ಈರಣ್ಣನ ಕೊಪ್ಪಲು ಗ್ರಾಮದಲ್ಲಿ ಕಾಡು ಕುರಿ ಬೇಟೆ : ಓರ್ವನ ಬಂಧನ, ಮೂವರು ಪರಾರಿ ಶಂಕೆ.
ವಲಯ ಅರಣ್ಯ ಅಧಿಕಾರಿ ಶಿಲ್ಪ ನೇತೃತ್ವದಲ್ಲಿ ಕಾರ್ಯಾಚರಣೆ.
ಸಕಲೇಶಪುರ : ತಾಲೂಕಿನ ಈರಣ್ಣನಕೊಪ್ಪಲು ಗ್ರಾಮದಲ್ಲಿ ಕಾಡು ಕುರಿಯನ್ನು ಬೇಟೆಯಾಡಿದ ಆರೋಪಿಗಳನ್ನು ಮಾಲು ಸಮೇತ ಓರ್ವನನ್ನು ಬಂಧಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬೆಳಗೋಡು ಹೋಬಳಿ ಅರಣ್ಯ ಪ್ರದೇಶದಲ್ಲಿ ಕಾಡು ಕುರಿಯನ್ನು ಬೇಟೆಯಾಡಿದ್ದ ನಾಲ್ಕು ಮಂದಿ ಈರಣ್ಣನಕೊಪ್ಪಲು ಗ್ರಾಮದ ಮನೆ ಒಂದರಲ್ಲಿ ಕಾಡುಕುರಿ ಮಾಂಸವನ್ನು ಹಂಚಿಕೊಳ್ಳುವ ಸಮಯದಲ್ಲಿ ಮನೆ ಮೇಲೆ ದಾಳಿ ನಡೆಸಿದ ಅರಣ್ಯ ಗಸ್ತು ಪಡೆ ಗ್ರಾಮದ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತನನ್ನು ಈರಣ್ಣನ ಕೊಪ್ಪಲು ರಮೇಶ ಎಂದು ಗುರುತಿಸಲಾಗಿದ್ದು. ಘಟನೆಯಲ್ಲಿ ಇನ್ನು ಮೂವರು ಇರುವ ಶಂಕೆಯಿದ್ದು ಬಂಧಿತ ಆರೋಪಿಯ ವಿಚಾರಣೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮುಂದುವರಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಮಾರ್ಗದರ್ಶನದಲ್ಲಿ ನಡೆದ ದಾಳಿ ವೇಳೆ ಎರಡು ಕುರಿಗಳ ಚರ್ಮ, ಒಂದು ಕುರಿಯ ತಲೆ ಸೇರಿದಂತೆ ಕೃತಕ್ಕೆ ಬಳಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿ ವೇಳೆ ವಲಯ ಅರಣ್ಯ ಅಧಿಕಾರಿ ಶಿಲ್ಪ, ಉಪವಲಯ ಅರಣ್ಯ ಅಧಿಕಾರಿ ಮೋಹನ್, ಫಾರೆಸ್ಟ್ ಗಾರ್ಡ್ ಯೋಗೇಶ್ ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು.