ಪ್ರೀತಿಸುವಂತೆ ಕಿರುಕುಳ ಯುವತಿ ಆತ್ಮಹತ್ಯೆ
ಸಕಲೇಶಪುರ : ಪೀತಿಸುವಂತೆ ಪೀಡಿಸುತ್ತಿದ್ದ ಯುವಕನ ಕಿರುಕುಳ ತಾಳಲಾರದೆ ಯುವತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತಾಲ್ಲೂಕಿನ ವಾಟೆಹಳ್ಳಿ ಗ್ರಾಮದ ಭೂಮಿಕಾ (17) ಮೃತ ಯುವತಿ. ಇದೇ ಗ್ರಾಮದ ಸೋಮಶೇಖರ್ ಎಂಬುವವನು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಶುಕ್ರವಾರ ಏಕಾಏಕಿ ಭೂಮಿಕಳ ಮನೆಗೆ ನುಗ್ಗಿ ಆಕೆಯ ತಾಯಿಯ ಎದುರೇ ಜಗಳವಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ ಯುವತಿ ಮನೆಯಲ್ಲೇ ಸೀರೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಯುವತಿಯ ತಾಯಿ ಸುನಂದ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.