ಆಲೂರು : ತಾಲ್ಲೂಕಿನ ಪಾಳ್ಯ ಹೋಬಳಿ ಕಣತೂರು ಸಮೀಪದ ಸಿದ್ದಾಪುರ ಗ್ರಾಮದ ಪ್ರಕಾಶ್ ಅವರಿಗೆ ಸೇರಿದ ಸುಮಾರು 4 ಎಕರೆ ಕಾಫಿ ತೋಟ ಶುಕ್ರವಾರ ವಿದ್ಯುತ್ ಶಾರ್ಟ್ ಸರ್ಕೂಟ್‌ನಿಂದ ಸಂಪೂರ್ಣ ಸುಟ್ಟುಹೋಗಿದೆ.
ಸಿದ್ದಾಪುರ ಗ್ರಾಮದ ಪ್ರಕಾಶ್ ಅವರಿಗೆ ಸೇರಿದ 9 ಎಕರೆ ಕಾಫಿ ತೋಟದ ಮೇಲೆ ಹೈ ವೋಲ್ಟೇಜ್ ವಿದ್ಯುತ್ ತಂತಿಗಳು (11ಕೆ.ವಿ) ಹಾದು ಹೋಗಿದ್ದು, ಶುಕ್ರವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಿಡಿ ಕಾಣಿಸಿಕೊಂಡು ತೋಟಕ್ಕೆ ಬೆಂಕಿ ಆವರಿಸಿ ಕೊಂಡಿದೆ ಎನ್ನಲಾಗಿದೆ. ತೋಟದಲ್ಲಿದ್ದ ರೋಬಸ್ಟಾ ಕಾಫಿ ಗಿಡಗಳು, ಅಡಕೆ, ಕಾಳು ಮೆಣಸು, ಬಾಳೆ ಸೇರಿ ತೋಟದಲ್ಲಿದ್ದ ಕೊಳವೆ ಬಾವಿ ಅದಕ್ಕೆ ಅಳವಡಿಸಿದ್ದ ಪೈಪ್ ಗಳು ಸುಟ್ಟು ಹೋಗಿದ್ದು ಸುಮಾರು 15 ಲಕ್ಷ ಕ್ಕೂ ಹೆಚ್ಚು ಮೌಲ್ಯದಷ್ಟು ಬೆಂಕಿಗೆ ಆಹುತಿಯಾಗಿ ಹಾನಿಯಾಗಿದೆ.
ಇವರ ಜಮೀನಿನ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಪ್ರಕಾಶ್ ಮನೆಯವರಿಗೆ ಅವರಿಗೆ ಮಾಹಿತಿ ನೀಡಿದ್ದರಿಂದ ಗ್ರಾಮದವರೆಲ್ಲಾ ಸೇರಿ ಬೆಂಕಿ ನಂದಿಸಲು ಮುಂದಾಗಿದ್ದಾರೆ ಅದರೆ ಹೆಚ್ಚು ಗಾಳಿ ಹಾಗೂ ಉರಿಬಿಸಿಲು ಹೆಚ್ಚು ಇದ್ದುದರಿಂದ ಬೆಂಕಿ ನಂದಿಸಲು ಸಾದ್ಯವಾಗದೇ ತಕ್ಷಣ ಚೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು ನಂತರ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಲಾಗಿತ್ತಾದರೂ ಅದು ಹಾಸನದಿಂದ ಬರುವಷ್ಟರೊಳಗಾಗಿ ಸುಮಾರು ನಾಲ್ಕೈದು ಎಕರೆ ಕಾಫಿ ತೋಟ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು ಈ ಸಂಬಂಧ ಆಲೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಮೀನು ಮಾಲೀಕ ಪ್ರಕಾಶ್ ಮಾತನಾಡಿ ಸುಮಾರು ನಾಲ್ಕೈದು ವರ್ಷದಿಂದ ಕಾಪಾಡಿಕೊಂಡು ಬಂದಿದ್ದ ಕಾಫಿ ತೋಟ ಹಾಗೂ ಅದಕ್ಕೆ ಅಳವಡಿಸಿದ್ದ ಪಂಪ್ ಸೆಟ್ಗಳು ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ನಮ್ಮ ಬದುಕಿಗೆ ಆಸರೆ ಯಾಗಿದ್ದ ತೋಟ ಸಂಪೂರ್ಣವಾಗಿ ಸುಟ್ಟು ಹೋಗಿ 15 ಲಕ್ಷದಷ್ಟು ಹಾನಿಯಾಗಿದೆ ಇದರಿಂದ ನಾವು ಬದುಕಿದ್ದು ಸತ್ತಂತಾಗಿದೆ ನಮಗೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ನೀಡಬೇಕು ಎಂದು ನೋವು ತೋಡಕೊಂಡರು.
ಎಂ.ಯು.ಎಸ್.ಎಸ್ ಗೆ ಕಾಂಗ್ರೆಸ್ ಅಧ್ಯಕ್ಷರ ಒತ್ತಾಯ : ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಎಸ್.ಎಸ್.ಶಿವಮೂರ್ತಿ ಮಾತನಾಡಿ ತಾಲ್ಲೂಕಿನ ಮಗ್ಗೆ ಗ್ರಾಮದಲ್ಲಿ ಹೊರತುಪಡಿಸಿ ಬೇರೆ ಎಲ್ಲಿಯೂ ಎಂಯುಎಸ್ ಎಸ್ ಇಲ್ಲದಂತಾಗಿದೆ ಇದೊಂದು ಎಂಯುಎಸ್ ಎಸ್ ಇಡೀ ಆಲೂರು ತಾಲ್ಲೂಕಿಗೆ ವಿದ್ಯುತ್ ಸರಬರಾಜು ಮಾಡಬೇಕಾದ ಅನಿವಾರ್ಯತೆ ಇದೆ ಅದ್ದರಿಂದಲೇ ಇಲ್ಲಿ ಪದೇ ಪದೇ ಅವಘಡಗಳು ನಡೆಯುತ್ತಿದೆ ಇದರಿಂದ ರೈತರು ಬಾರಿ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಹಲವು ಬಾರಿ ಚೆಸ್ಕಾಂಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಹಲವು ಬಾರಿ ಈ ಬಗ್ಗೆ ಪತ್ರಿಕೆ ಟಿವಿಗಳಲ್ಲಿ ಪ್ರಸಾರವಾದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೇ ಕೂಡಲೇ ಬೆಂಕಿಯಿಂದ ಹಾನಿಯಾಗಿರುವ ತೋಟದ ಮಾಲೀಕರಿಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.