Sunday, November 24, 2024
Homeಸುದ್ದಿಗಳುಕಾಡ್ಗಿಚ್ಚಿಗೆ ಬಲಿಯಾದ ಮೃತ ವನಪಾಲಕ ಸುಂದರೇಶ್ ಗೆ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ

ಕಾಡ್ಗಿಚ್ಚಿಗೆ ಬಲಿಯಾದ ಮೃತ ವನಪಾಲಕ ಸುಂದರೇಶ್ ಗೆ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ

ಕಾಡ್ಗಿಚ್ಚಿಗೆ ಬಲಿಯಾದ ಮೃತ ವನಪಾಲಕ ಸುಂದರೇಶ್ ಗೆ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ

 

ತೀರ್ಥಹಳ್ಳಿ: ಸಕಲೇಶಪುರದ ಕಾಡುಮನೆ ಸಮೀಪದ ಮಣಿಬೀಡು ಕಾಡಿನಲ್ಲಿ ಕಾಡ್ಗಿಚ್ಚಿಗೆ ಬಲಿಯಾದ ಮೃತ ವನಪಾಲಕ ಸುಂದರೇಶ್ ಗೆ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ಮಾಡಲಾಯಿತು.ಗೃಹ ಸಚಿವ ಆರಗ ಜ್ಞಾನೇಂದ್ರ,ಹಾಸನ ಡಿ.ಎಫ್.ಓ ಹರೀಶ್ ಸೇರಿದಂತೆ ಇತರರು ಮೃತನ ಅಂತಿಮ ದರ್ಶನ‌ ಪಡೆದರು.

ಮೃತ ಸುಂದರೇಶ್ ತೀರ್ಥಹಳ್ಳಿ ತಾಲ್ಲೂಕಿನ ತೆಂಗಿನಕೊಪ್ಪದ ಸಂಪಿಗೇಸರ ಮೂಲದವರಾಗಿದ್ದು. ಅವರಿಗೆ ಬಾಲ್ಯದಿಂದಲೂ ಕಾಡು ಎಂದರೆ ಅಪಾರ ಪ್ರೀತಿ ಹೊಂದಿದ್ದರು. ಸುತ್ತಲು ನೋಡಿಕೊಂಡು ಬೆಳೆದ ಪರಿಸರದ ಬಗ್ಗೆ ಸೂಕ್ಷ್ಮ ಗ್ರಹಿಕೆ ಹೊಂದಿದ್ದರು. ಕಾಡಿನ ಬಗೆಗಿನ ವಾತ್ಸಲ್ಯದಿಂದ ಅರಣ್ಯ ರಕ್ಷಕನಾಗಿ ಸೇವೆಗೆ ಸೇರಿಕೊಂಡಿದ್ದ. ಮುನ್ನುಗ್ಗುವ ಸ್ವಭಾವದಿಂದ ಸ್ನೇಹಿತರಿಗೆ ಈತ ಸದಾ ಧೈರ್ಯ ತುಂಬುತ್ತಿದ್ದ. ಅನೆ, ಹಾವು, ಕಾಡು ಪ್ರಾಣಿಗಳ ಕಿಂಚಿತ್ತೂ ಹೆದರಿಕೆ ಇಲ್ಲದೆ ಕೆಲಸ ಮಾಡುತ್ತಿದ್ದ. 4 ವರ್ಷಗಳ ಹಿಂದೆ ಆನೆ ಓಡಿಸಲು ಪಟಾಕಿಗಳನ್ನು ಸಿಡಿಸುವ ಸಂದರ್ಭ ತನ್ನ ಒಂದು ಬೆರಳನ್ನು ಕಳೆದುಕೊಂಡಿದ್ದ. ವಿಷಭರಿತ ಹಾವುಗಳನ್ನು ಸುರಕ್ಷತೆಯಿಂದ ಕಾಡಿಗೆ ತಲುಪಿಸುವ ಸಾಹಸಿಗನಾಗಿದ್ದ ಎಂದು ಅವರ ಸ್ನೇಹಿತರು ಸ್ಮರಿಸುತ್ತಾರೆ.

ಕೊಂಡ್ಲೂರಿನಲ್ಲಿ ಪ್ರಾಥಮಿಕ,‌ ಪ್ರೌಢಶಿಕ್ಷಣವನ್ನು ಮುಗಿಸಿದ ನಂತರ ತೀರ್ಥಹಳ್ಳಿ ಪಟ್ಟಣದ ತುಂಗಾ ಮಹಾವಿದ್ಯಾಲಯದಲ್ಲಿ ಬಿಎ ಪದವಿ ಪಡೆದಿದ್ದರು. ರಕ್ಷಿತಾ ಅವರನ್ನು 7 ವರ್ಷಗಳ ಹಿಂದೆ ಸುಂದರೇಶ್ ವರಿಸಿದ್ದರು. 4 ವರ್ಷದ ಪುತ್ರಿ ಶಾರ್ವರಿ ಎಸ್‌.ಎಸ್. ಹಾಗೂ ತಂದೆ ಜಯಚಂದ್ರಗೌಡ ಇದ್ದಾರೆ. ತಾಯಿ ಶಾರದ ಎರಡು ವರ್ಷಗಳ ಹಿಂದೆ ಮಂಗನಕಾಯಿಲೆಯಿಂದ ನಿಧನರಾಗಿದ್ದಾರೆ.ಮಗಳನ್ನು ಘಟನೆ ನಡೆಯು ಮುನ್ನಾ ದಿನ ಸಕಲೇಶಪುರದ ರೋಟರಿ ಶಾಲೆಯಲ್ಲಿ ಓದಿಸಲು ದಾಖಲು ಮಾಡಿ ಬಂದಿದ್ದರು.

ಸುತ್ತಮುತ್ತಲ ಗೆಳೆಯರಿಗೆ ಸದಾಕಾಲ ಸಂತೋಷ ನೀಡುತ್ತಿದ್ದ ಅವರ ಅಗಲಿಕೆಯಿಂದ ಅವರ ಆಪ್ತ ವಲಯಕ್ಕೆ ಅತೀವ ಬೇಸರ ಉಂಟು ಮಾಡಿದೆ‌.

RELATED ARTICLES
- Advertisment -spot_img

Most Popular