ಸಕಲೇಶಪುರ : ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಏಕಪಕ್ಷೀಯ ನಿರ್ಣಯಕ್ಕೆ ವಿರೋದ ವ್ಯಕ್ತಪಡಿಸಿದ ಎನ್‌ಪಿಎಸ್ ನೌಕರರ ಸಂಘದ (NPS Employees) ಸದಸ್ಯರ ಮೇಲೆ ಸರ್ಕಾರಿ ನೌಕರರ ಸಂಘದ ಕೆಲವರು ಹಲ್ಲೆ ನಡೆಸಿರುವುದು ಖಂಡನೀಯವೆಂದು ತಾಲ್ಲೂಕು ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ದೊರೇಶ್ ಹೇಳಿದರು
ಈ ಬಗ್ಗೆ ವಾಸ್ತವ ನ್ಯೂಸ್‌ಗೆ ಹೇಳಿಕೆ ನೀಡಿದ ಅವರು, ಸರ್ಕಾರಿ ನೌಕರರ ಸಂಘದ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಆದರೆ, ಅನಿರ್ದಿಷ್ಟಾವಧಿ ಹೋರಾಟವು ಎನ್‌ಪಿಎಸ್ ರದ್ದತಿಯ ಆದೇಶ ಮತ್ತು ಜುಲೈ 1ರಿಂದ ಜಾರಿಗೆ ಬರುವಂತೆ ಶೇ.40 ಹೆಚ್ಚಳದೊಂದಿಗೆ 7ನೇ ವೇತನ ಆಯೋಗದ ಅಧಿಕೃತ ಆದೇಶಗಳೊಂದಿಗೆ ಹೋರಾಟ ಅಂತ್ಯಗೊಳ್ಳಬೇಕು ಎಂಬುದಷ್ಟೇ ನಮ್ಮ ಒತ್ತಾಯವಾಗಿದೆ. ಈ ವಿಷಯವನ್ನು ಮಾತನಾಡಲು ಅವಕಾಶ ಕೋರಿದ ಎನ್‌ಪಿಎಸ್ ನೌಕರರ ಮೇಲೆ ಹಲ್ಲೆ ನಡೆಸಿ, ಕೆಲ ಮಹಿಳಾ ನೌಕರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯ ಎಂದು ಹೇಳಿದರು.
ಈ ಬಗ್ಗೆ ತಾಲ್ಲೂಕು ಸಂಘದ ಸಭೆ ಕರೆದು ಇದರ ವಿರುದ್ದ ಪ್ರತಿಭಟನೆ ಮತ್ತು ದೂರು ದಾಖಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.