ಸಕಲೇಶ್ವರ ಸ್ವಾಮಿ ದೇವಸ್ಥಾನದ ಸಹಾಯಕ ಅರ್ಚಕ ಮಂಜುನಾಥ್ ಪ್ರಸಾದ್ ( ಶ್ಯಾಮ್) ರವರ ತಾಯಿ ನಿಧನ
ಸಕಲೇಶಪುರ: ಪಟ್ಡಣದ ಐತಿಹಾಸಿಕ ಸಕಲೇಶ್ವರ ಸ್ವಾಮಿ ದೇವಸ್ಥಾನದ ಸಹಾಯಕ ಅರ್ಚಕ ಮಂಜುನಾಥ್ ಪ್ರಸಾದ್ ( ಶ್ಯಾಮ್) ರವರ ತಾಯಿ ಆಲುಮೇಲಮ್ಮ (85) ಹೃದಯಾಘಾತದಿಂದ ನಿಧನರಾಗಿದ್ದಾರೆ. 85 ವಯಸ್ಸಾಗಿದ್ದರು ಸಹ ಲವಲವಿಕೆಯಿಂದ ಇದ್ದ ಅವರು ಇಂದಿನ ತಲೆಮಾರಿಗೆ ಆದರ್ಶವಾಗಿದ್ದರು. ಕಳೆದ ಕೆಲವು ತಿಂಗಳುಗಳ ಹಿಂದಷ್ಟೆ ವಿಶ್ವ ಹಿರಿಯ ನಾಗರಿಕರ ದಿನದ ಅಂಗವಾಗಿ ಮೃತರನ್ನು ರೋಟರಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಗಿತ್ತು. ಮೃತರು ಮಗ,ಸೊಸೆ,ಮಗಳು, ಇಬ್ಬರು ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ತಾಲೂಕು ಬ್ರಾಹ್ಮಣ ಸಮಾಜ, ಸಕಲೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಸೇರಿದಂತೆ ಹಲವರು ಮೃತರ ಸಾವಿಗೆ ಸಂತಾಪ ಸೂಚಿಸಿದ್ದಾರೆ.