ಪಟ್ಟಣದ ಶ್ರೀ ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಾಳೆ ಗುರುವಾರ ಬೆಳಗ್ಗೆ 9 ಗಂಟೆಗೆ ಹೇಮಾವತಿ ನದಿ ತೀರದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ತಾಲ್ಲೂಕು ವಿಶ್ವ ಹಿಂದು ಪರಿಷತ್ ನಿಂದ ಹಮ್ಮಿಕೊಳ್ಳಲಾಗಿದೆ, ಈ ಪೂಜೆಯಲ್ಲಿ ಸುಮಾರು 100 ದಂಪತಿಗಳು ಈ ವಿಶೇಷವಾದ ಸ್ವಸ್ತಿಕ ಪೂಜೆಗೆ ಕಳಸ ಪ್ರತಿಷ್ಠಾಪನೆ ಮಾಡಿ, ಸಂಕಲ್ಪ ಮತ್ತು ಆರತಿಯೊಂದಿಗೆ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಲಿದ್ದಾರೆ. ಸರ್ವ ಹಿಂದು ಸಮಾಜಕ್ಕೆ ಒಳಿತಾಗಲಿ ಎಂಬ ಉದ್ದೇಶದಿಂದ ಈ ಪೂಜಾ ಕೈಂಕರ್ಯ ವನ್ನು ನಡೆಸಲಾಗುತ್ತದೆ.
ಈ ಕಾರ್ಯಕ್ರಮಗಳನ್ನು ಪೂಜನೀಯ ಶ್ರೀ ಶ್ರೀ ಶ್ರೀ ಷ.ಬ್ರ.ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ತೆಂಕಲಗೂಡು ಬೃಹನ್ಮಠ, ಯಸಳೂರು ಇವರು ಚಾಲನೆ ನೀಡಿ ಆಶಿರ್ವಚನವನ್ನು ನೀಡಲಿದ್ದಾರೆ. ಹಾಗೂ ಈ ಕಾರ್ಯಕ್ರಮದಲ್ಲಿ ವಿಶೇಷ ಸಂಕಲ್ಪ, ಸ್ವಸ್ತಿಕ ಪೂಜೆ ಹಾಗೂ ಸತ್ಯನಾರಾಯಣ ಪೂಜೆಯನ್ನು ವೇದಾಬ್ರಹ್ಮ ಶ್ರೀ ಮಹೇಶ್ ಭಟ್‌ರವರು ನಡೆಸಿಕೊಡಲಿದ್ದಾರೆ ಈ ಕಾರ್ಯಕ್ರಮದಲ್ಲಿ ಗಣ್ಯರಾಗಿ ಬಿಜೆಪಿ ಮುಖಂಡ ಸಿದ್ದೇಶ್ ನಾಗೇಂದ್ರ, ಬಾಗೆ ಜಯಪ್ರಕಾಶ್ ದೊಡ್ಡದೀಣಿ, , ದೀಪಕ್ , ಉದ್ಯಮಿಗಳು ಬೆಂಗಳೂರು, ಪುನೀತ್ ಬನ್ನಳ್ಳಿ, ಉದ್ಯಮಿಗಳು ಹಾಗೂ ಸಮಾಜ ಸೇವಕರು, ಸಕಲೇಶಪುರ ಇವರುಗಳು ಆಗಮಿಸಲಿದ್ದಾರೆ. ಸಮಸ್ತ ಹಿಂದು ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು, ವಿಶೇಷವಾಗಿ ವಿಶ್ವಹಿಂದು ಪರಿಷತ್ ಬಜರಂಗದಳ, ದುರ್ಗಾವಾಹಿನಿ ಹಾಗೂ ಮಾತೃ ಮಂಡಳಿ ಸಕಲೇಶಪುರ ತಾಲ್ಲೂಕಿನ ಎಲ್ಲಾ ಕಾರ್ಯಕರ್ತರು ಭಾಗವಹಿಸಿ, ಶ್ರೀ ಸತ್ಯನಾರಾಯಣ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಮಂಜುನಾಥ್ ಕಬ್ಬಿನಗದ್ದೆ, ಕಾರ್ಯದರ್ಶಿ, ವಿ.ಹಿಂ.ಪ ಸಕಲೇಶಪುರ, ಇವರು ಪತ್ರಿಕೆಗೆ ಮನವಿ ಮಾಡಿದ್ದಾರೆ.