Saturday, April 19, 2025
Homeಸುದ್ದಿಗಳುಅರಕಲಗೂಡುನಲ್ಲಿ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಂಭ್ರಮ.

ಅರಕಲಗೂಡುನಲ್ಲಿ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಂಭ್ರಮ.

ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ಕನ್ನಡದ ರಂಗು

 

ಅರಕಲಗೂಡು: ಪಟ್ಟಣದಲ್ಲಿ ನಡೆಯುತ್ತಿರುವ 21 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಸೋಮವಾರ ಪ್ರಮುಖ ರಸ್ತೆ, ವೃತ್ತಗಳಲ್ಲಿ ವೈಭವದಿಂದ ಸಾಗಿತು.

ವಿಶೆಷವಾಗಿ ಅಲಂಕರಿಸಿದ್ದ ಕನ್ನಡ ರಥದಲ್ಲಿ ಸಮ್ಮೇಳನದ ಸರ್ವಾಧ್ಯ÷್ಷರಾದ ಡಾ. ಆರ್.ಕೆ.ಪದ್ಮನಾಭ ಅವರು ಕುಳಿತು ಮೆರವಣಿಯಲ್ಲಿ ಸಾಗಿದರು. ಶಾಸಕ ಎ.ಟಿ.ರಾಮಸ್ವಾಮಿ ಹಾಗೂ ಇತರ ಗಣ್ಯರು ನಗಾರಿ ಬಾರಿಸುವ ಮೂಲಕ ಉತ್ಸವಕ್ಕೆ ಕೋಟೆ ಗಣಪತಿ ಕೊತ್ತಲು ಸಮೀಪ ಚಾಲನೆ ನೀಡಿದರು. 

ಕೋಲಾಟ, ವೀರಗಾಸೆ, ಹಾಸ್ಯಬೊಂಬೆ, ಕತ್ತಿ ವರಸೆ, ಕೀಲು ಕುದುರೆ, ಮಹಿಳೆಯರ ಪೂರ್ಣಕುಂಭ ಹಾಗೂ ವಿವಿಧ ಕಲಾ ತಂಡಗಳೊAದಿಗೆ ಅನಕೃ ವೃತ್ತ, ಬಸ್ ನಿಲ್ದಾಣ ರಸ್ತೆ ಮಾರ್ಗವಾಗಿ ಸಭಾಂಗಣ ತಲುಪಿತು.

ವಾದ್ಯಗಳ ಸದ್ದಿಗೆ ಕಸಾಪ ಪದಾಧಿಕಾರಿಗಳು, ಸಾರ್ವಜನಿಕರು ಕುಣಿದು ಕುಪ್ಪಳಿಸಿದರು. ಮೆರವಣಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಕೆಲವು ವ್ಯಾಪಾರಿಗಳು ಹಣ್ಣುಗಳನ್ನು ವಿತರಿಸಿ ಸಂಭ್ರಮಿಸಿದರು. ವಿದೇಶಿ ಪ್ರವಾಸಿಗರು ಕನ್ನಡ ಧ್ವಜ ಹಿಡಿದು ಖುಷಿಪಟ್ಟರು. ಕನ್ನಡ ಉತ್ಸವದ ತುಣುಕುಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದರು.

RELATED ARTICLES
- Advertisment -spot_img

Most Popular