ಹಾನುಬಾಳು ನಲ್ಲಿ ಪೊಲೀಸ್ ಉಪಠಾಣೆ ಉದ್ಘಾಟನೆ
ಅಪರಾಧ ನಿಯಂತ್ರಣಕ್ಕೆ ಅಧ್ಯತೆ:
ಸಕಲೇಶಪುರ : ತಾಲೂಕಿನ ಹಾನುಬಾಳು ಹೋಬಳಿ ಕೇಂದ್ರದಲ್ಲಿ ಪೊಲೀಸ್ ಉಪಠಾಣೆಯನ್ನು ಶನಿವಾರ ಉದ್ಘಾಟಿಸಲಾಯಿತು.
ಸಕಲೇಶಪುರ ಗ್ರಾಮಾಂತರ ಠಾಣೆಯ ವ್ಯಾಪ್ತಿಯಗೆ ಒಳಪಡುವ ಉಪಠಾಣೆ ಇದಾಗಿದ್ದು ರಕ್ಷಣೆ ಹಾಗೂ ಅಪರಾಧ ಚಟುವಟಿಕೆ ನಿಯಂತ್ರಣ ಮಾಡಲು ಈ ಉಪಠಾಣೆ ಸಹಕರಿಯಾಗಲಿದೆ.
ಉಪಠಾಣೆ ಉದ್ಘಾಟನೆ ಮಾಡಿ ಮಾತನಾಡಿದ,ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್,ಹಳ್ಳಿ ಭಾಗದ ಪ್ರಕರಣಗಳಿಗೆ ತಕ್ಷಣ ಸ್ಪಂದಿಸಲು ಸಹಕಾರಿಯಾಗಲಿದೆ, ಚುನಾವಣೆ ಸಮಯದಲ್ಲಿ ಉಪಠಾಣೆ ಉಪಯೋಗ ಅಗಲಿದೆ ಎಂದರು.
ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಮಾತನಾಡಿ,,ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಉಪಠಾಣೆ ತೆರೆಯುವ ಪರಿಕಲ್ಪನೆ ಇತ್ತು. ಅದರಂತೆ ಮುಂಬರುವ ಚುನಾವಣೆಯಲ್ಲಿ ಅಪರಾಧ ಚಟುವಟಿಕೆ ತಡೆಯಲು ಸಹಾಯವಾಗಲಿದೆ.
3 ತಿಂಗಳು ಚಾಲ್ತಿಯಲ್ಲಿರುತ್ತದೆ. ಮುಂದಿನ ದಿನಗಳಲ್ಲಿ ಶಾಶ್ವತ ಠಾಣೆ ತೆರೆಯಲು ಇಲಾಖೆಗೆ ಮನವಿ ಸಲ್ಲಿಸಲಾಗುವುದು. ಈ ಠಾಣೆಯಿಂದ ಚುನಾವಣೆ ಸಂಭಂದ ಸಿಬ್ಬಂದಿಗಳು ಹಾಗೂ ಇನ್ನಿತರ ಬಳಕೆಗೆ ಉಪಯೋಗವಾಗಲಿದೆ.ಠಾಣೆಯಲ್ಲಿ ಎ.ಎಸ್. ಐ ಹಾಗೂ ಇಬ್ಬರು ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯ ಮೋಹನ್ ಮಾತನಾಡಿ,ಬಹಳ ವರ್ಷಗಳ ನಂತರ ಉಪಠಾಣೆ ಉದ್ಘಾಟನೆ ಆಗಿದ್ದು ಉತ್ತಮ ಬೆಳವಣಿಗೆ, ಆದರೆ ಚುನಾವಣೆಗಾಗಿ ಠಾಣೆ ತೆರದಿರುವುದು ಅಸಮಾಧಾನವಿದೆ.ಶಾಶ್ವತ ಉಪಠಾಣೆ ಬೇಕು ಒತ್ತಾಯಿಸಿದರು.
ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಹರೀಶ್ ಮಾತನಾಡಿ,ಹಾನುಬಾಳು ಹೋಬಳಿಗೆ ಉಪಠಾಣೆ ಅತ್ಯಾವಶಕವಾಗಿತ್ತು, ಈ ಉಪ ಠಾಣೆ ಗೆ ಮೂಲಭೂತ ಸೌಕರ್ಯದ ಅವಶ್ಯಕತೆ ಇದ್ದಲ್ಲಿ ಗ್ರಾಮ ಪಂಚಾಯತಿಯಿಂದ ಒದಗಿಸಲಾಗುವುದು ಎಂದರು.
ಈ ಸಂಧರ್ಭದಲ್ಲಿ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್, ಸಹಾಯಕ ಪೊಲೀಸ್ ಅದೀಕ್ಷಕ ಎಚ್. ಎನ್ ಮಿಥುನ್, ಗ್ರಾಮ ಪಂಚಾಯತಿ ಅಧ್ಯಕ್ಷ ವಿಮಲಾ ರಾಜು,ವೃತ್ತ ನಿರೀಕ್ಷೆಕ ಚೈತನ್ಯ, ಗ್ರಾಮಾಂತರ ಠಾಣಾ ಪಿ ಎಸ್ ಐ ಬಸವರಾಜ್,ತಾಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಹರೀಶ್,ಗ್ರಾಮ ಪಂಚಾಯತಿ ಸದಸ್ಯ ಮೋಹನ್ ಅಚ್ಚರಡಿ, ಗಿರೀಶ್ ಸೇರಿದಂತೆ ಮುಂತಾದವರು ಇದ್ದರು.