ಆಲೂರು : ಹೃದಯಾಘಾತಕ್ಕೆ ಬಲಿಯಾಗುವ ಹದಿಹರೆಯದವರು ಪ್ರಕರಣಗಳು ಆತಂಕ ಮೂಡಿಸಿರುವಾಗಲೇ ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ಹನ್ನೊಂದು ವರ್ಷದ ಬಾಲಕನೊಬ್ಬ ಹಾರ್ಟ್ ಅಟ್ಯಾಕ್ ನಿಂದ ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಕಾವ್ಯಶ್ರೀ ಎಂಬವರ ಪುತ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಸಚಿನ್ (11) ಮೃತಪಟ್ಟ ಬಾಲಕ.
ನಿನ್ನೆ ಇದ್ದಕ್ಕಿದ್ದಂತೆ ಸಚಿನ್ ಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಲೆಗೆ ಹೋಗದೇ ಮನೆಯಲ್ಲೆ ಟಿವಿ ವೀಕ್ಷಿಸುತ್ತಿದ್ದ.ವೇಳೆ ತೀವ್ರವಾಗಿಕಾಣಿಸಿಕೊಂಡು ಅಲ್ಲಿಯೇಮೃತಪಟ್ಟಿದ್ದಾನೆ.
ಸ್ವಲ್ಪ ಸಮಯದ ನಂತರ ಸಚಿನ್‌ನನ್ನು ಮಾತನಾಡಿಸಲು ಬಂದ ಮನೆಯವರು ಆತ ಮಾತನಾಡದೆ ಇರುವುದನ್ನ ಗಮನಿಸಿ ತಕ್ಷಣವೇ ಆಲೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಬಾಲಕ ಪಡಿಸಿದರು. ಮೃತಪಟ್ಟಿರುವುದನ್ನು ದೃಢ
ಮಗನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಚಿಕ್ಕವಯಸ್ಸಿನಲ್ಲೇ ಮುಗಿಲುಮುಟ್ಟಿದ್ದು ಬಾಲಕ ಹೃದಯಾಘಾತಕ್ಕೆ ಬಲಿಯಾದ ಘಟನೆ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಮೃತ ಬಾಲಕನ ಮನೆಗೆ ಭೇಟಿ ನೀಡಿದ ಶಾಸಕ ಸಿಮೆಂಟ್ ಮಂಜು ಕುಟುಂಬಕ್ಕೆ ಸಾಂತ್ವನ ಹೇಳಿ ಬಾಳಿ ಬದುಕಬೇಕಾದ ಚಿಕ್ಕ ಬಾಲಕನ ಸಾವಿನ ಘಟನೆಯನ್ನು ನೆನೆದು ಶಾಸಕರು ಕಣ್ಣೀರಿಟ್ಟರು.