ವ್ಯಕ್ತಿತ್ವದ ಸೌಜನ್ಯ ಮೂರ್ತಿ.. ಬಿ.ಎನ್.ರಾಮಚಂದ್ರ (ಭೈರಮುಡಿ ಚಂದ್ರು)
ಸಾಹಿತಿ ಯಡೇಹಳ್ಳಿ ಮಂಜುನಾಥ್ ರವರ ವಿಶೇಷ ಲೇಖನ
ಸಕಲೇಶಪುರ ಪುಣ್ಯ ಭೂಮಿ, ಧರ್ಮ – ದರ್ಶನಗಳ ತವರೂರು, ಶಾಂತಿ ಸಮೃದ್ಧಿಯ ತಾಣ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಸಂಸ್ಕೃತಿ ನಮ್ಮದು.ಈ ಪುಣ್ಯ ನಾಡಿನಲ್ಲಿ ಅನೇಕರು ಸಂಜನಿಸಿ ಎಲ್ಲರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ. ಅಂಥವರಲ್ಲಿ ಸೌಜನ್ಯ ಸದಾಚಾರ ನಿರತ ಶ್ರೀ ಬಿ. ಎನ್. ರಾಮಚಂದ್ರು ಒಬ್ಬರು.
ಸಕಲೇಶಪುರ ತಾಲೂಕಿನಲ್ಲಿ ಶ್ರೀ ರಾಮಚಂದ್ರು ಎಲ್ಲರ ಪ್ರೀತಿಯ ಭೈರಮುಡಿ ಚಂದ್ರಣ್ಣ ಹೆಸರು ಎಲ್ಲರ ಮನೆ-ಮನಗಳನ್ನು ಗೆದ್ದ ಹೃದಯ ಇವರದು. ಸುಸಂಸ್ಕೃತ ಮನೆತನದಲ್ಲಿ ಹುಟ್ಟಿ ಬೆಳೆದ ಇವರ ಬಾಳು ಸಾರ್ವಜನಿಕರ ಸೇವೆಯಲ್ಲಿ ಹೆಚ್ಚು ಮೀಸಲಾಗಿದ್ದಿರುವುದು ಅವರ ಜನಸ್ಪಂದನೆಗೆ ಸಾಕ್ಷಿಯಾಗಿದೆ.
ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಂಗಕ್ಕೆ ಅವರು ಸಲ್ಲಿಸಿದ ಸೇವೆ ವಿಶಿಷ್ಟ. ಬಡವರಿರಲಿ, ಶ್ರೀಮಂತರಿರಲಿ ಎಲ್ಲರೊಂದಿಗೂ ಬೆರೆತು
ಬಾಳುವ ಗುಣ ಇವರದು. ಆಡುಮುಟ್ಟದ ಗಿಡವಿಲ್ಲ, ಚಂದ್ರಣ್ಣ ಮಾಡದೇ ಇರುವ ಕೆಲಸವಿಲ್ಲ ಎಂಬ ಮರದ ವ್ಯಾಪಾರಿಯಾಗಿ,ಕಾಫಿ ಬೆಳೆಗಾರರಾಗಿ, ದಾನಿಗಳಾಗಿ,ಹಲವು ಸಂಘ ಸಂಸ್ಥೆಗಳ ಮುಂದಾಳುಗಳಾಗಿ,ಜಿಲ್ಲಾಪಂಚಾಯತ್ ಸದಸ್ಯರಾಗಿ ರಚನಾತ್ಮಕ ಕಾರ್ಯಗಳ ರೂವಾರಿಗಳಾಗಿ ಸೇವೆ ಸಲ್ಲಿಸಿರುವುದು ಮರೆಯಲಾಗದ ಸಂಗತಿ.
ಶ್ರೀ ರಾಮಚಂದ್ರು ಇತಿಹಾಸದ ಪುಟಗಳಲ್ಲಿ ತಮ್ಮ
ಹೆಜ್ಜೆಗಳನ್ನು ಮೂಡಿಸಿದ್ದಾರೆ. ತಮ್ಮ ಆದರ್ಶಮಯ ಧೈಯ ಧೋರಣೆ ಮತ್ತು ಸಿದ್ಧಿ ಸಾಧನೆಗಳ ಮೂಲಕ ಜನಮನವನ್ನು ತುಂಬಿದ್ದಾರೆ.
ಸಕಲೇಶಪುರ ತಾಲೂಕಿನ ಹಾನಬಾಳು ಹೋಬಳಿಯ ಭೈರಮುಡಿ ಗ್ರಾಮದಲ್ಲಿ ಶ್ರೀ ಬಿ ನಂಜೇಗೌಡ ಮತ್ತು ಸೀತಮ್ಮ ದಂಪತಿಗಳ ಪುತ್ರರಾಗಿ 12 -10-1955 ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣದ ಶಿಕ್ಷಣವನ್ನು ಮೇಕನಗದ್ದೆ ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿ ನಂತರ ಹಾಸನದ ಸಂತ ಜೋಸೆಫ್ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿ ನಂತರ ಸ್ವಂತ ಬಲದಲ್ಲಿ ದುಡಿಯುವ ಹಂಬಲದಿಂದ ಮರದ ವ್ಯಾಪಾರ ಹಾಗೂ ಜಮೀನಿ ಖರೀದಿ ಮತ್ತು ವ್ಯಾಪಾರ ನಡೆಸುವ ಉದ್ಯಮ ಪ್ರಾರಂಭಿಸಿ ಯಶಸ್ವಿಯಾಗಿ ಜನಾನುರಾಗಿ ಬೆಳೆದರು.
1989 ರಲ್ಲಿ ಸಕಲೇಶಪುರದ ಟೌನ್ ಹಾಲ್ ನಲ್ಲಿ ಸರಳ ಸಾಮೂಹಿಕ ವಿವಾಹದಲ್ಲಿ ಹೆತ್ತೂರು ಹೋಬಳಿ ಕಾಗಿನೆರಿ ಗ್ರಾಮದ ಶ್ರೀ ನಾಗರಾಜ್ ಮತ್ತು ಗಿರಿಜಾ ದಂಪತಿಗಳ ಪುತ್ರಿಯಾದ ಮೇನಕ ಅವರೊಂದಿಗೆ ದಾಂಪತ್ಯಕ್ಕೆ ಕಾಲಿರಿಸಿದರು.ಇದು ಚಂದ್ರಣ್ಣನವರ ಸರಳತೆಗೆ ಸಾಕ್ಷಿಯಾಗಿ ಸಾಕ್ಷಿಕರಿಸಿದ್ದು ಇತಿಹಾಸ. ಶ್ರೀಯುತರ ಸುಂದರ ದಾಂಪತ್ಯಕ್ಕೆ ನರ್ಥನ್ ಮತ್ತು ನವನೀತ್ ಎಂಬ ಪುತ್ರರು ಹಾಗೂ ನೂಪುರ ಎಂಬ ಪುತ್ರಿಯನ್ನು ಪಡೆದಿದ್ದಾರೆ.
ಅಪಾರ ಜನಪ್ರಿಯತೆ,ಜನರ ಹಾರೈಕೆ ಒತ್ತಾಯದ ವಿಶ್ವಾಸದಿಂದ ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸಿ, 2011ರಲ್ಲಿ ಜಾತ್ಯತೀತ ಜನತಾ ದಳದಿಂದ ಯಸಳೂರು ಜಿಲ್ಲಾಪಂಚಾಯ್ತಿ ಕ್ಷೇತ್ರದಿಂದ ಸ್ಪರ್ಧಿಸಿ ಜಯಶೀಲರಾಗಿ ಐದು ವರ್ಷಗಳ ಕಾಲ ಪರಿಣಾಮಕಾರಿಯಾಗಿ ಜನ ಸೇವೆ ನಿರ್ವಹಿಸಿದರು. ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಮುನ್ನುಡಿ ಬರೆದರು, ನಂತರ ರಾಜಕೀಯದ ಬದಲಾದ ಸನ್ನಿವೇಶಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕ್ಷೇತ್ರಗಳು ಪುನರ್ ವಿಂಗಡಣೆಯಾಗಿ ಮೀಸಲು ಬದಲಾದ ಸಂದರ್ಭದಲ್ಲಿ ಹಾನಬಾಳು ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ಅಲ್ಪ ಮತದ ಅಂತರದಲ್ಲಿ ಪರಾಬವಗೊಂಡರು,ಎಂದು ಎದೆಗುಂದದ ಚಂದ್ರಣ್ಣನವರು ನಂತರ ನಿರಂತರವಾಗಿ ಕಾರ್ಯಕರ್ತರ ಜನರೊಟ್ಟಿಗೆ ಹಲವಾರು ಕೆಲಸ ಕಾರ್ಯಗಳನ್ನು ಮಾಡುತ್ತಾ ಇಂದಿಗೂ ತಮ್ಮ ಶಕ್ತಿ ಸಾಮರ್ಥ್ಯ ಪ್ರೀತಿ ಅಭಿಮಾನವನ್ನು ಉಳಿಸಿಕೊಂಡಿರತಕ್ಕದ್ದು ಶ್ರೀಯುತರ ಕಾರ್ಯವೈಕರಿಗೆ ಹಿಡಿದ ಕೈಗನ್ನಡಿಯಾಗಿದೆ.ಇವರ ಜನಪ್ರಿಯನ್ನ ಪರಿಗಣಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ,ಸಕಲೇಶಪುರ ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಸಂಘಟನೆಗೆ ಆನೆಯ ಬಲ ಬಂದಂತಾಗಿದೆ.ಶ್ರೀಯುತರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಕಲೇಶಪುರ ಸಮಸ್ತರು ಕೂಡ ಕೈಜೋಡಿಸಿದಾದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ನೋಡುವ ಬಹುದಿನದ ಕನಸು ನನಸಾಗುವುದರಲ್ಲಿ ಸಂದೇಹವೇ ಇಲ್ಲ.
ಶ್ರೀ ರಾಮಚಂದ್ರ ಮೇನಕ ದಂಪತಿಗಳ ಪುತ್ರ ನರ್ತನ್ ಬೈರಮುಡಿಯವರು ಕೂಡ ಸಕಲೇಶಪುರ ಪುರಸಭೆಯ ಸದಸ್ಯರಾಗಿ ಜನಾನುರಾಗಿ ಜನಪ್ರಿಯರಾಗಿ ಯುವ
ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.2021 ನೇ ಇಸವಿಯಲ್ಲಿ ನಿಹಾರಿಕಾ ರವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಸುಂದರ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ದ್ವಿತೀಯ ಪುತ್ರ ನವನೀತ್ ಕೂಡ ತಂದೆಯವರ ಕೃಷಿ ಮತ್ತು ಉದ್ಯಮವನ್ನು ನೋಡಿಕೊಳ್ಳುತ್ತಿದ್ದಾರೆ.ಪುತ್ರಿ ನೂಪುರಾ ರವರು ವಿದೇಶದಲ್ಲಿ ಎಂ ಎಸ್ ಪದವಿ ಪಡೆದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಶ್ರೀಮತಿ ಮೇನಕ ಭೈರಮುಡಿ ಚಂದ್ರುರವರು ಮನೆಗೆ ತೆರಳಿದ ಪ್ರತಿಯೊಬ್ಬರನ್ನು ಪ್ರೀತಿ ಗೌರವ ಪೂರ್ವಕವಾಗಿ ಅಥಿತ್ಯ ನೀಡಿ ನಡೆಸಿಕೊಳ್ಳುವ ರೀತಿ ಸರ್ವರಿಗೂ ಬಹಳ ಪ್ರಿಯವಾದದ್ದು.ಪ್ರಸ್ತುತ ಭೈರಮುಡಿ ಚಂದ್ರುರವರು ಒಕ್ಕಲಿಗರ ಸಂಘದ ನಿರ್ದೇಶಕರಾಗಿಯೂ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಯುತರು ರಾಜಕೀಯ ಕ್ಷೇತ್ರದಲ್ಲಿ ಸಕಲೇಶಪುರದ ಹಾಸನ ಜಿಲ್ಲೆಯ ಕರ್ನಾಟಕದ ಧ್ರುವತಾರೆಯಾಗಿ ಬೆಳಗಲಿ ಎಂದು ಪ್ರಾರ್ಥಿಸುವ.
ಯಡೇಹಳ್ಳಿ”ಆರ್”ಮಂಜುನಾಥ್.
9901606220