Sunday, April 20, 2025
Homeಸುದ್ದಿಗಳುಸಕಲೇಶಪುರಗೊಂದಲ ಸೃಷ್ಠಿ ಉಂಟು ಮಾಡಿದ ಬಿಜೆಪಿ ಟಿಕೇಟ್ ಅಕಾಂಕ್ಷಿಗಳ ಮೊದಲ ಪಟ್ಟಿ

ಗೊಂದಲ ಸೃಷ್ಠಿ ಉಂಟು ಮಾಡಿದ ಬಿಜೆಪಿ ಟಿಕೇಟ್ ಅಕಾಂಕ್ಷಿಗಳ ಮೊದಲ ಪಟ್ಟಿ

ಸಕಲೇಶಪುರ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆಯೆಂದು ನಕಲಿ ಪಟ್ಟಿಯೊಂದನ್ನು ಎಲ್ಲೆಡೆ ಕೆಲವರು ಬಿಟ್ಟಿದ್ದರಿಂದ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು. ಪಟ್ಟಿಯಲ್ಲಿ ಕಳೆದ ಬಾರಿಯ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನಾರ್ವೆ ಸೋಮಶೇಖರ್ ರವರ ಹೆಸರು ಸಕಲೇಶಪುರ ವಿಧಾನಸಭಾ ಕ್ಷೇತ್ರಕ್ಕೆಯಿದ್ದಿದ್ದರಿಂದ ಅವರ ಅಭಿಮಾನಿಗಳಲ್ಲಿ ಸಂತೋಷ ಉಂಟು ಮಾಡಿದರೆ ಮತೋರ್ವ ಪ್ರಬಲ ಟಿಕೇಟ್ ಅಕಾಂಕ್ಷಿ ಸಿಮೆಂಟ್ ಮಂಜುನಾಥ್ ಅಭಿಮಾನಿಗಳು ತುಸು ಆತಂಕಕ್ಕೆ ಈಡಾಗಿದ್ದರು. ಅಂತಿಮವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದು ನಕಲಿ ಪಟ್ಟಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರಿಂದ ಇದು ಸೋಮಶೇಖರ್ ಅಭಿಮಾನಿಗಳಿಗೆ ಬೇಸರ ತಂದರೆ ಸಿಮೆಂಟ್ ಮಂಜುನಾಥ್ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಒಟ್ಟಾರೆಯಾಗಿ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಪಡೆಯಲು ನಾರ್ವೆ ಸೋಮಶೇಖರ್ ಹಾಗೂ ಸಿಮೆಂಟ್ ಮಂಜುನಾಥ್ ನಡುವೆ ನೇರಾ ಹಣಾಹಣಿ ನಡೆಯುತ್ತಿದ್ದು ಟಿಕೇಟ್ ಯಾರಿಗೆ ನೀಡುತ್ತಾರೆಂಬುದನ್ನು ಇನ್ನು ನಾಲ್ಕುದಿನಗಳ ಕಾಲ ಕಾದು ನೋಡಬೇಕಾಗಿದೆ.

RELATED ARTICLES
- Advertisment -spot_img

Most Popular