ಸಕಲೇಶಪುರ : ಕಾಡಾನೆ ಉಪಟಳಕ್ಕೆ ಅಂಕುಶ ಹಾಕಲು ಆಳುವ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಜೆಡಿಎಸ್ ಮುಖಂಡ ಕೆರೋಡಿಯ ಕೆ.ಕೆ ಮಹೇಶ್ ಹೇಳಿದರು.
ಮಲೆನಾಡು ಭಾಗದ ತಾಲೂಕಿನ ಎಸಳೂರು ಹೋಬಳಿ, ಕೆರೋಡಿ ಗ್ರಾಮದ ಸುತ್ತಮುತ್ತ ಕಾಡಾನೆ ಹಾವಳಿ ಮಿತಿಮೀರಿದೆ . ತಡರಾತ್ರಿ ಸುಮಾರು 2:30 ಗಂಟೆಗೆ ಕೆರೋಡಿಯ ತಾರಿಬೈಲು ಹಾಗೂ ಶಿವನಹಳ್ಳಿ ನಿವಾಸಿಗಳಾದ ಕಮಲಮ್ಮ, ಕೆ.ಕೆ.ರೇಣುಕ ಗೌಡ ರವರ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆ, ಏಲಕ್ಕಿ ಗಿಡ, ಕಾಫಿ ಗಿಡಗಳನ್ನು ತಿಂದು ತುಳಿದು ಸಂಪೂರ್ಣ ಬೆಳೆ ನಾಶಪಡಿಸಿರುತ್ತದೆ. ಆದರೆ ಡಬಲ್ ಇಂಜಿನ್ ಸರ್ಕಾರವು ಮಲೆನಾಡು ಭಾಗದ ಜನರಿಗೆ ಕಾಡಾನೆ ಹಾವಳಿಯಿಂದ ಶಾಶ್ವತ ಪರಿಹಾರ ಕೊಡಿಸುವಲ್ಲಿ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಘನ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಮಲೆನಾಡು ಭಾಗದ ಜನತೆಗೆ ಕಾಡಾನೆ ಹಾವಳಿ ಯಿಂದ ಶಾಶ್ವತ ಪರಿಹಾರದ ವ್ಯವಸ್ಥೆ ಮಾಡಿಕೊಡಬೇಕಾಗಿ ಮನವಿ ಮಾಡಿದ್ದಾರೆ.