ಸಕಲೇಶಪುರ: ತಾಲೂಕಿನ ಮಠಸಾಗರ ಕಾಫಿ ಮಂಡಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಜಿಂಕೆಯೊಂದಕ್ಕೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ಜಿಂಕೆಗೆ ಸುಮಾರು 8 ವರ್ಷ ವಯಸ್ಸೆಂದು ಅಂದಾಜಿಸಲಾಗಿದ್ದು, ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಜಿಂಕೆಗೆ ತೀವ್ರ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಸ್ಥಳದಲ್ಲೆ ನೋವು ತಡೆಯಲಾರದೆ ನರಳಾಡುತ್ತಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ಶಿಲ್ಪ ಹಾಗೂ ಅರಣ್ಯಾಧಿಕಾರಿ ಮಹಾದೇವ್ ಗಾಯಗೊಂಡ ಜಿಂಕೆಗೆ ಸ್ಥಳದಲ್ಲೆ ತಾತ್ಕಾಲಿಕವಾಗಿ ಪಟ್ಟಣದ ಪಶುವೈದ್ಯ ನವೀನ್ ರವರಿಂದ ಚಿಕಿತ್ಸೆ ಕೊಡಿಸಿ ನಂತರ ಪಟ್ಟಣದ ಪಶು ವೈದ್ಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲು ಮುಂದಾಗಿದ್ದರು. ಆದರೆ ಚಿಕಿತ್ಸೆ ಲಕಾರಿಯಾಗದೆ ಜಿಂಕೆ ಸ್ಥಳದಲ್ಲೆ ಮೃತಪಟ್ಟಿದೆ. ರಾಷ್ಟ್ರೀಯ ಹೆದ್ದಾರಿ 75 ಮಠಸಾಗರ ಸಮೀಪ ಜಿಂಕೆಗಳ ತಿರುಗಾಟ ಸಾಮಾನ್ಯವಾಗಿದ್ದು ಜಿಂಕೆಗಳು ಹೆದ್ದಾರಿ ದಾಟುವಾಗ ನಿರಂತರವಾಗಿ ಅಪಘಾತಕ್ಕೆ ಈಡಾಗುವುದು ಸಾಮಾನ್ಯವಾಗಿದೆ. ಜಿಂಕೆಗಳು ಓಡಾಡುವ ಕುರಿತು ಕನಿಷ್ಠ ಇಲ್ಲಿ ಲಕಗಳನ್ನು ಹಾಕದ ಕಾರಣ ಈ ರೀತಿಯ ಘಟನೆಗಳು ನಡೆಯುವುದು ಸಾಮಾನ್ಯವಾಗಿದೆ.