ಧ್ರುವನಾರಾಯಣ ನಿಧನಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ ಶಾಸಕ ಎಚ್. ಕೆ ಕುಮಾರಸ್ವಾಮಿ.
ಸಕಲೇಶಪುರ : ಕೆಪಿಸಿಸಿ ಕಾರ್ಯಧ್ಯಕ್ಷ ಧ್ರುವ ನಾರಾಯಣ್ ನಿಧನಕ್ಕೆ ಶಾಸಕ ಎಚ್ ಕೆ ಕುಮಾರಸ್ವಾಮಿ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.
ಧ್ರುವ ನಾರಾಯಣ್ ಸರಳ ಸಜ್ಜನಿಕೆಯ ಬದ್ಧತೆಯುಳ್ಳ ರಾಜಕಾರಣಿಯಾಗಿದ್ದರು. ಧ್ರುವನಾರಾಯಣ್ ಅವರ ನಿಧನ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಅಲ್ಲ ಇಡೀ ಸಮಾಜಕ್ಕೆ ನಷ್ಟ ಉಂಟಾಗಿದೆ. ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನನಗೆ ದೂರದ ಸಂಬಂಧಿ ಕೂಡ ಹೌದು ಎಂದು ಹೇಳಿದರು.
ಧ್ರುವ ನಾರಾಯಣ್ ಅವರ ನಿಧನ ಅಘಾತವನ್ನು ಅವರ ಕುಟುಂಬದವರು ತಡೆದುಕೊಳ್ಳುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದರು