ಸಕಲೇಶಪುರ : ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಸರ್ಕಾರ ಹಲವು ಯೋಜನೆ ಹಮ್ಮಿಕೊಂಡಿದೆ. ಇದರಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲಾ ಮಕ್ಕಳಿಗೆ 24.000 ಬೆಲೆ ಬಾಳುವ ಟ್ಯಾಬ್ ವಿತರಿಸುವ ಕಾರ್ಯಕ್ರಮ ಒಂದಾಗಿದೆ ಎಂದು ಶಾಸಕ ಎಚ್. ಕೆ ಕುಮಾರಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶರಾದ ಆದಿತ್ಯ, ಹರೀಶ್, ಕಾರ್ಮಿಕ ಇಲಾಖೆಯ ಜೈರಾಮ್, ಹಲಸುಲಿಗೆ ಗ್ರಾಪಂ ಮಾಜಿ ಅಧ್ಯಕ್ಷೆ ಲೀಲಾ ಇನ್ನಿತರರು ಇದ್ದರು