ಮಲೆನಾಡು ರಕ್ಷಣಾ ಸೇನೆಯ ತಾಲ್ಲೂಕು ಘಟಕ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ
ಮಲೆನಾಡು ಭಾಗದ ಜ್ವಲಂತ ಸಮಸ್ಯೆಗಳಿಗೆ ಸಂಘಟನೆ ಧ್ವನಿಯಾಗಲಿದೆ – ಸಾಗರ್ ಜಾನೇಕೆರೆ.
ತಾಲೂಕು ಅಧ್ಯಕ್ಷರಾಗಿ ಸತೀಶ್ (ಬೋಲ್ಟ್ )ನೇಮಕ
ಸಕಲೇಶಪುರ : ಮಲೆನಾಡು ರಕ್ಷಣಾ ಸೇನೆಯ ಅಸ್ತಿತ್ವಕ್ಕೆ ಬಂದ ನಂತರ ಸಂಘಟನೆಯ ತಾಲ್ಲೂಕು ಘಟಕದ ರಚನೆ ಶುಕ್ರವಾರ ಸಕಲೇಶಪುರದ ಬಾಗೆ ಗ್ರಾಮದ ವಿನಾಯಕ ಸಮುದಾಯ ಭವನದಲ್ಲಿ ನೆರವೇರಿತು.
ಮಲೆನಾಡು ರಕ್ಷಣಾ ಸೇನೆಯ ಸಕಲೇಶಪುರ ತಾಲ್ಲೂಕು ಅಧ್ಯಕ್ಷರಾಗಿ ಸತೀಶ್ ಬೋಲ್ಟ್ ಮತ್ತು ಉಪಾಧ್ಯಕ್ಷರಾಗಿ ತೆಜೇಶ್ ಗೌಡ ರವರನ್ನು ನೇಮಕ ಮಾಡಲಾಯಿತು .
ನಂತರ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಾಗರ್ ಜಾನೇಕೆರೆ, ನಮ್ಮ ಸಂಘಟನೆ ವತಿಯಿಂದ ಮುಂದಿನ ದಿನಗಳಲ್ಲಿ ಕಾರ್ಯಕರ್ತರು ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸಬೇಕಿದೆ. ಮಲೆನಾಡು ಭಾಗದ ಹಳ್ಳಿಗಳಲ್ಲಿ ದಶಕಗಳಿಂದ ಬಗೆಹರಿಯದ ಹಲವಾರು ಸಮಸ್ಯೆಗಳು ಕಾಡುತ್ತಿವೆ. ಇದರ ವಿರುದ್ಧ ಸಂಘಟನೆ ಧ್ವನಿ ಆಗಬೇಕಿದೆ ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ತಮ್ಮನ್ನು ತಾವು ಸಂಘಟನೆಗೆ ತೊಡಗಿಸಿಕೊಳ್ಳಬೇಕೆಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕರು ಬಾಗೆ ಮೋಹನ್ , ಸಂಸ್ಥಾಪಕ ರಾಜ್ಯಾಧ್ಯಕ್ಷರು ಸಾಗರ್ ಜಾನೇಕೆರೆ, ರಾಜ್ಯ ಯುವ ಘಟಕದ ಅಧ್ಯಕ್ಷರು ಕೃತಿ ವರ್ಮ, ರಾಜ್ಯ ಕಾರ್ಯದರ್ಶಿ ಅಶೋಕ್, ರಾಜ್ಯ ಉಪಾಧ್ಯಕ್ಷರು ದರ್ಶನ್ ಪೂಜಾರಿ, ರಾಜ್ಯ ಕಾನೂನು ಸಲಹೆಗಾರರು ಯಶವಂತ್ , ರಾಜ್ಯ ಉಸ್ತುವಾರಿ ವಸಂತ್ ರವರು, ತಾಲ್ಲೂಕು ಅಧ್ಯಕ್ಷರು ಸತೀಶ್ ಬೋಲ್ಟ್ , ತಾಲ್ಲೂಕು ಉಪಾಧ್ಯಕ್ಷರು ತೇಜು ಸುಳ್ಳಕ್ಕಿ ಹಾಗೂ ಮಲೆನಾಡು ರಕ್ಷಣಾ ಸೇನೆಯ ಪದಾಧಿಕಾರಿಗಳು ಹಾಜರಿದ್ದರು.