ಜೆಡಿಎಸ್ ಯುವ ಮುಖಂಡರ ಮನೆಯಲ್ಲಿ ನಾಗರಹಾವು ಪ್ರತ್ಯಕ್ಷ.
ಸುರಕ್ಷಿತವಾಗಿ ಸೇರಿ ಹಿಡಿದು ಕಾಡಿಗೆ ಬಿಟ್ಟ ಉರಗತಜ್ಞ ಸ್ನೇಕ್ ಬಾಬು.
ಸಕಲೇಶಪುರ : ತಾಲೂಕಿನ ಬಾಳ್ಳುಪೇಟೆಯ ಮಾಜಿ ಎಪಿಎಂಸಿ ಅಧ್ಯಕ್ಷರಾದ ಲೋಕೇಶ್ ಅವರ ಮನೆಯಲ್ಲಿ ನಾಗರಹಾವು ಕಾಣಿಸಿಕೊಂಡಿತ್ತು.
ತಕ್ಷಣ ಲೋಕೇಶ್ ಅವರ ಪುತ್ರ ಜೆಡಿಎಸ್ ಯುವ ಮುಖಂಡ ಉದೀಶ್ ಅವರು ಉರಗ ತಜ್ಞ ಆಲೂರಿನ ಪಟ್ಟಣ ಪಂಚಾಯತಿಯ ಸದಸ್ಯರಾದ ಸ್ನೇಕ್ ಬಾಬು ರವರಿಗೆ ದೂರವಾಣಿ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಬಂದ ಸ್ನೇಕ್ ಬಾಬು ನಾಗರಹಾವುವನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಸ್ನೇಕ್ ಬಾಬು ಇದುವರೆಗೂ 15000ಕ್ಕೂ ಹೆಚ್ಚು ವಿವಿಧ ಜಾತಿಯ ಹಾವುಗಳನ್ನು ಸೆರೆಹಿಡಿದು ಕಾಡಿಗೆ ಬಿಟ್ಟಿರುತ್ತಾರೆ. ಯಾವುದೇ ಫಲಪೇಕ್ಷ ಇಲ್ಲದೆ ಸಮಾಜ ಸೇವೆ ಮಾಡುತ್ತಿರುವ ಆಲೂರಿನ ಪಟ್ಟಣ ಪಂಚಾಯಿತಿ ಸದಸ್ಯ ಸ್ನೇಕ್ ಬಾಬು ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.