Saturday, November 23, 2024
Homeಸುದ್ದಿಗಳುಸಕಲೇಶಪುರನಿಗೂಢ ಕಾಯಿಲೆಯಿಂದ 40 ಕ್ಕೂ ಜಾನುವಾರುಗಳು ಸಾವು. ಇಪ್ಪತ್ತು ದಿನಗಳಿಂದ ಸಾವನ್ನಪ್ಪುತ್ತಿರುವ ಜಾನುವಾರುಗಳು. ವೈದ್ಯಾಧಿಕಾರಿಗಳಿಗೆ ತಲೆ...

ನಿಗೂಢ ಕಾಯಿಲೆಯಿಂದ 40 ಕ್ಕೂ ಜಾನುವಾರುಗಳು ಸಾವು. ಇಪ್ಪತ್ತು ದಿನಗಳಿಂದ ಸಾವನ್ನಪ್ಪುತ್ತಿರುವ ಜಾನುವಾರುಗಳು. ವೈದ್ಯಾಧಿಕಾರಿಗಳಿಗೆ ತಲೆ ನೋವಾದ ಜಾನುವಾರುಗಳ ಸಾವು.

  • ಸಕಲೇಶಪುರ : ತಾಲೂಕಿನ ಯಸ ಳೂರು ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಳೆದ ಮೂರು ವಾರಗಳಿಂದ ಜಾನುವಾರುಗಳು ನಿಗೂಢವಾಗಿ ಸಾವನ್ನಪ್ಪುತ್ತಿರುವುದರಿಂದ ರೈತರು ಹಾಗೂ ಗ್ರಾಮಸ್ಥರು ಆತಂಕಕ್ಕಿಡಾಗಿದ್ದಾರೆ.
    ನಿಗೂಢ ಕಾಯಿಲೆಯಿಂದ ಕಳೆದ ಇಪ್ಪತ್ತು ದಿನಗಳಿಂದ 40 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ, ಐಗೂರು ಗ್ರಾ.ಪಂ. ಸೇರಿದ ಎಂಟು ಗ್ರಾಮಗಳಲ್ಲಿ ನಡೆದಿದೆ. ಜಾನುವಾರುಗಳಿಗೆ ಮಾರಕ ರೋಗ ಕಾಣಿಸಿಕೊಂಡಿದ್ದು, ತಾಲ್ಲೂಕಿನ, ಐಗೂರು ಗ್ರಾ.ಪಂ. ವ್ಯಾಪ್ತಿಯ ಯಡಿಕೆರೆಯಲ್ಲಿ 8, ಚಿಕ್ಕಲ್ಲೂರಿನಲ್ಲಿ 14, ಕುಂಬಾರಗೇರಿ ಗ್ರಾಮದಲ್ಲಿ 6 ದನಕರುಗಳು ಸೇರಿ ನಲವತ್ತಕ್ಕೂ ಹೆಚ್ಚು ಜಾನುವಾರುಗಳ ಮಾರಣ ಹೋಮ ಆಗಿದೆ.

  • ಸ್ಥಳಕ್ಕೆ ಸ್ಥಳೀಯ ಶಾಸಕ ಎಚ್.ಕೆ.ಕುಮಾರಸ್ವಾಮಿ, ಪಶು ವೈದ್ಯರು ಆದ ತಾಲೂಕು ಪಶು ವೈದ್ಯಾಧಿಕಾರಿ ವೆಂಕಟೇಶ್ ಭೇಟಿ, ಪರಿಶೀಲನೆ ನಡೆಸಿದ್ದು ಯಾವ ಕಾಯಿಲೆಯಿಂದ ಜಾನುವಾರುಗಳು ಸಾವನ್ನಪ್ಪುತ್ತಿವೆ ಎಂಬುದು ವೈದ್ಯಾಧಿಕಾರಿಗಳಿಗೆ ಸರಿಯಾಗಿ ತಿಳಿಯದಾಗಿದ್ದು ಇದರಿಂದ ಪಶು ವೈದ್ಯಾಧಿಕಾರಿಗಳಿಗೆ ತಲೆ ನೋವಾಗಿದೆ.
    ಈ ವೇಳೆ ಮಾಧ್ಯಮಗಳಿಗೆ ಮಾತನಾಡಿದ ತಾಲೂಕು ಪಶು ವೈದ್ಯಾಧಿಕಾರಿ ವೆಂಕಟೇಶ್, ಈಗಾಗಲೇ ಮೃತಪಟ್ಟಿರುವ ಜಾನುವಾರುಗಳ ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದೆ ಇನ್ನೊಂದೆರಡು ದಿನಗಳಲ್ಲಿ ವರದಿ ಬರಲಿದ್ದು ಜಾನುವಾರುಗಳ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ನಂತರ ಉಳಿದ ದನ ಕರುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು. ರೈತರು ಮೃತಪಟ್ಟ ಜಾನುವಾರಗಳನ್ನು ಅಂತ್ಯ ಸಂಸ್ಕಾರ ನಡೆಸುವಾಗ ಸೂಕ್ತ ರೀತಿಯಲ್ಲಿ ನಡೆಸಬೇಕು 10 ಅಡಿ ಆಳದ ಗುಂಡಿ ತೆಗೆದು ಜಾನುವಾರುಗಳನ್ನು ಮಣ್ಣು ಮಾಡಬೇಕು. ಕೆಲವರು ಸತ್ತಂತಹ ದನಕರುಗಳನ್ನು ಹಾಗೆ ನೀರಿನಲ್ಲಿ ಬಿಸಾಡುವುದರಿಂದ ಬದುಕಿರುವ ಮತ್ತಷ್ಟು ಜಾನುವಾರುಗಳಿಗೆ ರೋಗ ಹರಡುವ ಸಾಧ್ಯತೆ ಇರುತ್ತದೆ ಆದ್ದರಿಂದ ಗ್ರಾಮಸ್ಥರು ಎಚ್ಚರಿಕೆ ವಹಿಸುವುದು ಒಳಿತು ಎಂದು ಹೇಳಿದರು.
    ಶಾಸಕ ಎಚ್ ಕೆ ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಮಾತನಾಡಿದ ಅವರು ಪಶು ಇಲಾಖೆ ಐಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಜಾನುವಾರುಗಳ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ ಶೀಘ್ರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
    ಜೀವನೋಪಾಯಕ್ಕಾಗಿ ಸಾಕಿದ ಜಾನುವಾರುಗಳನ್ನು ಕಳೆದುಕೊಂಡು ರೈತರು ಕಣ್ಣೀರೀಡುತ್ತಿದ್ದು ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಬೇರೆ ಜಾನುವಾರುಗಳಿಗೆ ಕಾಯಿಲೆ ಹರಡದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
RELATED ARTICLES
- Advertisment -spot_img

Most Popular