ಅರಣ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಚಿಕಿತ್ಸೆ ವೆಚ್ಚ ಸರ್ಕಾರ ಬರಿಸುವಂತೆ ಸಾಮಾಜಿಕ ಕಾರ್ಯಕರ್ತ ಸಾಗರ್ ಜಾನೆಕೆರೆ ಅಗ್ರಹ.
ಕಾಡ್ಗಿಚ್ಚಿನಿಂದ ಗಾಯಗೊಂಡಿರುವ ಆರ್.ಆರ್.ಟಿ ಹಾಗೂ ಇ.ಟಿ.ಎಫ್ ಸಿಬ್ಬಂದಿಗಳಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯ.
ಹಾಸನದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಗೆ ಸಜ್ಜು.
ಸಕಲೇಶಪುರ : ಇತ್ತೀಚಿಗೆ ತಾಲೂಕಿನ ಕಾಡುಮನೆ ಬಳಿ ಕಾಡಿಗೆ ಬಿದ್ದ ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ತೆರಳಿದ್ದ ವೇಳೆ ಸುಟ್ಟ ಗಾಯಗಳಿಂದ ಗಾಯಗೊಂಡಿರುವ ಹೊರಗುತ್ತಿಗೆ ನೌಕರರ ಸಂಪೂರ್ಣ ಆರೋಗ್ಯ ವೆಚ್ಚವನ್ನು ಸರ್ಕಾರವೇ ಭರಿಸುವಂತೆ ಸಾಮಾಜಿಕ ಕಾರ್ಯಕರ್ತ ಸಾಗರ್ ಜಾನಕೆರೆ ಆಗ್ರಹಿಸಿದ್ದಾರೆ.
ಆರ್.ಆರ್.ಟಿ ಹಾಗೂ ಇ.ಟಿ. ಎಫ್ ಸಿಬ್ಬಂದಿಗಳಿಳು ಅಲ್ಪ ವೇತನಕ್ಕೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಇವರುಗಳಿಗೆ ಯಾವುದೇ ಭದ್ರತೆಯ ಹಣವಿಲ್ಲ. ಇನ್ನೂ ಕೆಲಸದ ವೇಳೆ ಗಾಯಗೊಂಡು ಆಸ್ಪತ್ರೆ ಸೇರಿದರೆ ಅದರ ವೆಚ್ಚವು ಸರ್ಕಾರ ಭರಿಸಲು ಸಾಧ್ಯವಿಲ್ಲ ಎಂದರೆ ಏನರ್ಥ ಎಂದು ಪ್ರಶ್ನೆ ಮಾಡಿದರು.
ಸಕಾರ ಕೂಡಲೆ ಮಾನವೀಯತೆ ದೃಷ್ಟಿಯಿಂದ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಬ್ಬಂದಿಗಳಿಗೆ ಸಂಪೂರ್ಣ ಚಿಕಿತ್ಸಾ ವೆಚ್ಚ ಪರಿಸುವುದರ ಜೊತೆಗೆ ಸಿಬ್ಬಂದಿಗಳು ಚೇತರಿಕೆಯಾಗುವವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸುವಂತೆಯೂ ಒತ್ತಾಯಿಸಿದ್ದಾರೆ. ಈಗಾಗಲೇ ನಮಗೆ ಬಂದಿರುವ ಮಾಹಿತಿ ಪ್ರಕಾರ ಹೊರಗುತ್ತಿಗೆಯ ಸಿಬ್ಬಂದಿಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತಿದೆ ಅವರಿಗೆ ಯಾವುದೇ ಭದ್ರತೆಯ ಹಣ ಸರ್ಕಾರ ನೀಡುತ್ತಿಲ್ಲ ಎಂದು ತಿಳಿದುಬಂದಿದೆ. ಒಂದು ವೇಳೆ ಸರ್ಕಾರ ಆ ರೀತಿ ಏನಾದರೂ ಮಾಡಿದರೆ ಹಾಸನದ ಉಪ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಸಾರ್ವಜನಿಕರೊಟ್ಟಿಗೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.