ರಾಜ್ಯ ಬಿಜೆಪಿ ಸರ್ಕಾರದ ತಾರತಮ್ಯ ನೀತಿಯ ವಿರುದ್ಧ ಅಸಮಾಧಾನ ಹೊರ ಹಾಕಿದ ಶಾಸಕ-ಎಚ್.ಕೆ. ಕೆ
ಸಕಲೇಶಪುರ : ಬಿಜೆಪಿ ಪಕ್ಷದಿಂದ ಆಯ್ಕೆಯಾಗಿರುವ ಶಾಸಕರ ಕ್ಷೇತ್ರಕ್ಕೆ ಮಾತ್ರ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ನಿಯಮನುಸಾರ ನೀಡದೆ ಮೊಟಕುಗೊಳಿಸುತ್ತಿರುವ ರಾಜ್ಯ ಸರಕಾರದ ಕ್ರಮ ಖಂಡನಿಯ ಎಂದು ಶಾಸಕ ಎಚ್ ಕೆ ಕುಮಾರಸ್ವಾಮಿ ಹೇಳಿದರು.
ಪಟ್ಟಣ ಸಮೀಪದ ಅನೇಮಹಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೌಡಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ತಾಲೂಕಿನಲ್ಲಿ ಸುಮಾರು 93 ಲಕ್ಷದಲ್ಲಿ ಕ್ಷೇತ್ರದ ವಿವಿಧ ಭಾಗದಲ್ಲಿ ಮಳೆ ಹಾನಿ ಅನುದಾನದಲ್ಲಿ ರಸ್ತೆ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. ಕಳೆದ ಹಲವು ವರ್ಷಗಳಿಂದ ಮಲೆನಾಡು ಭಾಗಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿದರು ಸಹ ಸರಕಾರ ಜಾಣ ಕುರುಡುತನವನ್ನು ತೋರ್ಪಡಿಸುತ್ತಿದೆ ಸುಮಾರು ಕಳೆದ ಬಾರಿ ಬಿದ್ದ ಭಾರಿ ಮಳೆಗೆ ಸುಮಾರು 321 ಕೋಟಿ ಅಧಿಕ ನಷ್ಟ ಉಂಟಾಗಿದೆ ಅಷ್ಟು ಹಣವನ್ನು ನೀಡಲು ಮನವಿ ಮಾಡಿದ್ದೆ ಎಂದರು. ಆದರೆ ಸರಕಾರ ಕೇವಲ ಆರು ಕೋಟಿ ಅನುದಾನವನ್ನು ಮಾತ್ರ ಬಿಡುಗಡೆ ಮಾಡಿದೆ ಎಂದು ಹೇಳಿದರು ಆಡಳಿತ ನಡೆಸುತ್ತಿರುವ ಡಬಲ್ ಇಂಜಿನ್ ಸರಕಾರದ ಸಚಿವರು ಹೇಳಿದಂತೆ ಕೇವಲ ಬಿಜೆಪಿಯಿಂದ ಆಯ್ಕೆಯಾಗಿರುವ ಶಾಸಕರ ಕ್ಷೇತ್ರಕ್ಕೆ ಮಾತ್ರ ಬಾರಿ ಮೊತ್ತದ ಅನುದಾನವನ್ನು ನೀಡುತ್ತಿದೆ, ಬಿಜೆಪಿಯೇತರ ಶಾಸಕರಿರುವ ಕ್ಷೇತ್ರಕ್ಕೆ ಕನಿಷ್ಠ ಮಟ್ಟದ ಶಾಸಕರ ಅನುದಾನವನ್ನು ಸಹ ನೀಡಿರುವುದಿಲ್ಲ ಎಂದು ಹೇಳಿದರು. ನನ್ನ ಅವಧಿಯಲ್ಲಿ ಸುಮಾರು ರಸ್ತೆ ಕಾಮಗಾರಿಗಳನ್ನು ಕೈಗೊತ್ತಿಕೊಂಡಿದ್ದೇನೆ ಆದರೂ ಸಹ ಇನ್ನೂ ಕೆಲವು ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದರು. ಡಬಲ್ ಇಂಜಿನ್ ಸರಕಾರ ಮಾಡುತ್ತಿರುವ ತಾರತಮ್ಯವನ್ನು ರಾಜ್ಯದ ಜನರು ನೋಡುತ್ತಿದ್ದಾರೆ ಅವರಿಗೆ ಸೂಕ್ತ ಉತ್ತರವನ್ನು ಕೇವಲ ಎರಡು ತಿಂಗಳಲ್ಲಿ ರಾಜ್ಯದ ಜನತೆ ನೀಡುತ್ತಾರೆಂದು ಹೇಳಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಪ್ರದೀಪ್ತ ಯಜಮಾನ್,ಮಾತನಾಡಿ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮವಹಿಸಿದ್ದಾರೆ ಮುಂಬರುವ ಚುನಾವಣೆಯಲ್ಲಿ ಶಾಸಕರ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಆನೆ ಮಾಲ್ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಆನೆ ಮಹಲ್ ಹಸೈನರ್ ಕೌಡಳ್ಳಿ ತಿಮ್ಮಯ್ಯ ಪುರಸಭಾ ಅಧ್ಯಕ್ಷ ಕಾಡಪ್ಪ ಪುರಸಭಾ ಸದಸ್ಯರಾದ ಉಮೇಶ್, ಮುಖಂಡರಾದ ಅಸ್ಲಾಮ್, ಭಾಸ್ಕರ್, ಮಲ್ಲೇಶ್ ಹೆತ್ತೂರು, ಚಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು