Sunday, November 24, 2024
Homeಸುದ್ದಿಗಳುಸಕಲೇಶಪುರಚುನಾವಣೆಯ ಭದ್ರತೆಗಾಗಿ ಬಂದ ಪ್ಯಾರಾ ಮಿಲಿಟರಿ ಪಡೆ, ಪೊಲೀಸರ ಪಥ ಸಂಚಲನ; ಹೂವಿನ ಮಳೆಗರೆದು ಸ್ವಾಗತಿಸಿದ...

ಚುನಾವಣೆಯ ಭದ್ರತೆಗಾಗಿ ಬಂದ ಪ್ಯಾರಾ ಮಿಲಿಟರಿ ಪಡೆ, ಪೊಲೀಸರ ಪಥ ಸಂಚಲನ; ಹೂವಿನ ಮಳೆಗರೆದು ಸ್ವಾಗತಿಸಿದ ಜನ

ಚುನಾವಣೆಯ ಭದ್ರತೆಗಾಗಿ ಬಂದ ಪ್ಯಾರಾ ಮಿಲಿಟರಿ ಪಡೆ, ಪೊಲೀಸರ ಪಥ ಸಂಚಲನ; ಹೂವಿನ ಮಳೆಗರೆದು ಸ್ವಾಗತಿಸಿದ ಜನ

ಸಕಲೇಶಪುರ : ಮೇ 10ರಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಿಗದಿಯಾಗಿದೆ. ವ್ಯವಸ್ಥಿತ ಹಾಗೂ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗವು ಬಿಗಿ ಭದ್ರತೆಗಾಗಿ ಪ್ಯಾರಾ ಮಿಲಿಟರಿ ತುಕಡಿಗಳು, ಪೊಲೀಸರು, ಹೋಂ ಗಾರ್ಡ್‌ಗಳನ್ನು ಬಳಸಿಕೊಳ್ಳಲು ಸಿದ್ದತೆ ಮಾಡಿಕೊಂಡಿದೆ. ಚುನಾವಣೆಯ ಭದ್ರತೆಗಾಗಿ ಬಂದಿರುವ ಸಿಬ್ಬಂದಿಯನ್ನು ನಗರದ ಜನತೆ ಅದ್ದೂರಿಯಾಗಿ ಸ್ವಾಗತಿಸಿದರು. ಹೂವಿನ ಮಳೆಗೆರೆದು. ಸಿಬ್ಬಂದಿಗೆ ಗೌರವ ಪೂರ್ವಕವಾಗಿ ಕೈ‌ ಮುಗಿದು ಸ್ವಾಗತಿಸಿದರು.

ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿಯಲ್ಲಿ ತೊಡಗಿದ್ದರೆ. ಪ್ರಜಾತಂತ್ರದ ಹಬ್ಬವನ್ನು ಸುಗಮ, ಶಾಂತಿಯುತವಾಗಿ ನಡೆಸಲು ಚುನಾವಣಾ ಆಯೋಗವು ಸಹ ಸಿದ್ದತೆ ಮಾಡಿಕೊಂಡಿದೆ. ಚುನಾವಣೆಯಲ್ಲಿ ಭದ್ರತೆಗಾಗಿ ಪ್ಯಾರಾ ಮಿಲಿಟರಿ ತುಕಡಿಗಳು ಅಣೆಯಾಗಿವೆ.

ತಲಾ 48 ಜನರನ್ನು ಹೊಂದಿರುವ ಮೂರು ಪ್ಯಾರಾ ಮಿಲಿಟರಿ ಪಡೆಗಳು ಈಗಾಗಲೇ ಪಟ್ಟಣಕ್ಕೆ ಬಂದಿವೆ. ಇದೇ ತಂಡದೊಂದಿಗೆ ಕೆಎಸ್‌ಆರ್‌ಪಿ, ಡಿಆರ್, ಸಿವಿಲ್ ಪೊಲೀಸರು ಸಹ ಗುರುವಾರ ನಗರದಲ್ಲಿ ಪಥ ಸಂಚಲನ ಮಾಡಿದರು. ನೂರಾರು ಭದ್ರತಾ ಸಿಬ್ಬಂದಿ ಸಶಸ್ತ್ರಗಳೊಂದಿಗೆ ಪ್ರಮುಖ ಬೀದಿಯಲ್ಲಿ ಸಂಚರಿಸಿದರು. ಗ್ರಾಮಾಂತರ ಪೊಲೀಸ್ ಠಾಣೆಯಿಂದ ಆರಂಭವಾದ ಪಥ ಸಂಚಲನವು ಚಂಪಕನಗರ ವೃತ್ತ, ಹೊಸ ಬಸ್ ನಿಲ್ದಾಣ , ಅಜಾದ್ ರಸ್ತೆ , ಅಶೋಕ್ ರಸ್ತೆ ಮೂಲಕ ಕುಶಾಲನಗರದವರೆಗೂ ನಡೆಯಿತು‌.

ಬಿ. ಎಂ ರಸ್ತೆಯ ಹಳೆ ಬಸ್ ನಿಲ್ದಾಣ ಸಮೀಪ ರಸ್ತೆಯಲ್ಲಿ ಜನರು ಹೂವುಗಳನ್ನು ಭದ್ರತ ಸಿಬ್ಬಂದಿಗಳ ಮೇಲೆ ಎಸೆದು ಸ್ವಾಗತಿಸಿದರು. ಕೆಲವರು ಅವರಿಗೆ ಗೌರವ ಪೂರ್ವಕವಾಗಿ ಕೈ ಮುಗಿದರೆ, ಮಕ್ಕಳು ಕೈಕುಲುಕಿ ಸ್ವಾಗತಿಸಿದರು. ಪಥ ಸಂಚಲನದಲ್ಲಿ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್,ಸಹಾಯಕ ಪೊಲೀಸ್ ಅಧೀಕ್ಷಕ ಎಚ್. ಎನ್ ಮಿಥುನ್, ವೃತ್ತ ನಿರೀಕ್ಷಕರಾದ ಚೈತನ್ಯ, ಪಿ. ಕೆ ರಾಜು, ಪಿಎಸ್ಐ ಗಳಾದ ಬಸವರಾಜ್, ನವೀನ್, ಇದ್ದರು.

RELATED ARTICLES
- Advertisment -spot_img

Most Popular