ಸಕಲೇಶಪುರ: ತಾಲೂಕು ಬಿಜೆಪಿ ಕಚೇರಿಯಲ್ಲಿ ತುಂಡು ಗುಂಡು ಪಾರ್ಟಿಯ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ್ ಸಂಗಿ ರಾಜೀನಾಮೆ ನೀಡಿದ್ದಾರೆ.
ಜಿಲ್ಲಾಧ್ಯಕ್ಷರಿಗೆ ರಾಜೀನಾಮೆ ಪತ್ರ ನೀಡಿರುವ ಪತ್ರದ ಸಾರಾಂಶ ಹೀಗಿದೆ. ದಿನಾಂಕ 1.3.2023 ರಂದು ಬುಧುವಾರ ಸಕಲೇಶಪುರ ವಿಧಾನಸಭಾ ಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ತುಣುಕು ಹರಿದಾಡುತ್ತಿದೆ. ಅದರಲ್ಲಿ ಪಾರ್ಟಿಯ ಕಚೇರಿಯಲ್ಲಿ ಊಟ ಮಾಡುತ್ತಿರುವ ಮತ್ತು ಮಧ್ಯಪಾನ ಮಾಡುತ್ತಿರುವ ದೃಶ್ಯಗಳಿವೆ .ಈ ಘಟನೆ ನಡೆದಿರುವುದು ಬಹಳ ಹಿಂದೆ ನಾವು ವಿಧಾನ ಪರಿಷತ್ತಿನ ಚುನಾವಣೆಯ ಪ್ರಚಾರ ಮುಗಿಸಿ ತಡವಾಗಿ ಸಕಲೇಶಪುರ ನಗರಕ್ಕೆ ಬಂದೆವು ಜೊತೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಸಂದೇಶ್ ಮತ್ತು ಇನ್ನೊಬ್ಬ ಪ್ರಧಾನ ಕಾರ್ಯದರ್ಶಿಯಾದ ಲೋಕೇಶ್ ಮಾಧ್ಯಮ ಪ್ರಮುಖ ದಯಾನಂದ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಕ್ಯಾಮನಹಳ್ಳಿ ರಾಜಕುಮಾರ್, ಜಿಲ್ಲಾ ಓಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದ ಮಣಿಕಂಠ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿಯಾದ ಜೈ ಶಂಕರ್ ಇದ್ದೆವು. ತುಂಬಾ ಹಸಿವು ಆಗಿದ್ದರಿಂದ ಊಟ ತರಲು ಪ್ರಧಾನ ಕಾರ್ಯದರ್ಶಿಯಾದ ಲೋಕೇಶ್ ಅವರು ಹೋಗಿ ಹೊರಗಡೆಯಿಂದ ಊಟದ ಪಟ್ಟಣಗಳನ್ನು ತಂದರು ಅದರ ಜೊತೆಯಲ್ಲಿ ಮಧ್ಯವನ್ನು ತಂದಿರುತ್ತಾರೆ ನಾನು ಕಾರ್ಯಾಲಯದಲ್ಲಿ ಮಾಡುತ್ತಿರುವುದು ತಪ್ಪು, ಲೋಕೇಶ್ ಇದೆಲ್ಲ ಮಾಡಬಾರದು ಎಂದಿದ್ದಕ್ಕೆ ಕೋಪಗೊಂಡು ಏನು ಇಲ್ಲ ಎಲ್ಲ ತೆಗಿತೇನೆ ನೀವು ಕೂತುಕೊಳ್ಳಿ ಎಂದು ವಿಡಿಯೋ ಮಾಡಿ ಈ ರೀತಿ ಮಾಡಿರುತ್ತಾನೆ. ಇದು ಆಗಿ ಎಂಟು ತಿಂಗಳು ಕಳೆದಿದೆ ಇದು ಯಾರೋ ಆಮಿಷವೊಡ್ಡಿ ಮಾಡಿಸಿರುವ ಕೆಲಸ ಈ ಕಾರಣದಿಂದ ಒಬ್ಬ ಅಧ್ಯಕ್ಷನಾಗಿ ನೈತಿಕ ಹೊಣೆ ಹೊತ್ತು ಈ ಘಟನೆಗೆ ವಿಷಾದವನ್ನು ವ್ಯಕ್ತಪಡಿಸಿ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತಿದ್ದೇನೆ.ಇಲ್ಲಿವರೆಗೂ ನನಗೆ ಸಹಕರಿಸಿದ ಎಲ್ಲ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಈ ಘಟನೆಯನ್ನು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಪಕ್ಷಕ್ಕೆ ಮುಜುಗರ ತಂದಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಬೇಕೆಂದು ಮತ್ತು ನಾನು ಹೇಳಿದ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಕ್ರಮ ತೆಗೆದು ಕೊಳ್ಳಬೇಕೆಂದು ವಿನಂತಿಸುತ್ತೇನೆ.ಕಳೆದ 30 ವರ್ಷಗಳಿಂದ ನಾನು ನನ್ನ ಸ್ವಂತ ಹಿತಾಸಕ್ತಿಯನ್ನು ಬಿಟ್ಟು ಪಕ್ಷದ ಮತ್ತು ಪರಿವಾರ ಸಂಘಟನೆಯಲ್ಲಿ ನನ್ನನ್ನು ತೊಡಗಿಸಿಕೊಂಡು ಸುದೀರ್ಘ ಸೇವೆ ಸಲ್ಲಿಸಿರುತ್ತೇನೆ .ಈ ಎಲ್ಲಾ ಸಂದರ್ಭಗಳಲ್ಲಿ ನನಗೆ ಅನೇಕ ಬಾರಿ ವೈಯಕ್ತಿಕ ಆರ್ಥಿಕ ಸಂಕಷ್ಟ ಎದುರಾದರೂ ದೇಶ ಮೊದಲು ಎಂದು ನನ್ನ ಸೇವಾ ಕಾರ್ಯವನ್ನು ಪರಿವಾರ ಸಂಘಟನೆಗಳಲ್ಲಿ ಮಾಡಿರುತ್ತೇನೆ. ನನಗೆ ಎಲ್ಲ ಸಂದರ್ಭಗಳಲ್ಲಿ ವಿಶೇಷವಾಗಿ ಸಹಕರಿಸಿದ ನನ್ನ ಕಾರ್ಯಕರ್ತರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತೇನೆ