ಬಾಳ್ಳುಪೇಟೆ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಧನ ಸಹಾಯ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೆರವು.
ಸಕಲೇಶಪುರ : ತಾಲೂಕಿನ ಬಾಳ್ಳುಪೇಟೆಯಲ್ಲಿರುವ ಬಾಳ್ಳುಪೇಟೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಹಕಾರ ನೀಡಲಾಯಿತು.
ಈ ವೇಳೆ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಪುರುಷೋತ್ತಮ್, ಪೂಜ್ಯ ವೀರೇಂದ್ರ ಹೆಗಡೆ ಹಾಗೂ ಹೇಮಾವತಿ ಅಮ್ಮನವರ ಮಾರ್ಗದರ್ಶನದಂತೆ ಹಲವಾರು ಗ್ರಾಮಾಭಿವೃದ್ದಿ ಕೈಗೆತ್ತಿಕೊಂಡಿದ್ದು ಶಾಲೆ, ದೇವಸ್ಥಾನಗಳ ಜೀರ್ಣೋದ್ಧಾ ಕಾರ್ಯಗಳಿಗೆ ಯೋಜನೆ ವತಿಯಿಂದ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು.
ಬಾಳ್ಳುಪೇಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಬಿ ಲೋಕೇಶ್ ಮಾತನಾಡಿ, ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಬಾಳ್ಳುಪೇಟೆ ಹಾಲು ಉತ್ಪಾದಕರ ಸಂಘದ ಕಟ್ಟದ ನಿರ್ಮಾಣ ಮಾಡುತ್ತಿದ್ದು, ಇದುವರೆಗೂ ಕೆ. ಎಂ. ಎಫ್ ಹಾಗೂ ಶಾಸಕರ ಅನುದಾನದಲ್ಲಿ ಧನ ಸಹಾಯ ನೀಡಿದ್ದು ಇದೀಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 2 ಲಕ್ಷ ರೂಪಾಯಿ ನೆರವು ನೀಡಿದ್ದಾರೆ ಎಂದು ತಿಳಿಸಿದರು.
ಮಾಜಿ ಅಧ್ಯಕ್ಷ ನಂಜಪ್ಪ ತಾಲ್ಲೂಕು ಯೋಜನಾಧಿಕಾರಿ ಪುರುಷೋತ್ತಮ್, ಮೈಸೂರು ಆರ್.ಒ ಕಚೇರಿಯ ಯೋಜನಾಧಿಕಾರಿ ಸಂಜೀವ್ ನಾಯ್ಕ್, ಬಾಳ್ಳುಪೇಟೆ ವಲಯದ ಮೇಲ್ವಿಚಾರಕಿ ಗೀತಾ, ಸೇವಾ ಪ್ರತಿನಿಧಿ ದೇವಕಿ ರೈ, ಸಂಘದ ಕಾರ್ಯದರ್ಶಿ ಪ್ರಕಾಶ್ ಮೆಣಸಮಕ್ಕಿ,ಸೇರಿದಂತೆ ಸಂಘದ ನಿರ್ದೇಶಕರು, ಸದಸ್ಯರು, ಗ್ರಾಮಸ್ಥರು ಇದ್ದರು.