ಸಕಲೇಶಪುರ : ಸಕಲೇಶಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಬೈರಮುಡಿ ರಾಮಚಂದ್ರ ನೇಮಕ
ಸಕಲೇಶಪುರ : ಮಾಜಿ ಜಿಪಂ ಸದಸ್ಯ ಬೈರಮುಡಿ ಚಂದ್ರಣ್ಣ ಅವರನ್ನು ಸಕಲೇಶಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ತಾಲ್ಲೂಕಿನ ಕಾಂಗ್ರೆಸ್ ಮುಖಂಡರ ಶಿಫಾರಸಿನ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ನೇಮಕಾತಿ ಆದೇಶ ಹೊರಡಿಸಿದ್ದಾರೆ.
ಬೈರಮುಡಿ ರಾಮಚಂದ್ರ ಅವರು ಜಿಪಂ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ತಕ್ಷಣವೇ ಬ್ಲಾಕ್ ಅಧ್ಯಕ್ಷರು ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರ ಜೊತೆ ಸೇರಿ ಪಕ್ಷ ಬಲವರ್ಧನೆ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ಅದೇಶ ಪತ್ರದಲ್ಲಿ ತಿಳಿಸಿದ್ದಾರೆ. ಇವರ ಆಯ್ಕೆಯನ್ನು ಕೆಪಿಸಿಸಿ ಸದಸ್ಯರಾದ ಯಡೆಹಳ್ಳಿ ಮಂಜುನಾಥ್, ಸಲೀಮ್ ಕೊಲ್ಲಹಳ್ಳಿ, ಮುಖಂಡರಾದ ಮುರಳಿ ಮೋಹನ್, ಗೊದ್ದು ಲೋಕೇಶ್, ತಸ್ಲೀಮ್ ಸ್ವಾಗತಿಸಿದ್ದಾರೆ