ಸಕಲೇಶಪುರ : ಐಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಕಲ್ಲೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸುಮಾರು ಹತ್ತು ರಾಸುಗಳು ನಿಗೂಢವಾಗಿ ಸಾವನ್ನಪ್ಪಿವೆ. ರಾಸುಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಎಚ್ ಕೆ ಎಚ್.ಕೆ.ಕುಮಾರಸ್ವಾಮಿ ಗ್ರಾಮಕ್ಕೆ ಭೇಟಿ ನೀಡಿ ಪ್ರಾಣಿಗಳ ಸಾವಿಗೆ ಕಾರಣ ತಿಳಿಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
10 ಪ್ರಾಣಿಗಳು ಒಂದೇ ದಿನ ಸಾವನ್ನಪ್ಪಿಲ್ಲ. ಕಳೆದ ಹತ್ತು ದಿನಗಳಿಂದ ಹತ್ತಕ್ಕೂ ಹೆಚ್ಚು ಜಾನುವಾರು ಸಾವನ್ನಪ್ಪಿವೆ. ಮನೆಯಲ್ಲಿ ಈ ರೀತಿ ಜಾನುವಾರುಗಳು ಸಾವನ್ನಪ್ಪುತ್ತಿರುವುದು ಗ್ರಾಮಸ್ಥರಿಗೆ ಅಚ್ಚರಿ ಮೂಡಿಸಿದೆ. ಯಾರಾದರೂ ವಾಮಾಚಾರ ಮಾಡಿಸಿದ್ದಾರೆನ್ನುವ ಭಯ ಶುರುವಾಗಿದೆ. ಸಾವಿರಾರು ಮೌಲ್ಯದ ಬೆಲೆಬಾಳುವ ದನಕರುಗಳು ಸಾವನ್ನಪ್ಪಿದ್ದು, ನಿನ್ನೆಯೂ ಸಹ ಸಾವಿರಾರು ರೂಪಾಯಿ ಬೆಲೆ ಬಾಳುವ ಒಂದು ಎತ್ತು ಸಾವಿಗೀಡಾಗಿದೆ.
ಶಾಸಕರು ರೈತರ ಮನೆಗೆ ಭೇಟಿ ನೀಡಿ ಪ್ರಾಣಿಗಳ ಸಾವಿಗೆ ನಿಖರ ಕಾರಣ ಪತ್ತೆಹಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.