ನಾನು ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ.ಹೆತ್ತೂರು ಗ್ರಾಪಂ ಅಧ್ಯಕ್ಷೆ ಅನುಸೂಯ ಸ್ಪಷ್ಟನೆ.
ಸಕಲೇಶಪುರ : ತಾಲೂಕಿನ ಹೆತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅಧ್ಯಕ್ಷೆ ಅನುಸೂಯ ಸ್ಪಷ್ಟನೆ ನೀಡಿದ್ದಾರೆ.
ನಾನು ಜೆಡಿಎಸ್ ಬೆಂಬಲದೊಂದಿಗೆ ಜಯಗಳಿಸಿ ಹೆತ್ತೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿದ್ದೇನೆ.ನಾನು ಗ್ರಾಪಂ ಅಧ್ಯಕ್ಷೆ ಎಂದಮೇಲೆ ಎಲ್ಲರು ನನಗೆ ಸಮಾನರು ಯಾವುದೇ ಪಕ್ಷಪಾತ ಮಾಡುವುದಿಲ್ಲ ಅದರಂತೆ ಇಲ್ಲಿನ ಒಕ್ಕಲಿಗರ ಸಮುದಾಯದ ಭವನದಲ್ಲಿ ಸನ್ಮಾನ ಏರ್ಪಡಿಸಲಾಗಿದೆ ಎಂದು ಗ್ರಾಮದ ಅಜಿತ್ ಎಂಬುವವರು ಅಹ್ವಾನಿಸಿದ್ದರು ಹಾಗಾಗಿ ನಾನು ಕಾರ್ಯಕ್ರಮಕ್ಕೆ ತೆರಳಿದ್ದೆ. ಆದರೆ ಅಲ್ಲಿಗೆ ಹೋದಮೇಲೇನೆ ತಿಳಿದಿದ್ದು ಇದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಎಂದು ತಿಳಿಯಿತು. ಒಂದೆರೆಡು ನಿಮಿಷ ಕುಳಿತು ಇನ್ನೆನು ತೆರಳುವ ಸಮಯದಲ್ಲಿ ಸಭೆಯ ವೇದಿಕೆಯಲ್ಲಿದ್ದ ಗಣ್ಯರು ಕರೆದು ವಿಶ್ ಮಾಡುವ ವೇಳೆ ನನಗೆ ಕಾಂಗ್ರೆಸ್ ಪಕ್ಷದ ಶಾಲು ಹೊಡಿಸಿದರು ದರು.ಇದರಿಂದ ನನಗೆ ತಕ್ಷಣವೆ ಮುಜುಗರ ಹಾಗೂ ಬೇಸರ ಉಂಟಾಗಿ ಅಲ್ಲಿಂದ ಹೊರಟು ಬಂದೆ.
ಈ ಘಟನೆಯಿಂದ ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರ ಮನಸ್ಸಿಗೆ ನೋವುವಾಗಿದ್ದರೆ ಕ್ಷಮಿಸಿ ಎಂದು ಇಂದು ಬೆಳಿಗ್ಗೆ ಬಿಡುಗಡೆಗೊಳಿಸಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಈ ವಿಚಾರವಾಗಿ ಕೆಲ ದಿನಗಳ ಹಿಂದೆ ಅನುಸೂಯ ರವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳ ಅಪಪ್ರಚಾರ ಮಾಡಿದವರಿಗೆ ಅಧ್ಯಕ್ಷೆ ಅನುಸೂಯ ತಿರುಗೇಟು ನೀಡಿದ್ದಾರೆ