Sunday, November 24, 2024
Homeಸುದ್ದಿಗಳುಸಕಲೇಶಪುರಸಕಲೇಶಪುರ ತಾಲೂಕಿನ‌ ಯಸಳೂರಿನಲ್ಲಿ ಗಮನ ಸೆಳೆದ ಜಾನಪದ ಉತ್ಸವ

ಸಕಲೇಶಪುರ ತಾಲೂಕಿನ‌ ಯಸಳೂರಿನಲ್ಲಿ ಗಮನ ಸೆಳೆದ ಜಾನಪದ ಉತ್ಸವ

ಸಕಲೇಶಪುರ: ದೇಶದಲ್ಲಿ ಆಹಾರ ಧಾನ್ಯಗಳನ್ನು ಬೆಳೆಯುತ್ತಿರುವ ಪ್ರಮಾಣ ಕಡಿಮೆಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.


ತಾಲೂಕಿನ ಯಸಳೂರು ಹೋಬಳಿ ಈಚಲುಬೀಡು ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು(ರಿ) ಹಾಗೂ ಮಲೆನಾಡು ಜಾನಪದ ಉತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮಲೆನಾಡು ಜಾನಪದ ಉತ್ಸವದಲ್ಲಿ ಮೆರವಣಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ದೇಶದಲ್ಲಿ ಆಹಾರ ಪದಾರ್ಥಗಳನ್ನು ಬೆಳೆಯುವ ಪ್ರಮಾಣ ಕಡಿಮೆಯಾಗುತ್ತಿದೆ. ಇದೇ ಪರಿಸ್ಥಿತಿ ಮುಮದುವರಿದರೆ ದೇಶದಲ್ಲಿ ಆಹಾರದ ಕೊರತೆ ಎದುರಿಸಬೇಕಾಗುತ್ತದೆ. ಈಗಾಗಲೇ ಚೀನಾದಿಂದ ಪ್ಲಾಸ್ಟಿಕ್ ಅಕ್ಕಿ ಲಗ್ಗೆ ಇಡುತ್ತಿದ್ದು ಮತ್ತಷ್ಟು ಆತಂಕ ಎದುರಿಸಬೇಕಾಗಿದೆ. ರೈತರು ತಾವು ಮಾಡುವ ಕೆಲಸಗಳ ಬಗ್ಗೆ ಕೀಳರಿಮೆ ಪಡಬಾರದು. ಅದು ಅತ್ಯಂತ ಶ್ರೇಷ್ಠ ಕಾಯಕ ಎಂಬುದನ್ನು ನಂಬಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಶ್ರದ್ಧೆಯಿಂದ ಕೃಷಿ ಕೈಗೊಂಡರೆ ಯಶಸ್ಸು ಖಂಡಿತ ಸಿಕ್ಕೇ ಸಿಗುತ್ತದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಸಂಸ್ಕೃತಿ ಕಲಿಸುವ ಜಾನಪದವನ್ನು ಉಳಿಸಿದರೆ ಮಾತ್ರ ನಮ್ಮ ಮಣ್ಣಿನ ಸೊಗಡನ್ನು ಉಳಿಸಲು ಸಾಧ್ಯ. ಜನಪದ ಕಲೆ, ಸಂಸ್ಕೃತಿ ಉಳಿಸುವ ಕೆಲಸಗಳನ್ನು ಸರ್ಕಾರ ಮಾಡಬೇಕು. ಆ ಕೆಲಸವನ್ನು ಎಚ್.ಎಲ್.ನಾಗೇಗೌಡರು ಮಾಡಲು ಮುಂದಾಗಿ, ಸ್ನೇಹಿತರು ಕೊಟ್ಟ ಧನ ಸಹಾಯ ಬಳಸಿ 1979ರಲ್ಲಿ ಜಾನಪದ ಪರಿಷತ್ತು ಸ್ಥಾಪಿಸಿದ್ದರು. ಇಂತಹ ಮನಸ್ಥಿತಿ ಹಳ್ಳಿ ಹಳ್ಳಿಗಳಲ್ಲೂ ಮೂಡಬೇಕು. ಶಿಸ್ತು, ಜೀವನ ಮೌಲ್ಯ, ಸಂಸ್ಕೃತಿ ಸೇರಿ ಎಲ್ಲವನ್ನೂ ಕಲಿಸುವ ನಮ್ಮ ಜನಪದ ಅಳಿವಿಲ್ಲದಂತೆ ಮುನ್ನಡೆಯಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷ್ತ ಜಿಲ್ಲಾಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ ಅವರು, ಮಲೆನಾಡಿನ ಉಡುಗೆ, ಆಹಾರ ಪದ್ದತಿ ಕಣ್ಮರೆಯಾಗಿದೆ. ಸುಗ್ಗಿ ಕುಣಿತ, ಕುಣಿಮಿಣಿ ವಾದ್ಯ ಸೇರಿದಂತೆ ಮಲೆನಾಡಿನ ಸಂಸ್ಕ್ಥತಿ ನಿಧಾನಕ್ಕೆ ಕಣ್ಣಿಗೆ ಕಾಣದಾಗುತ್ತಿದೆ. ಮಲೆನಾಡಿನ ಸಂಸ್ಕೃತಿಗೆ ಮರುಜೀವ ಕೊಡಲು ಆಯೋಜಿಸಿದ ಮಲೆನಾಡು ಜಾನಪದ ಉತ್ಸವಕ್ಕೆ ಈ ಭಾಗದ ಜನ ನೀಡಿದ ಪೊ್ರೀತ್ಸಾಹ ಅತೀವ್ರ ಸಂತಸ ಮೂಡಿಸಿದೆ. ರಾಜ್ಯ ಮಟ್ಟದ ಸಮಾರಂಭಕ್ಕೆ ಯಾವುದೇ ಕೊರತೆ ಇಲ್ಲದಂತೆ ಏರ್ಪಾಡಾಗಿದೆ. ಮಹಿಳೆಯರು, ಯುವಕರು, ಗ್ರಾಮದ ಹಿರಿಯರು ಆಸಕ್ತಿಯಿಂದ ಹಬ್ಬದ ಸಂಭ್ರಮ ಸೃಷ್ಟಿಸಿದ್ದಾರೆ. ಇದು ಈ ಮಣ್ಣಿನ ಸೊಗಡು ಎಂಬುದನ್ನು ನಾವು ಕಂಡಿದ್ದೇವೆ ಎಂದರು.
ಮೆರವಣಿಗೆಯಲ್ಲಿ ಮೇಲೈಸಿದ ದೇಶಿ ಸೊಗಡು
ಮಲೆನಾಡು ಜಾನಪದ ಉತ್ಸವದ ಅಂಗವಾಗಿ ಆಯೋಜಿಸಿದ್ದ ಜಾನಪದ ಕಲಾ ತಂಡಗಳ ಮೆರವಣಿಗೆಗೆ ಈಚಲುಬೀಡು ಗ್ರಾಮದ ಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗಣ್ಯರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 18 ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದುಕೊಟ್ಟವು. ಮಾರ್ಗದುದ್ದಕ್ಕೂ ಮಹಿಳೆಯರು ದೊಡ್ಡ ರಂಗೋಲಿಗಳನ್ನಿರಿಸಿದ್ದರು. ಹಿರಿಯರು, ಕಿರಿಯರೆನ್ನದೇ ಜನರು ಕುಣಿದು ಕುಪ್ಪಳಿಸಿದರು. ಮೆರವಣಿಗೆಯು ವೃತ್ತದ ಬಳಿ ಆಗಮಿಸುತ್ತಿದ್ದಂತೆ ಯುವ ಸಮೂಹ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಂತ್ಯದಲ್ಲಿ ಮಹಿಳೆಯರು ಶಾಸಕ ಎಚ್..ಕೆ.ಕುಮಾರಸ್ವಾಮಿ ಹಾಗೂ ಇತರ ಗಣ್ಯರಿಗೆ ಆರತಿ ಬೆಳಗಿದರು. ವೇದಿಕೆ, ಊಟದ ವ್ಯವಸ್ಥೆ, ಪಾರ್ಕಿಂಗ್ ಎಲ್ಲವೂ ಅಚ್ಚುಕಟ್ಟಾಗಿತ್ತು.
ಮೆಚ್ಚುಗೆ ಗಳಿಸಿದ ಕಲಾ ಪ್ರದರ್ಶನಗಳು:
ರಾಜ್ಯದ ಹಲವು ಭಾಗಗಳಿಂದ ಆಗಮಿಸಿದ ಜಾನಪದ ಕಲಾ ತಂಡಗಳು ಕಲಾ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದರು. ಅತ್ತಿಗನಹಳ್ಳಿ ಸುರೇಶ್ ತಂಡದ ಸುಗ್ಗಿ ಕುಣಿತ, ಚಿಕ್ಕಲ್ಲೂರು ಕೊಮಾರಯ್ಯ ತಂಡದ ಕುಣಿಮಿಣಿ ವಾದ್ಯ, ಕೊಡಗಿನ ಉಮ್ಮತ್ತಾಟ್, ಹಾಸನದ ಟಿ.ಎಸ್ ಲಕ್ಷ್ಮಣ್ ತಂಡದ ಡೊಳ್ಳು ಕುಣಿತ, ಅರಕಲಗೂಡು ಪ್ರದೀಪ್ ವೃಂದದವರ ಕಂಸಾಳೆ ನೃತ್ಯ, ಬೀಕನಹಳ್ಳಿ ಕೆಂಪೇಗೌಡ ತಂಡದ ಕೋಲಾಟ, ಯಡಕೆರೆ ದೇವರಾಜ್ ಅವರ ತಂಬೂರಿ ಪದ, ಪನ್ನಸಮುದ್ರ ಕೊಮಾರಯ್ಯ ತಂಡದ ಚಿಟ್ಟಿಮೇಳ, ರಾಜಗೆರೆ ಶಿವಣ್ಣ ತಂಡದವರ ಕರಗ ನೃತ್ಯ, ರಾಜಗೆರೆ ಶಿವಮ್ಮ ತಂಡದ ಸೋಮನ ಕುಣಿತ, ನವೀನ್ ತಂಡದ ವೀರಗಾಸೆ, ದಾವಣಗೆರೆ ಶ್ರುತಿ ತಂಡದ ಲಂಬಾಣಿ ನೃತ್ಯ, ಪೂಜಾ ಯುವತಿ ಮಂಡಳಿಯ ಕೋಲಾಟ, ಗಂಧರ್ವ ಯುವಕ ಸಂಘದ ಗೀಗೀ ಪದ ಹಾಗೂ ಗೌಡಳ್ಳಿ ಚಂದ್ರಕಲಾ ತಂಡದವರಿಅದ ರಾಗಿ ಬೀಸುವ ಪದ ಪ್ರದಶ್ನಗೊಂಡವು. ಪ್ರತಿಭಾನ್ವಿತ ಕಲಾವಿದರು ಜನಪದ ಗೀತೆಗಳನ್ನು ಹಾಡಿದರು.
ಸಾಧಕರಿಗೆ ಸನ್ಮಾನ: ನ್ಯಾಯಾಧೀಶೆ ಪ್ರತಿಭಾ ರೈ, ಹಿರಿಯ ನಾಗರಿಕ, ಈ.ಸಿ.ಕೃಷ್ಣೇಗೌಡ, ಉದ್ಯಮಿಗಳಾದ ಮಧುಸೂಧನ್, ಎಂ.ಟಿ.ಪ್ರದೀಪ್, ಸಾಹಿತಿ ಲಾವಣ್ಯಾ ಮೋಹನ್, ಸುಗ್ಗಿ ಕುಣಿತ ಕಲಾವಿದ ಸಿ.ಕೆ.ಸುಬ್ಬೇಗೌಡ, ವೈದ್ಯ ಡಾ. ಎಂ.ಎಸ್ ರಾಮಚಂದ್ರ, ಮಾದರಿ ಕೃಷಿಕ ಕೆ.ಜಿ.ರಾಮಚಂದ್ರ, ಎಸ್.ಆರ್ ಕುಮಾರ್, ಮಾಜಿ ಸೈನಿಕ ಕಾಮನಹಳ್ಳಿ ಬೆಳ್ಳಿಗೌಡ, ರೈತ ಮುಖಂಡ ಎಚ್.ಬಿ.ರಾಮೇಗೌಡ ಅವರನ್ನು ಸನ್ಮಾನಿಸಲಾಯಿತು.
ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ ಸಂದೇಶ್, ಕಲಾವಿದ ಮೇಟಿಕೆರೆ ಹಿರಿಯಣ್ಣ, ಮಲೆನಾಡು ಜಾನಪದ ಉತ್ಸವ ಸಮಿತಿ ಅಧ್ಯಕ್ಷ ಆರ್.ಪಿ ಲಕ್ಷ್ಮಣ್, ಈಚಲಬೀಡು ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷ ದೊಡ್ಡೇಗೌಡ, ಹಿರಿಯ ವಾರ್ತಾಧಿಕಾರಿ ವಿನೋದ್ ಚಂದ್ರ, ನ್ಯಾ.ಮೂ.ಪ್ರತಿಭಾ, ಜಯಪ್ರಕಾಶ್, ನಿವೃತ್ತ ಪ್ರಾಧ್ಯಾಪಕ ಪುಟ್ಟೇಗೌಡ, ಜಿಪಂ ಮಾಜಿ ಸದಸ್ಯೆ ಉಜ್ಮಾರಿಜ್ವಿ ಸುದರ್ಶನ್, ಬೆಳ್ಳಿಗೌಡ, ಮಧುಸೂಧನ್ ಚಿನ್ನಹಳ್ಳಿ ಇತರರಿದ್ದರು. ಸನ್ನಿಧಿ, ದವಳಾ, ಗಾನಶ್ರೀ ತಂಡದಿಂದ ಪ್ರಾರ್ಥನೆ ನಡೆಯಿತು. ಕುಮಾರ್ ಕಟ್ಟೆಬೆಳಗುಲಿ ತಂಡದವರು ನಾಡಗೀತೆ ಹಾಡಿದರು. ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಆನಂದ್ ಚಿಕ್ಕುಂದೂರು ಸ್ವಾಗತಿಸಿದರು.

RELATED ARTICLES
- Advertisment -spot_img

Most Popular