ಶ್ರವಣ ದೋಷದ ಕುರಿತು ಆತಂಕ ಪಡುವುದು ಬೇಡ: ಲಯನ್ಸ್ ಪ್ರಾಂತೀಯ ಅಧ್ಯಕ್ಷ ಡಾ.ನವೀನ್ ಚಂದ್ರಶೆಟ್ಟಿ
ಸಕಲೇಶಪುರ: ಸ್ವಲ್ಪ ಶ್ರದ್ದೆ ಮತ್ತು ಸಕಾಲದಲ್ಲಿ ವೈದ್ಯರುಗಳ ಸಲಹೆಯಂತೆ ಚಿಕಿತ್ಸೆ ಪಡೆದರೆ ಶ್ರವಣ ತೊಂದರೆ ಹಾಗೂ ವಾಕ್ ತೊಂದರೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಲಯನ್‌ಸ್ ಪ್ರಾಂತೀಯ ಅಧ್ಯಕ್ಷ ಡಾ.ನವೀನ್ ಚಂದ್ರ ಶೆಟ್ಟಿ ತಿಳಿಸಿದರು.
ಪಟ್ಟಣದ ಲಯನ್ಸ್ ಕ್ಲಬ್, ಸಕಲೇಶಪುರ, ಲಯನ್ಸ್ ಸಂಸ್ಥೆ ಬೆಂಗಳೂರು ಈಸ್ಟ್, ಡಾ.ಎಸ್.ಆರ್ ಚಂದ್ರಶೇಖರ್, ವಾಕ್ ಮತ್ತು ಶ್ರವಣ ದೋಷವಿರುವವರಿಗೆ ಪಟ್ಟಣದ ಲಯನ್ಸ್ ಸೇವಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಉದ್ಘಾಟನೆ ನಿರ್ವಹಿಸಿ ಮಾತನಾಡಿ ಅತಿಯಾದ ಶಬ್ದ ಮಾಲಿನ್ಯದಿಂದ ಇತ್ತೀಚಿನ ದಿನಗಳಲ್ಲಿ ಯುವ ಜನತೆ ಶ್ರವಣ ದೋಷದಿಂದ ಬಳಲುತ್ತಿದ್ದಾರೆ. ಉಚ್ಚಾರಣೆಯ ತೊಂದರೆ, ಭಾಷೆ ತೊಂದರೆ, ಕಲಿಕಾ ತೊಂದರೆ,ಕಿವಿ ಸೋರುವ ಸಮಸ್ಯೆ,ಕಿವಿ ಕೇಳದೆ ಇರುವವರು, ಸೀಳು ತುಟಿ, ಬುದ್ಧಿಮಾಂದ್ಯತೆ, ಧ್ವನಿ ತೊಂದರೆ,ಧ್ವನಿಯಲ್ಲಿ ಬರುವ ಏರುಪೇರು , ರೋಗಗಳಿಗೆ ಸಂಬಂದಪಟ್ಟಂತೆ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಈ ಮೇಲಿನ ಸಮಸ್ಯೆ ಇರುವವರು ಆತಂಕ ಪಡುವುದು ಬೇಡ , ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆದರೆ ಸಮಸ್ಯೆಗಳು ಬಗೆಹರಿಯುವುದರಲ್ಲಿ ಅನುಮಾನವಿಲ್ಲ ಎಂದರು.
ಶಿಬಿರದಲ್ಲಿ ಸುಮಾರು 80 ಮಂದಿ ಫಲಾನುಭವಿಗಳು ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಫಲಾನುಭವಿಗಳಿಗೆ ಬೆಂಗಳೂರಿನ ಸ್ಪೀಚ್ ಆಂಡ್ ಹಿಯರಿಂಗ್ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು ಹಾಗೂ ಅಗತ್ಯ ಯಂತ್ರೋಪಕರಣಗಳನ್ನು ರಿಯಾಯತಿ ದರದಲ್ಲಿ ನೀಡಲಾಗುತ್ತದೆ.
ಈ ಸಂಧರ್ಭದಲ್ಲಿ ಬೆಂಗಳೂರಿನ ವೈದ್ಯರುಗಳಾದ ಡಾ.ಹಸೀಬ್., ಡಾ.ರೋಷನ್ ಜೋಮೋನ್, ತಜ್ಞರುಗಳಾದ ಹರ್ಷದ್, ಥಾಮಸ್,ಸ್ಯಾಮುವೇಲ್ ಮತ್ತು ದುಶ್ಯಂತ್,ಲಯನ್‌ಸ್ ಸಂಸ್ಥೆ ತಾಲೂಕು ಅಧ್ಯಕ್ಷ ಜಯಶಂಕರ್, ಉಪಾಧ್ಯಕ್ಷ ಗಿರೀಶ್(ಮಂಜು),ಖಚಾಂಚಿ ದುರ್ಗೇಶ್, ಲಯನ್ಸ್ ಮಾಜಿ ಅಧ್ಯಕ್ಷ ಲಯನ್ಸ್ ಡಾ.ವೈ.ಎಂ.ಸುಧಾಕರ್, ಮೀನಾಕ್ಷಿ ಖಾದರ್, ಪ್ರಸನ್ನಕುಮಾರ್, ವಿಠಲ್, ಲಿಯೋ ಸಂಸ್ಧೆ ಅಧ್ಯಕ್ಷೆ ಆಶ್ರಿತಾ ಉಪಸ್ಥಿತರಿದ್ದರು.