Sunday, April 20, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ಕ್ರಿಕೆಟ್ ಪಂದ್ಯಾಟದ ಮುಕ್ತಾಯ ಸಮಾರಂಭದಲ್ಲಿ ಬ್ಯಾಟು ಬೀಸಿದ ಶಾಸಕ ಎಚ್ ಕೆ...

ಸಕಲೇಶಪುರ : ಕ್ರಿಕೆಟ್ ಪಂದ್ಯಾಟದ ಮುಕ್ತಾಯ ಸಮಾರಂಭದಲ್ಲಿ ಬ್ಯಾಟು ಬೀಸಿದ ಶಾಸಕ ಎಚ್ ಕೆ ಕುಮಾರಸ್ವಾಮಿ

ಸಕಲೇಶಪುರ : ಕ್ರೀಡೆಯಿಂದ ಮನುಷ್ಯನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢನಾಗುತ್ತಾನೆ ಎಂದು ಶಾಸಕ ಎಚ್ ಕೆ ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಯಸಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಈಚಲಬೀಡು ಗ್ರಾಮದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿ, ಕ್ರಿಕೆಟ್ ನಮ್ಮ ದೇಶದ ಕ್ರೀಡೆಯಾಗದಿದ್ದರೂ ಇಂದು ಕ್ರಿಕೆಟ್ ಅತೀ ಹೆಚ್ಚಾಗಿ ಆಡುವ ಹಾಗೂ ನೋಡುವ ದೇಶದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.ಕ್ರೀಡೆಯು ಆಡುವಾಗ ಪ್ರತಿಯೊಬ್ಬನು ಕ್ರೀಡಾ ಮನೋಭಾವದಿಂದ ಆಡಬೇಕು ಸೋಲು ಗೆಲುವು ಕ್ರೀಡೆಯಲ್ಲಿ ಸಾಮಾನ್ಯವಾಗಿದ್ದು ಗೆದ್ದವನು ಹಿಗ್ಗಬಾರದು ಸೋತವನ್ನು ಕುಗ್ಗಬಾರದು ಎಂದು ಹೇಳಿದರು ಗ್ರಾಮಾಂತರ ಪ್ರದೇಶದಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ಇನ್ನಷ್ಟು ಹೆಚ್ಚಾಗಿ ಗ್ರಾಮೀಣ ಪ್ರತಿಭೆಗಳು ದೇಶವನ್ನು ಪ್ರತಿನಿಧಿಸುವಂತಾಗಬೇಕೆಂದು ಹೇಳಿದರು.

ಶಾಸಕರು ಬ್ಯಾಟು ಹಿಡಿದು ಆಟವಾಡುವ ಮೂಲಕ ಕ್ರೀಡಾಪಟುಗಳಿಗೆ ಮತ್ತು ವೀಕ್ಷಕರಿಗೆ ಮನರಂಜಿಸಿದರು. ವೇದಿಕೆಯ ಕಾರ್ಯಕ್ರಮದ ನಡುವೆ ಬಿಜೆಪಿಯ ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪೂರ್ಣಿಮಾ, ಗ್ರಾಮ ಪಂಚಾಯತಿ ಸದಸ್ಯರಾದ ಕಳಲೆ ಗುರುರಾಜ್, ರಾಮೇಗೌಡ , ಶೈಲೆಂದ್ರ, ಮಿಥುನ್, ಮೈತ್ರಿ, ಜೆಡಿಎಸ್ ಪಕ್ಷದ ಮುಖಂಡರಾದ ಸಚ್ಚಿನ್ ಪ್ರಸಾದ್, ಮಂಜೂರು ತಮ್ಮಣ್ಣಿ ಮತ್ತಿತರರು ಭಾಗವಹಿಸಿದ್ದರು.

RELATED ARTICLES
- Advertisment -spot_img

Most Popular