುವರಿ ತಿಂಗಳಲ್ಲಿ ದೇವಿಯ ಜಾತ್ರೆ ಇರುವುದರಿಂದ ಅಂದು ದೇವಿಯ ವಿಗ್ರಹವನ್ನು ಪುನರ್ ಪ್ರತಿಷ್ಠಾಪಿಸಿ ಪೂಜಿಸಲಾಗುವುದು ಎಂದು ತಿಳಿದು ಬಂದಿದೆ.

 

ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ನಂಜಪ್ಪ ಗೌಡ, ಉಪಾಧ್ಯಕ್ಷ ಕಿರಣ್, ಗ್ರಾಮದ ಹಿರಿಯ ಮುಖಂಡರಾದ ಪೂವಯ್ಯ,ಚಂದ್ರಕಾಂತ್ ಅಬ್ಬನ, ಕುಮಾರ್ ಎ ಎಲ್, ಚಂದ್ರಶೇಖರ ಮಲಗಳಲೆ, ಪರಮೇಶ ಆನೆಗಳಲೆ ದೊಡ್ಡಪ್ಪಣ್ಣ, ಪೂವಯ್ಯ ಇನ್ನೂ ಮುಂತಾದ ಅನೇಕ ಗ್ರಾಮಸ್ಥರು ಹಾಜರಿದ್ದರು.

RELATED ARTICLES
- Advertisment -spot_img

Most Popular