Friday, April 18, 2025
Homeಅಂಕಣಬಿಟ್ಟು ಹೋದಿರಲ್ಲ ನಾನು ನಿಮ್ಮ ಹಿಂಬಾಲಿಸಿ ಬಂದೇ ಬಿಟ್ಟೆ,; ದಿ. ದ್ರುವ ನಾರಾಯಣ್ ಪತ್ನಿ...

ಬಿಟ್ಟು ಹೋದಿರಲ್ಲ ನಾನು ನಿಮ್ಮ ಹಿಂಬಾಲಿಸಿ ಬಂದೇ ಬಿಟ್ಟೆ,; ದಿ. ದ್ರುವ ನಾರಾಯಣ್ ಪತ್ನಿ ಸಾವಿಗೆ ಕಂಬನಿ‌ ಮಿಡಿದ ಯಡೇಹಳ್ಳಿ ಆರ್ ಮಂಜುನಾಥ್

ಬಿಟ್ಟು ಹೋದಿರಲ್ಲ ನಾನು ನಿಮ್ಮ ಹಿಂಬಾಲಿಸಿ ಬಂದೇ ಬಿಟ್ಟೆ..

ಗಂಡು ಹೆಣ್ಣು ಸಪ್ತಪದಿ ತುಳಿಯುವಾಗ ಇಬ್ಬರು ಒಬ್ಬರಿಗೊಬ್ಬರು ತಾನು ಸಾಯುವತನಕ ಜೊತೆಯಾಗಿರುತ್ತೇವೆ, ಒಬ್ಬರಿಗೊಬ್ಬರು ಆಸರೆಯಾಗಿರುತ್ತೇವೆ ಎಂಬ ಮಾತಿನ ಮೇಲೆ ನಿಂತು ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿಯುತ್ತಾರೆ. ವಿವಾಹವಾಗಿ ಜೊತೆಯಾಗಿ ಬಾಳಿ, ಮಕ್ಕಳು, ಮೊಮ್ಮಕ್ಕಳನ್ನು ಕಂಡು, ಸಿಹಿ ಕಹಿ, ನೋವು ಕಷ್ಟ ಸವಾಲುಗಳನ್ನು ಒಟ್ಟಿಗೇ ಎದುರಿಸಿ.. ಹಿಂದೆ ಮುಂದೆ ಒಟ್ಟಿಗೇ ಸ್ವರ್ಗಸ್ಥರಾಗುವುದೆಂದರೆ ಸುಮ್ಮನೆಯಾ ? ಎಲ್ಲೋ ಒಂದಷ್ಟು ಜೋಡಿಗಳಷ್ಟೇ ಈ ಪುಣ್ಯ ಮಾಡಿರುತ್ತಾರೆ.
ಅದರಂತೆ ಕಾಂಗ್ರೆಸ್ ಮುಖಂಡರು ನಮ್ಮೆಲ್ಲರಿಗೂ ಆದರ್ಶವಾದ ದ್ರುವ ನಾರಾಯಣ್ ಆಗಲಿ ಕೇವಲ 25 ದಿನವಾಗಿತ್ತು, ಮೊದಲೇ ಅನಾರೋಗ್ಯ ಪೀಡಿತರಾಗಿದ್ದ ವೀಣಾರವರು ( 55) ಪತಿ ಅಗಲಿದ ಕಾರಣ ತೀವ್ರವಾಗಿ ನೊಂದಿದ್ದರು.ನನ್ನ ಗಂಡ ಸತ್ತ ಮೇಲೆ ನಾನ್ಯಾಕೆ ಇರಲಿ ಎಂದು ಮನದಲ್ಲೇ ದುಃಖ ಪಟ್ಟಿ ಕೊನೆಗೆ ನೋವಿನಲ್ಲೇ ವೀಣಾ ಕೊನೆಯುಸಿರೆಳೆದಿದ್ದಾರೆ.ಸಾವಿನಲ್ಲೂ ಪತಿಯನ್ನೇ ಹಿಂಬಾಲಿಸಿದ ವೀಣಾ ಸಾವಿಗೆ ನನ್ನ ಎದೆಯ ಕಂಬನಿ‌ ಮಿಡಿದಿದೆ.

ಯಡೇಹಳ್ಳಿ”ಆರ್”ಮಂಜುನಾಥ್
ಕೆಪಿಸಿಸಿ ಸದಸ್ಯರು ಸಕಲೇಶಪುರ.

RELATED ARTICLES
- Advertisment -spot_img

Most Popular