*ಸಕಲೇಶಪುರದ ಶ್ರೇಷ್ಠ ಅರಣ್ಯ ಸಂರಕ್ಷಣೆಗೆ, ಕಾಡಾನೆ ಮಾನವ ಸಂಘರ್ಷಕ್ಕೆ ನಿಮ್ಮ ಅವಿರತ ಸೇವೆ ಮರೆಯಲು ಸಾಧ್ಯವಿಲ್ಲ.ನೀವು ನಮ್ಮ ಹೃದಯದಲ್ಲಿದ್ದೀರಿ ಭಾವಪೂರ್ಣ ಶ್ರದ್ಧಾಂಜಲಿಗಳು.*
ವನಪಾಲಕ ಸುಂದರೇಶ್ ಜೊತೆ ಕಳೆದ ಸಮಯದ ಮೆಲುಕು.
ಅರಣ್ಯ ರಕ್ಷಕ ವನಪಾಲಕ ಹಸಿರುಸೇನೆ ಸುಂದ್ರೇಶ್, ಕ್ರಿಯಾತ್ಮಕ ಹುಮ್ಮಸ್ಸಿನ ಸರ್ಕಾರಿ ನೌಕರರು ಹದಿಮೂರನೇ ತಾರೀಕು ನನ್ನ ಫೇಸ್ ಬುಕ್ ಲೈವ್ ನೀವು ನೋಡಬಹುದು. ನಮಗೀಗ ಅಗಲಿಕೆಯ ದುಃಖ ಜೊತೆಗೆ ಅವರ ಜೊತೆ ತೆಗೆಸಿಕೊಂಡ ಚಿತ್ರಗಳು ಮತ್ತು ವಿಡಿಯೋಗಳು ಮಾತ್ರ ನೆನಪಾಗಿ ಉಳಿದಿದೆ. ನಮ್ಮ ತೋಟಕ್ಕೆ ಕಾಡಾನೆಗಳು ದಾಳಿಯನ್ನು ವೀಕ್ಷಣೆ ಮಾಡಲಿಕ್ಕೆ ಮೋಹನ್ ರವರು ಒಟ್ಟಿಗೆ ನಮ್ಮ ತೋಟಕ್ಕೆ ಬಂದು, ಕಾಡಾನೆಗಳ ಇಷ್ಟೊಂದು ಹೋರಾಟಗಳಲ್ಲಿ ಭಾಗವಹಿಸುತ್ತೀರಿ ನಿಮಗೆ ಈ ರೀತಿ ನಷ್ಟವಾಗಿರುವುದು ಬೇಸರ,ನಾವು ಈ ನಷ್ಟವನ್ನು ತುಂಬಿಕೊಡಲು ಸಾಧ್ಯವಿಲ್ಲ ಸರ್ಕಾರದ ಒಂದಿಷ್ಟು ಪರಿಹಾರ ಕೊಡಿಸಬಹುದಷ್ಟೇ ಎಂದು ಸ್ಥಳದಲ್ಲೇ ಜಿಪಿಎಸ್ ಮಾಡಿ ಆನ್ಲೈನ್ ಅರ್ಜಿಗಳನ್ನ ಅಪ್ಲೋಡ್ ಮಾಡಿದ್ದರು.ನಂತರ ಫಾರ್ಮ್ ನಂಬರ್ 57 ರಲ್ಲಿ ಅರ್ಜಿ ಸಲ್ಲಿಸಿದ ಯಡೆಹಳ್ಳಿ ಗ್ರಾಮದ ಏಳು ಕುಟುಂಬಗಳ ಮನೆಗೆ ತೆರಳಿ ಮರಗಳ ಗಣತಿ ನಡೆಸಿ ನಾಳೆ ತಾಹಸಿಲ್ದಾರ್ ಅವರಿಗೆ ರಿಪೋರ್ಟ್ ನೀಡುತ್ತೇವೆ ನಮ್ಮ ಅವಧಿಯಲ್ಲಿ ಹೆಚ್ಚು ಜನರಿಗೆ ಉಪಯೋಗವಾಗಬೇಕು ಎಲ್ಲಾ ಅರ್ಜಿಗಳು ವಿಲೇವಾರಿಯಾಗಬೇಕು ಎಂದು ಮಾತನಾಡಿದ್ದರು. ನಮ್ಮ ಮನೆಯಲ್ಲಿ ಬಂದು ಕಾಫಿ ಕುಡಿದು ನಾನು ಪ್ರೀತಿಯಿಂದ ಚಿಕೋರಿ ಹಾಕದ ಸಾವಯುವ ಕಾಫಿ ಪುಡಿಯನ್ನು ಉಡುಗೊರೆಯಾಗಿ ನೀಡಿದ್ದೆ ತುಂಬಾ ಧನ್ಯವಾದಗಳು ನನ್ನೂರಿಗೆ ತೆಗೆದುಕೊಂಡು ಹೋಗುತ್ತೇನೆ ಎಂದು ಸಂತಸದಿಂದ ಹೇಳಿದ್ದರು, ನಂತರ 14ನೇ ತಾರೀಕು ಮತ್ತೆ ಬಂದು ನನ್ನನ್ನು ಭೇಟಿಯಾಗಿ ನಮ್ಮ ಸ್ನೇಹಿತರಾದ ಬಾಗೆ ಗ್ರಾಮದ ದಾರೇಶ್ ತೋಟದಲ್ಲಿ ಆನೆ ದಾಳಿಯನ್ನು ವೀಕ್ಷಣೆ ಮಾಡಿ ಅಲ್ಲೇ ಪರಿಹಾರದ ಅರ್ಜಿಗಳನ್ನ ಆನ್ಲೈನಲ್ಲಿ ಭರ್ತಿ ಮಾಡಿದರು, ಅಲ್ಲಿ ಬಂದಿದ್ದ ಹಲವಾರು ಜನರಿಗೆ ಅರ್ಜಿ ಫಾರಂ ಗಳನ್ನು ವಿತರಿಸಿದರು,ಕಾಡಾನೆ ಸಮಸ್ಯೆಯಿಂದ ಜನರಿಗೆ ತೊಂದರೆಯಾಗುತ್ತದೆಂದು ಬಹಳ ಕ್ರಿಯಾತ್ಮಕವಾಗಿ ಎಲ್ಲಾ ಕಡೆ ಸಂಚರಿಸುತ್ತಾ ಜನರಿಗೆ ಧೈರ್ಯ ಹೇಳಿ ಕಾಡಾನೆ ದಾಳಿಯಿಂದ ಈ ರೀತಿ ನಾವು ತಪ್ಪಿಸಿಕೊಳ್ಳಬಹುದು ಮತ್ತೆ ಗುರುತು ಹಿಡಿಯಬಹುದು ಎಂದು ಹಲವಾರು ಮಾಹಿತಿಗಳನ್ನು ಕೊಡುತ್ತಿದ್ದರು,ವಿಶೇಷವಾಗಿ ನಾನು ಎಲ್ಲೇ ಕಂಡರೂ ಸೈನಿಕರ ರೀತಿ ಬಂದು ಹಸ್ತಲಾಗವನ್ನು ನೀಡುತ್ತಿದ್ದರು. ದುರಂತ ಅರಣ್ಯವನ್ನ ರಕ್ಷಿಸಲು ಹೋಗಿ ಕಾಡ್ಗಿಚ್ಚಿಗೆ ಸಿಲುಕಿ ಮೃತರಾಗಿದ್ದು, ಇದು ಸರ್ಕಾರಕ್ಕೆ ಸಮಾಜಕ್ಕೆ ವ್ಯವಸ್ಥೆಗೆ ತುಂಬಲಾರದ ನಷ್ಟವಾಗಿದೆ.ಈ ಚಿಕ್ಕ ವಯಸ್ಸಿನಲ್ಲಿ ಎಲ್ಲಾ ಸುಖ ದುಃಖಗಳನ್ನು ಅನುಭವಿಸುವ ಕಾಲಘಟ್ಟದಲ್ಲಿ ಪ್ರಕೃತಿಯ ಮಡಿಲಲ್ಲಿ ಸೇವೆ ಮಾಡುತ್ತಾ ಪ್ರಾಣ ಬಿಟ್ಟಿದ್ದು ದುಃಖಕರವಾದ ಸಂಗತಿ. ಶ್ರೀಯುತರ ಕುಟುಂಬಕ್ಕೆ ದುಃಖದ ಅಗಲಿಕೆಯ ನೋವನ್ನು ಬರಿಸುವ ಶಕ್ತಿಯನ್ನು ಭಗವಂತ ನೀಡಲಿ ಸುಂದರೇಶ್ ರವರ ಕುಟುಂಬದ ಶಿವರಾತ್ರಿಯ ಭಕ್ತಿ ಭಾವ ಅಂತ್ಯಗೊಂಡಿದ್ದು ಶಿವರಾತ್ರಿ ದಿನ ಕರಾಳವಾಗಿದೆ. ಸರ್ಕಾರ ಶ್ರೀತರ ಕುಟುಂಬದ ಸಂಪೂರ್ಣ ಹೊಣೆಗಾರಿಕೆಯನ್ನು ನಿಭಾಯಿಸಬೇಕು ಆಸರೆಯಾಗಿ ನಿಲ್ಲಬೇಕಾದ್ದು ಕರ್ತವ್ಯವಾಗಿದೆ ಸಕಲೇಶಪುರ ನಾಗರಿಕರ ಪರವಾಗಿ ಶ್ರೀಯುತ ಸುಂದರೇಶ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು.
ಯಡೇಹಳ್ಳಿ”ಆರ್”ಮಂಜುನಾಥ್.
9901606220