Thursday, November 28, 2024
Homeಸುದ್ದಿಗಳುಸಕಲೇಶಪುರರಾಜ್ಯದ ಅಭಿವೃದ್ದಿಗೆ ಮತ್ತೊಮ್ಮೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಬರಬೇಕು:ಕೇಂದ್ರ ಕಲ್ಲಿದ್ದಲು, ಗಣಿ ಮತ್ತು...

ರಾಜ್ಯದ ಅಭಿವೃದ್ದಿಗೆ ಮತ್ತೊಮ್ಮೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಬರಬೇಕು:ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ

ಸಕಲೇಶಪುರ: ಪ್ರಧಾನಿ ನರೇಂದ್ರ ಮೋದಿರವರ ಆಡಳಿತದಲ್ಲಿ ಭಾರತ ಮುಂದಿನ ದಿನಗಳಲ್ಲಿ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿ ಆಗಲಿದೆ ಎಂದರು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.
ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿ ದೇಶದಲ್ಲಿ ಇಂದು ಎಲ್ಲಾ ರಂಗಗಳಲ್ಲಿ ಬದಲಾವಣೆ ಕಾಣುತ್ತಿದೆ. ಪ್ರಧಾನಿ ನರೇಂದ್ರಮೋದಿರವರು ಮಾಡಿರುವ ಯೋಜನೆಗಳನ್ನು ನಾನೇ ಮಾಡಿದ್ದು ಎಂದು ಸಿದ್ದರಾಮಯ್ಯ ಎಲ್ಲೆಡೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿದ್ದಾಗ ದೇಶದ ಶೇ.50%ರಷ್ಟು ಜನ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರ ಇದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿರವರು ಜನಧನ್ ಖಾತೆಗಳನ್ನು ತೆರೆಸುವ ಮುಖಾಂತರ ದೇಶದ ಬಹುತೇಕ ಜನತೆ ಬ್ಯಾಂಕಿಂಗ್ ವ್ಯಾಪ್ತಿಯಲ್ಲಿ ಬರುವಂತೆ ಮಾಡಿದರೆ. ಕಾಂಗ್ರೆಸ್ ಆಧಾರ್ ಯೋಜನೆ ಜಾರಿಗೆ ತಂದರು ಸಹ ಸಂಸತ್‌ನಿಂದ ಅನುಮತಿ ಪಡೆದಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಜನಧನ್, ಆಧಾರ್‌ಗೆ ಮೊಬೈಲ್ ಸಂಖ್ಯೆಯನ್ನು ಜೋಡಿಸುವ ಮುಖಾಂತರ ಯೋಜನೆಗಳು ಮದ್ಯವರ್ತಿಗಳ ಹಂಗು ಇಲ್ಲದೆ ಜನರಿಗೆ ನೇರವಾಗಿ ತಲುಪುವಂತೆ ಮಾಡಿದರು. ಕಾಂಗ್ರೆಸ್ ಅಂದರೆ ಸ್ಕ್ಯಾಮ್ 2ಜಿ ಹಗರಣ ,ಕಲ್ಲಿದ್ದಲು ಹಗರಣದಂತಹ ಭ್ರಷ್ಟಚಾರವೆಸಗಿದ್ದೆ ಕಾಂಗ್ರೆಸ್ ಸಾಧನೆಯಾಗಿದೆ. ಕೋವಿಡ್ ಸಂಧರ್ಭದಲ್ಲಿ ದೇಶದ ಎಲ್ಲಾರಿಗೂ ಉಚಿತ ಲಸಿಕೆ ನೀಡುವುದರ ಮೂಲಕ ಭಾರತ ಇಂದು ಜಗತ್ತಿನ 5 ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗುವುದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಮುಖ ಪಾತ್ರ ವಹಿಸಿದ್ದಾರೆ. ಉಚಿತ ವಿದ್ಯುತ್ ಸೇರಿದಂತೆ ಇದೀಗ ಹಲವು ಯೋಜನೆಗಳನ್ನು ಉಚಿತವಾಗಿ ನೀಡುತ್ತೇವೆ ಎಂಬುದಕ್ಕೆ ಕಾಂಗ್ರೆಸ್‌ನಿಂದ ಯಾವುದೆ ಗ್ಯಾರಂಟಿ ಇಲ್ಲ. ಉಚಿತವಾಗಿ ನೀಡುವ ಹಾಗಿದ್ದರೆ ಕಾಂಗ್ರೆಸ್ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗಲೆ ನೀಡಬೇಕಿತ್ತು. ಈಗಾಗಲೆ ನಾಗಲ್ಯಾಂಡ್, ತ್ರಿಪುರ..ಮೇಘಾಲಯ, ಉತ್ತರ ಪ್ರದೇಶಗಳಲ್ಲಿ ಕಾಂಗ್ರೆಸ್ ಮಾಯವಾಗಿದೆ.ಭಾರತದ ಪ್ರಜಾಪ್ರಭುತ್ವ ನೆಲಕ್ಕೆ ತಳ್ಳಿದ್ದು ರಾಹುಲ್ ಅಜ್ಜಿ ಇಂದಿರಾಗಾಂಧಿ, ದೇಶದ ವಿರುದ್ದ ಮತ್ತೊಂದು ದೇಶದಲ್ಲಿ ಹೇಳಿಕೆ ನೀಡುವುದಕ್ಕೆ ರಾಹುಲ್ ಗಾಂಧಿಯವರಿಗೆ ನಾಚಿಕೆಯಾಗಬೇಕು ಎಂದರು.

ಕೇಂದ್ರ ಕೃಷಿ ಮತ್ತು ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ ಸಕಲೇಶಪುರದಲ್ಲಿ ಒಂದು ಕಾಲದಲ್ಲಿ ಬಿಜೆಪಿ ಧ್ವಜ ಕಾಣುತ್ತಿತ್ತು. ಈ ಹಿನ್ನೆಲೆಯಲ್ಲಿ ಎರಡು ಬಾರಿ ಬಿಜೆಪಿಯಿಂದ ಶಾಸಕರಾಗಿದ್ದ ಬಿ.ಬಿ ಶಿವಪ್ಪ ಹಾಗೂ ಅವರ ಧರ್ಮಪತ್ನಿ ಸುಶೀಲಮ್ಮರವರನ್ನು ಸ್ಮರಣೆ ಮಾಡುತ್ತೇನೆ. ಸಣ್ಣ ರೈತರು ಹಾಗೂ ಕಾರ್ಮಿಕರು ಇಲ್ಲಿ ಹೆಚ್ಚಿನ ಸಂಖ್ಯೆಲ್ಲಿರುವುದರಿಂದ ಬಿಜೆಪಿ ಶಾಸಕರು ಇಲ್ಲಿರಬೇಕಿತ್ತು. ಶಾಸಕರ ನಿರ್ಲಕ್ಷ್ಯದಿಂದ ಬೇಲೂರು ಸಕಲೇಶಪುರ ರಸ್ತೆ ಸೇರಿದಂತೆ ಹಲವು ರಸ್ತೆಗಳು ಹದಗೆಟ್ಟಿದೆ. ಕಾಡಾನೆ ಸಮಸ್ಯೆ, ಕಾಡುಪ್ರಾಣಿಗಳ ಸಮಸ್ಯೆ, ರಸ್ತೆ ಸಮಸ್ಯೆ ಇನ್ನು ಹಲವು ಸಮಸ್ಯೆಗಳು ಇಲ್ಲಿದ್ದು ಇಲ್ಲಿನ ಸಮಸ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮುಟ್ಟಿಸುವಲ್ಲಿ ಇಲ್ಲಿನ ಶಾಸಕರು ವಿಲರಾಗಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅವರು ಕೇಳಿದೆಲ್ಲಾ ಕೊಟ್ಟಿದ್ದಾರೆ. ಆದರೂ ಸಹ ಶಾಸಕರು ಯಡಿಯೂರಪ್ಪನವರ ಬಳಿ ಅವರು ಸರಿಯಾಗಿ ಕೇಳಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ ಹೆಣ್ಣುಮಕ್ಕಳಿಗಾಗಿ ಭಾಗ್ಯಲಕ್ಷ್ಮೀ, ಸಂಧ್ಯಾ ಸುರಕ್ಷಾ, ಹೆಣ್ಣಿಗಾಗಿ ಭಾಗ್ಯ ಲಕ್ಷ್ಮೀ ಯೋಜನೆ, ರೈತರಿಗೆ ಉಚಿತ ವಿದ್ಯುತ್, ಅಂಗವಿಕಲ , ವಿವಿಧ ವೇತನ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನಮಗೆ ಪೂರ್ಣ ಬಹುಮತ ದೊರಕದಿದ್ದ ಕಾರಣ ಅನ್ಯ ಪಕ್ಷಗಳ ಶಾಸಕರ ನೆರವಿನಿಂದ ಅಧಿಕಾರ ಹಿಡಿಯುವಂತಾಯಿತು. ಈ ಭಾರಿ ಸಕಲೇಶಪುರ ಗೆಲ್ಲಬಹುದಾದ ಕ್ಷೇತ್ರವಾಗಿದ್ದು ನೀವೆಲ್ಲಾ ಮನಸ್ಸು ಮಾಡಬೇಕು. ನಾವು ಯಾರಿಗೂ ಅನ್ಯಾಯ ಮಾಡಿಲ್ಲ ಯಾವುದೇ ಯೋಜನೆಯನ್ನು ಜಾತಿ ಧರ್ಮದ ಆಧಾರದ ಮೇಲೆ ಕೊಟ್ಟಿಲ್ಲ.ಸಿದ್ದರಾಮಯ್ಯ ಜಾತಿ ಧರ್ಮ ಒಡೆಯುವ ಕೆಲಸ ಮಾಡಿದರು. ಟಿಪ್ಪು ಜಯಂತಿಯನ್ನು ಅವರು ಆಚರಣೆ ಮಾಡಲು ಮುಂದಾಗಿದ್ದರಿಂದ ಪಕ್ಕದ ಕೊಡಗಿನ ಕುಟ್ಟಪ್ಪನ ಕೊಲೆಯಾಯಿತು. ಈ ಸಂಧರ್ಭದಲ್ಲಿ ನಡೆದ ಗಲಭೆಯಿಂದಾಗಿ ಇಲ್ಲಿನ ಹಲವು ಕಾರ್ಯಕರ್ತರು ಇಂದಿಗೂ ಕೋರ್ಟ್ ಗೆ ತಿರುಗಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿರವರು ಪ್ರಧಾನಿಯಾಗುವ ಮುನ್ನ ಒಂದು ಮಾತು ಹೇಳಿದ್ದರು ಬೂತ್ ಗೆಲ್ಲಿಸಿ, ನಾನು ದೇಶ ಗೆಲ್ಲಿಸುತ್ತೇನೆಂದು ಹೇಳಿದ್ದರು. ಅದೇ ರೀತಿ ಅವರು ನಡೆದುಕೊಳ್ಳುತ್ತಿದ್ದು ದೇಶ ವಿದೇಶಗಳಲ್ಲಿ ಭಾರತಕ್ಕೆ ಇಂದು ಕೆಂಪು ಹಾಸಿನ ಸ್ವಾಗತ ದೊರಕುತ್ತಿದೆ. ಕಾಶ್ಮೀರದಲ್ಲಿ ಆರ್ಟಿಕಲ್ 375 ರದ್ದು ಮಾಡಿದ್ದರಿಂದ ಇಂದು ಅಲ್ಲಿ ಬಹುತೇಕ ಶಾಂತಿ ನೆಲೆಸಿದೆ. ಗಡಿಗಳ ರಕ್ಷಣೆ ಮಾಡುವ ಯೋ‘ರಿಗೆ ಅತ್ಯಾದುನಿಕ ಯುದ್ದೋಪಕರಣಗಳು ದೊರಕಿದೆ. ಯೋಧರು ಭಯೋತ್ಪಾದಕರಿಗೆ ಗುಂಡು ಹೊಡೆಯಲು ಅಧಿಕಾರ ಸಿಕ್ಕಿದೆ. ದೇಶದಲ್ಲಿ ಅಭಿವೃದ್ದಿ ಹೆಚ್ಚಾಗಿದ್ದು ಎಲ್ಲಿ ನೋಡಿದರಲ್ಲಿ ಆಧುನಿಕ ವಿಮಾನ ನಿಲ್ದಾಣಗಳು, ನೂತನ ಹೈವೆಗಳು, ಉತ್ತಮ ದರ್ಜೆಯ ರೈಲು ನಿಲ್ದಾಣಗಳು ಕಾಣುತ್ತಿವೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರ ಬರಬೇಕು ಧ್ವನಿಯಿಲ್ಲದ ಶಾಸಕರ ಬದಲು ಧ್ವನಿಯೆತ್ತುವ ಬಿಜೆಪಿ ಶಾಸಕನನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ಜನ ಆಯ್ಕೆ ಮಾಡಬೇಕು ಎಂದರು.
ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಮಾತನಾಡಿ, ಕಳೆದ ಒಂದು ವಾರದಿಂದ ಚಾಮರಾಜನಗರ, ಮೈಸೂರು ಹಾಗೂ ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡಿದ ವೇಳೆ ಅಭೂತ ಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದೆ. ಇದಕ್ಕೆಲ್ಲ ಕೇಂದ್ರ ಹಾಗೂ ರಾಜ್ಯದಲ್ಲಿ ಜನಪರ ಆಡಳಿತ ನಡೆಸುತ್ತಿರುವ ಬಿಜೆಪಿ ಕಾರ್ಯವೈಖರಿಯೆ ಕಾರಣ. ನರೇಂದ್ರಮೋದಿ ಆಡಳಿತದ ಅವಧಿಯಲ್ಲಿ ಸುಮಾರು 160 ಯೋಜನೆಗಳ ಹಣವನ್ನು ನೇರವಾಗಿ ಫಲಾನುಭವಿಗಳ ಆಕೌಂಟ್‌ಗೆ ಬರುತ್ತಿದೆ. ಇಂದಿಗೂ ಮುಂದುವರೆದ ದೇಶಗಳು ಕರೋನಾ ವಿರುದ್ದ ಹೋರಾಟ ನಡೆಸದೆ ಕೈಚೆಲ್ಲಿದ್ದು ಮಾರಣಹೋಮ ಇಂದಿಗೂ ಮುಂದುವರೆದಿದ್ದು ಆದರೆ ನರೇಂದ್ರ ಮೋದಿ ಸರ್ಕಾರ ಮಾತ್ರ ಜನಸಾಮಾನ್ಯರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಮುಖಾಂತರ ಜನರ ಆರೋಗ್ಯವನ್ನು ಕಾಪಾಡಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ತಾಲೂಕಿನ ಬಿರಡಹಳ್ಳಿ ಗ್ರಾಮದಿಂದ ಒಕ್ಕಲಿಗರ ಕಲ್ಯಾಣ ಮಂಟಪದವರಗೆ ಬಿಜೆಪಿ ಯುವ ಮೋರ್ಚಾ ವತಿಯಿಂದ ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಲೂರು ಮಂಡಲ ಅಧ್ಯಕ್ಷ ನಾಗರಾಜ್ ವಹಿಸಿದ್ದರು. ಮಾಜಿ ಶಾಸಕರಾದ ಬಿ.ಆರ್ ಗುರುದೇವ್,ಎಚ್.ಎಂ ವಿಶ್ವನಾಥ್, ಪಕ್ಷದ ಜಿಲ್ಲಾಧ್ಯಕ್ಷ ಎಚ್.ಕೆ ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್,ಲೋಹಿತ್ ಜಂಬರ್ಡಿ, ಬಿಜೆಪಿ ಟಿಕೇಟ್ ಪ್ರಬಲ ಅಕಾಂಕ್ಷಿ ಸಿಮೆಂಟ್ ಮಂಜುನಾಥ್, ಕಾರ್ಯಕ್ರಮದ ಸಂಚಾಲಕ ಬಾಗೆ ಜಯಪ್ರಕಾಶ್, ಜಿಲ್ಲಾ ಮಹಿಳಾ ಮೋರ್ಚ ಉಪಾಧ್ಯಕ್ಷೆ ಚಂದ್ರಕಲಾ ಕಾಂತರಾಜ್, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಜಿಲ್ಲಾ ರೈತಮೋರ್ಚ ಅಧ್ಯಕ್ಷ ಬ್ಯಾಕರವಳ್ಳಿ ಭಾಸ್ಕರ್, ತಾಲೂಕು ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಕ್ಯಾನಹಳ್ಳಿ ವಾಸು, ರೈತ ಮೋರ್ಚಾ ಅಧ್ಯಕ್ಷ ಗುಲಗಳಲೆ ಮೋಹನ್, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಜೀತು ಶುಕ್ರವಾರಸಂತೆ, ಯುವಮೋರ್ಚಾ ಕಾರ್ಯದರ್ಶಿ ಚಿಕ್ಕನಾಯಕನಹಳ್ಳಿ ಸಾಗರ್, ಕೆಡಿಪಿ ಸದಸ್ಯ ಮಧು ಬೊಮ್ಮನಕೆರೆ, ಅಲ್ಪಸಂಖ್ಯಾತ ಮೋರ್ಚಾದ ತಾಲೂಕು ಅಧ್ಯಕ್ಷ ಆನಂದ್ ಲಿಯೋವಾಸ್ ಮುಂತಾದವರಿದ್ದರು.

ರಾಜ್ಯದ ಅಭಿವೃದ್ದಿಗೆ ಮತ್ತೊಮ್ಮೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಬರಬೇಕು:ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ
ಸಕಲೇಶಪುರ: ಪ್ರಧಾನಿ ನರೇಂದ್ರ ಮೋದಿರವರ ಆಡಳಿತದಲ್ಲಿ ಭಾರತ ಮುಂದಿನ ದಿನಗಳಲ್ಲಿ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿ ಆಗಲಿದೆ ಎಂದರು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.
ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿ ದೇಶದಲ್ಲಿ ಇಂದು ಎಲ್ಲಾ ರಂಗಗಳಲ್ಲಿ ಬದಲಾವಣೆ ಕಾಣುತ್ತಿದೆ. ಪ್ರಧಾನಿ ನರೇಂದ್ರಮೋದಿರವರು ಮಾಡಿರುವ ಯೋಜನೆಗಳನ್ನು ನಾನೇ ಮಾಡಿದ್ದು ಎಂದು ಸಿದ್ದರಾಮಯ್ಯ ಎಲ್ಲೆಡೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿದ್ದಾಗ ದೇಶದ ಶೇ.50%ರಷ್ಟು ಜನ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರ ಇದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿರವರು ಜನಧನ್ ಖಾತೆಗಳನ್ನು ತೆರೆಸುವ ಮುಖಾಂತರ ದೇಶದ ಬಹುತೇಕ ಜನತೆ ಬ್ಯಾಂಕಿಂಗ್ ವ್ಯಾಪ್ತಿಯಲ್ಲಿ ಬರುವಂತೆ ಮಾಡಿದರೆ. ಕಾಂಗ್ರೆಸ್ ಆಧಾರ್ ಯೋಜನೆ ಜಾರಿಗೆ ತಂದರು ಸಹ ಸಂಸತ್‌ನಿಂದ ಅನುಮತಿ ಪಡೆದಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಜನಧನ್, ಆಧಾರ್‌ಗೆ ಮೊಬೈಲ್ ಸಂಖ್ಯೆಯನ್ನು ಜೋಡಿಸುವ ಮುಖಾಂತರ ಯೋಜನೆಗಳು ಮದ್ಯವರ್ತಿಗಳ ಹಂಗು ಇಲ್ಲದೆ ಜನರಿಗೆ ನೇರವಾಗಿ ತಲುಪುವಂತೆ ಮಾಡಿದರು. ಕಾಂಗ್ರೆಸ್ ಅಂದರೆ ಸ್ಕ್ಯಾಮ್ 2ಜಿ ಹಗರಣ ,ಕಲ್ಲಿದ್ದಲು ಹಗರಣದಂತಹ ಭ್ರಷ್ಟಚಾರವೆಸಗಿದ್ದೆ ಕಾಂಗ್ರೆಸ್ ಸಾಧನೆಯಾಗಿದೆ. ಕೋವಿಡ್ ಸಂಧರ್ಭದಲ್ಲಿ ದೇಶದ ಎಲ್ಲಾರಿಗೂ ಉಚಿತ ಲಸಿಕೆ ನೀಡುವುದರ ಮೂಲಕ ಭಾರತ ಇಂದು ಜಗತ್ತಿನ 5 ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗುವುದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಮುಖ ಪಾತ್ರ ವಹಿಸಿದ್ದಾರೆ. ಉಚಿತ ವಿದ್ಯುತ್ ಸೇರಿದಂತೆ ಇದೀಗ ಹಲವು ಯೋಜನೆಗಳನ್ನು ಉಚಿತವಾಗಿ ನೀಡುತ್ತೇವೆ ಎಂಬುದಕ್ಕೆ ಕಾಂಗ್ರೆಸ್‌ನಿಂದ ಯಾವುದೆ ಗ್ಯಾರಂಟಿ ಇಲ್ಲ. ಉಚಿತವಾಗಿ ನೀಡುವ ಹಾಗಿದ್ದರೆ ಕಾಂಗ್ರೆಸ್ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗಲೆ ನೀಡಬೇಕಿತ್ತು. ಈಗಾಗಲೆ ನಾಗಲ್ಯಾಂಡ್, ತ್ರಿಪುರ..ಮೇಘಾಲಯ, ಉತ್ತರ ಪ್ರದೇಶಗಳಲ್ಲಿ ಕಾಂಗ್ರೆಸ್ ಮಾಯವಾಗಿದೆ.ಭಾರತದ ಪ್ರಜಾಪ್ರಭುತ್ವ ನೆಲಕ್ಕೆ ತಳ್ಳಿದ್ದು ರಾಹುಲ್ ಅಜ್ಜಿ ಇಂದಿರಾಗಾಂಧಿ, ದೇಶದ ವಿರುದ್ದ ಮತ್ತೊಂದು ದೇಶದಲ್ಲಿ ಹೇಳಿಕೆ ನೀಡುವುದಕ್ಕೆ ರಾಹುಲ್ ಗಾಂಧಿಯವರಿಗೆ ನಾಚಿಕೆಯಾಗಬೇಕು ಎಂದರು.

ಕೇಂದ್ರ ಕೃಷಿ ಮತ್ತು ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ ಸಕಲೇಶಪುರದಲ್ಲಿ ಒಂದು ಕಾಲದಲ್ಲಿ ಬಿಜೆಪಿ ಧ್ವಜ ಕಾಣುತ್ತಿತ್ತು. ಈ ಹಿನ್ನೆಲೆಯಲ್ಲಿ ಎರಡು ಬಾರಿ ಬಿಜೆಪಿಯಿಂದ ಶಾಸಕರಾಗಿದ್ದ ಬಿ.ಬಿ ಶಿವಪ್ಪ ಹಾಗೂ ಅವರ ಧರ್ಮಪತ್ನಿ ಸುಶೀಲಮ್ಮರವರನ್ನು ಸ್ಮರಣೆ ಮಾಡುತ್ತೇನೆ. ಸಣ್ಣ ರೈತರು ಹಾಗೂ ಕಾರ್ಮಿಕರು ಇಲ್ಲಿ ಹೆಚ್ಚಿನ ಸಂಖ್ಯೆಲ್ಲಿರುವುದರಿಂದ ಬಿಜೆಪಿ ಶಾಸಕರು ಇಲ್ಲಿರಬೇಕಿತ್ತು. ಶಾಸಕರ ನಿರ್ಲಕ್ಷ್ಯದಿಂದ ಬೇಲೂರು ಸಕಲೇಶಪುರ ರಸ್ತೆ ಸೇರಿದಂತೆ ಹಲವು ರಸ್ತೆಗಳು ಹದಗೆಟ್ಟಿದೆ. ಕಾಡಾನೆ ಸಮಸ್ಯೆ, ಕಾಡುಪ್ರಾಣಿಗಳ ಸಮಸ್ಯೆ, ರಸ್ತೆ ಸಮಸ್ಯೆ ಇನ್ನು ಹಲವು ಸಮಸ್ಯೆಗಳು ಇಲ್ಲಿದ್ದು ಇಲ್ಲಿನ ಸಮಸ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮುಟ್ಟಿಸುವಲ್ಲಿ ಇಲ್ಲಿನ ಶಾಸಕರು ವಿಲರಾಗಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅವರು ಕೇಳಿದೆಲ್ಲಾ ಕೊಟ್ಟಿದ್ದಾರೆ. ಆದರೂ ಸಹ ಶಾಸಕರು ಯಡಿಯೂರಪ್ಪನವರ ಬಳಿ ಅವರು ಸರಿಯಾಗಿ ಕೇಳಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ ಹೆಣ್ಣುಮಕ್ಕಳಿಗಾಗಿ ಭಾಗ್ಯಲಕ್ಷ್ಮೀ, ಸಂಧ್ಯಾ ಸುರಕ್ಷಾ, ಹೆಣ್ಣಿಗಾಗಿ ಭಾಗ್ಯ ಲಕ್ಷ್ಮೀ ಯೋಜನೆ, ರೈತರಿಗೆ ಉಚಿತ ವಿದ್ಯುತ್, ಅಂಗವಿಕಲ , ವಿವಿಧ ವೇತನ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನಮಗೆ ಪೂರ್ಣ ಬಹುಮತ ದೊರಕದಿದ್ದ ಕಾರಣ ಅನ್ಯ ಪಕ್ಷಗಳ ಶಾಸಕರ ನೆರವಿನಿಂದ ಅಧಿಕಾರ ಹಿಡಿಯುವಂತಾಯಿತು. ಈ ಭಾರಿ ಸಕಲೇಶಪುರ ಗೆಲ್ಲಬಹುದಾದ ಕ್ಷೇತ್ರವಾಗಿದ್ದು ನೀವೆಲ್ಲಾ ಮನಸ್ಸು ಮಾಡಬೇಕು. ನಾವು ಯಾರಿಗೂ ಅನ್ಯಾಯ ಮಾಡಿಲ್ಲ ಯಾವುದೇ ಯೋಜನೆಯನ್ನು ಜಾತಿ ಧರ್ಮದ ಆಧಾರದ ಮೇಲೆ ಕೊಟ್ಟಿಲ್ಲ.ಸಿದ್ದರಾಮಯ್ಯ ಜಾತಿ ಧರ್ಮ ಒಡೆಯುವ ಕೆಲಸ ಮಾಡಿದರು. ಟಿಪ್ಪು ಜಯಂತಿಯನ್ನು ಅವರು ಆಚರಣೆ ಮಾಡಲು ಮುಂದಾಗಿದ್ದರಿಂದ ಪಕ್ಕದ ಕೊಡಗಿನ ಕುಟ್ಟಪ್ಪನ ಕೊಲೆಯಾಯಿತು. ಈ ಸಂಧರ್ಭದಲ್ಲಿ ನಡೆದ ಗಲಭೆಯಿಂದಾಗಿ ಇಲ್ಲಿನ ಹಲವು ಕಾರ್ಯಕರ್ತರು ಇಂದಿಗೂ ಕೋರ್ಟ್ ಗೆ ತಿರುಗಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿರವರು ಪ್ರಧಾನಿಯಾಗುವ ಮುನ್ನ ಒಂದು ಮಾತು ಹೇಳಿದ್ದರು ಬೂತ್ ಗೆಲ್ಲಿಸಿ, ನಾನು ದೇಶ ಗೆಲ್ಲಿಸುತ್ತೇನೆಂದು ಹೇಳಿದ್ದರು. ಅದೇ ರೀತಿ ಅವರು ನಡೆದುಕೊಳ್ಳುತ್ತಿದ್ದು ದೇಶ ವಿದೇಶಗಳಲ್ಲಿ ಭಾರತಕ್ಕೆ ಇಂದು ಕೆಂಪು ಹಾಸಿನ ಸ್ವಾಗತ ದೊರಕುತ್ತಿದೆ. ಕಾಶ್ಮೀರದಲ್ಲಿ ಆರ್ಟಿಕಲ್ 375 ರದ್ದು ಮಾಡಿದ್ದರಿಂದ ಇಂದು ಅಲ್ಲಿ ಬಹುತೇಕ ಶಾಂತಿ ನೆಲೆಸಿದೆ. ಗಡಿಗಳ ರಕ್ಷಣೆ ಮಾಡುವ ಯೋ‘ರಿಗೆ ಅತ್ಯಾದುನಿಕ ಯುದ್ದೋಪಕರಣಗಳು ದೊರಕಿದೆ. ಯೋಧರು ಭಯೋತ್ಪಾದಕರಿಗೆ ಗುಂಡು ಹೊಡೆಯಲು ಅಧಿಕಾರ ಸಿಕ್ಕಿದೆ. ದೇಶದಲ್ಲಿ ಅಭಿವೃದ್ದಿ ಹೆಚ್ಚಾಗಿದ್ದು ಎಲ್ಲಿ ನೋಡಿದರಲ್ಲಿ ಆಧುನಿಕ ವಿಮಾನ ನಿಲ್ದಾಣಗಳು, ನೂತನ ಹೈವೆಗಳು, ಉತ್ತಮ ದರ್ಜೆಯ ರೈಲು ನಿಲ್ದಾಣಗಳು ಕಾಣುತ್ತಿವೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರ ಬರಬೇಕು ಧ್ವನಿಯಿಲ್ಲದ ಶಾಸಕರ ಬದಲು ಧ್ವನಿಯೆತ್ತುವ ಬಿಜೆಪಿ ಶಾಸಕನನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ಜನ ಆಯ್ಕೆ ಮಾಡಬೇಕು ಎಂದರು.
ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಮಾತನಾಡಿ, ಕಳೆದ ಒಂದು ವಾರದಿಂದ ಚಾಮರಾಜನಗರ, ಮೈಸೂರು ಹಾಗೂ ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡಿದ ವೇಳೆ ಅಭೂತ ಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದೆ. ಇದಕ್ಕೆಲ್ಲ ಕೇಂದ್ರ ಹಾಗೂ ರಾಜ್ಯದಲ್ಲಿ ಜನಪರ ಆಡಳಿತ ನಡೆಸುತ್ತಿರುವ ಬಿಜೆಪಿ ಕಾರ್ಯವೈಖರಿಯೆ ಕಾರಣ. ನರೇಂದ್ರಮೋದಿ ಆಡಳಿತದ ಅವಧಿಯಲ್ಲಿ ಸುಮಾರು 160 ಯೋಜನೆಗಳ ಹಣವನ್ನು ನೇರವಾಗಿ ಫಲಾನುಭವಿಗಳ ಆಕೌಂಟ್‌ಗೆ ಬರುತ್ತಿದೆ. ಇಂದಿಗೂ ಮುಂದುವರೆದ ದೇಶಗಳು ಕರೋನಾ ವಿರುದ್ದ ಹೋರಾಟ ನಡೆಸದೆ ಕೈಚೆಲ್ಲಿದ್ದು ಮಾರಣಹೋಮ ಇಂದಿಗೂ ಮುಂದುವರೆದಿದ್ದು ಆದರೆ ನರೇಂದ್ರ ಮೋದಿ ಸರ್ಕಾರ ಮಾತ್ರ ಜನಸಾಮಾನ್ಯರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಮುಖಾಂತರ ಜನರ ಆರೋಗ್ಯವನ್ನು ಕಾಪಾಡಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ತಾಲೂಕಿನ ಬಿರಡಹಳ್ಳಿ ಗ್ರಾಮದಿಂದ ಒಕ್ಕಲಿಗರ ಕಲ್ಯಾಣ ಮಂಟಪದವರಗೆ ಬಿಜೆಪಿ ಯುವ ಮೋರ್ಚಾ ವತಿಯಿಂದ ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಲೂರು ಮಂಡಲ ಅಧ್ಯಕ್ಷ ನಾಗರಾಜ್ ವಹಿಸಿದ್ದರು. ಮಾಜಿ ಶಾಸಕರಾದ ಬಿ.ಆರ್ ಗುರುದೇವ್,ಎಚ್.ಎಂ ವಿಶ್ವನಾಥ್, ಪಕ್ಷದ ಜಿಲ್ಲಾಧ್ಯಕ್ಷ ಎಚ್.ಕೆ ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್,ಲೋಹಿತ್ ಜಂಬರ್ಡಿ, ಬಿಜೆಪಿ ಟಿಕೇಟ್ ಪ್ರಬಲ ಅಕಾಂಕ್ಷಿ ಸಿಮೆಂಟ್ ಮಂಜುನಾಥ್, ಕಾರ್ಯಕ್ರಮದ ಸಂಚಾಲಕ ಬಾಗೆ ಜಯಪ್ರಕಾಶ್, ಜಿಲ್ಲಾ ಮಹಿಳಾ ಮೋರ್ಚ ಉಪಾಧ್ಯಕ್ಷೆ ಚಂದ್ರಕಲಾ ಕಾಂತರಾಜ್, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಜಿಲ್ಲಾ ರೈತಮೋರ್ಚ ಅಧ್ಯಕ್ಷ ಬ್ಯಾಕರವಳ್ಳಿ ಭಾಸ್ಕರ್, ತಾಲೂಕು ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಕ್ಯಾನಹಳ್ಳಿ ವಾಸು, ರೈತ ಮೋರ್ಚಾ ಅಧ್ಯಕ್ಷ ಗುಲಗಳಲೆ ಮೋಹನ್, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಜೀತು ಶುಕ್ರವಾರಸಂತೆ, ಯುವಮೋರ್ಚಾ ಕಾರ್ಯದರ್ಶಿ ಚಿಕ್ಕನಾಯಕನಹಳ್ಳಿ ಸಾಗರ್, ಕೆಡಿಪಿ ಸದಸ್ಯ ಮಧು ಬೊಮ್ಮನಕೆರೆ, ಅಲ್ಪಸಂಖ್ಯಾತ ಮೋರ್ಚಾದ ತಾಲೂಕು ಅಧ್ಯಕ್ಷ ಆನಂದ್ ಲಿಯೋವಾಸ್,ಉಮೇಶ್,ದೀಪು ಮುಂತಾದವರಿದ್ದರು.

RELATED ARTICLES
- Advertisment -spot_img

Most Popular