ಅರಣ್ಯ ರಕ್ಷಕ ಸುಂದರೇಶ್ ಸಾವಿಗೆ ಕವನ್ ಗೌಡ ಕಂಬನಿ
ಪರಿಸರ ವಿರೋಧಿ ನಿಲುವುಗಳೇ ಸುಂದರೇಶ್ ಸಾವಿಗೆ ಕಾರಣ : ಆಕ್ರೋಶ ವ್ಯಕ್ತಪಡಿಸಿದ ಎಪಿಎಂಸಿ ಮಾಜಿ ಅಧ್ಯಕ್ಷರು.
ಸಕಲೇಶಪುರ : ಕಾಡಾನೆ ಮಾನವನ ಸಂಘರ್ಷದ ಜೊತೆಗೆ ಜನರ ಹಾಗೂ ಸರ್ಕಾರಗಳ ಪರಿಸರ ವಿರೋಧಿ ನಿಲುವುಗಳೆ ಇಂದು ಸುಂದರೇಶ್ ಸಾವಿಗೆ ಕಾರಣವಾಗಿರಬಹುದು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಜೆಡಿಎಸ್ ಮುಖಂಡ ಕವನ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಂದರೇಶ್ ಅವರಿಗೆ ಸಂತಾಪ ಸೂಚಿಸಿ ವಾಸ್ತವ ನ್ಯೂಸ್ ನನಗೆ ಮಾತನಾಡಿದ ಕವನ್ ಗೌಡ ,ಮಾನವ ಪ್ರಾಣಿಗಳ ಸಂಘರ್ಷದಲ್ಲಿ ಬಹಳಷ್ಟು ಸಾವು ನೋವುಗಳನ್ನ ನೋಡಿದೀವಿ ಆದರೆ ಇವತ್ತು ಕಾಡ್ಗಿಚ್ಚಿನ್ನ ಕೆನ್ನಾಲಿಗೆಗೆ ಒಬ್ಬ ಅರಣ್ಯ ಅಧಿಕಾರಿಯು ಪ್ರಾಣ ಕಳೆದುಕೊಂಡಿರುವುದು ಶೋಚನೀಯ ಸಂಗತಿಯಾಗಿದೆ.
ಖಾಕಿ ತೊಟ್ಟ ಪ್ರತಿಯೊಬ್ಬ ವ್ಯಕ್ತಿಯು ಒಬ್ಬ ತಂದೆ , ಮಗ ,ಸಹೋದರ ಆಗಿರುತಾರೆ ದೇಶದ ಗಡಿ ಕಾಯುವ ಸೈನಿಕರು ಒಂದೆಡೆಯಾದರೆ ದೇಶದೊಳಗೆ ಇರುವ ಸೈನಿಕರು ಇವರುಗಳು ಹಸಿರು ಸೈನಿಕರ ಸಾವು ಪ್ರಕೃತಿಗೆ ತುಂಬಲಾರದ ನಷ್ಟ .
ಅವೈಜ್ಞಾನಿಕ ಕಾಮಗಾರಿಗಳ್ಳನ್ನು ಸರ್ಕಾರಗಳು ನಮ್ಮ ಪಶ್ಚಿಮ ಘಟ್ಟದಲ್ಲಿ ಪ್ರಾರಂಭಕ್ಕೆ ಅವಕಾಶ ನೀಡಿದ್ದರಿಂದ ಇಂದು ನಾವು ಪ್ರತಿಕೂಲ ಹವಮಾನದ ಪರಿಣಾಮ ಎದುರಿಸಬೇಕಾದ ವಾತಾವರಣ ನಿರ್ಮಾಣವಾಗಿದೆ ಎಂದರು.
ಕಾಡು ನಾಶವಾಗುತ್ತಿರುವುದರಿಂದ ಕಾಡುಪ್ರಾಣಿಗಳು ಪ್ರಾಣಿಗಳು ನಾಡಿಗೆ ಬಂದಿವೆ. ಜೊತೆಗೆ ಕಾಡುಗಳು ಹೊತ್ತಿ ಉರಿಯಲು ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.