ಸಕಲೇಶಪುರ : ನಿಧನರಾದ ಅರಣ್ಯ ರಕ್ಷಕ ಸುಂದರೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಕಲೇಶಪುರದಲ್ಲಿ ಅವಕಾಶ ನೀಡುವಂತೆ ಸಾಗರ್ ಜಾನಕೆರೆ ಮನವಿ.
ಸಕಲೇಶಪುರ : ಕಾಡ್ಗಿಚ್ಚಿಗೆ ಸಿಲುಕಿ ಸುಟ್ಟ ಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಸಕಲೇಶಪುರ ಅರಣ್ಯ ಇಲಾಖೆಯ ಅರಣ್ಯ ರಕ್ಷಕ ಸುಂದರೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಕಲೇಶಪುರದಲ್ಲಿ ಅವಕಾಶ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಸಾಗರ್ ಜಾನೆಕೆರೆ ಮನವಿ ಮಾಡಿದ್ದಾರೆ.
ಮೂಲತಃ ಸುಂದರೇಶ್ ತೀರ್ಥಹಳ್ಳಿಯವರಾಗಿದ್ದು ಹಲವಾರು ವರ್ಷಗಳಿಂದ ಸಕಲೇಶಪುರದಲ್ಲಿ ನೆಲೆಸಿ ಇಲ್ಲಿನ ಜನರ ಅಪಾರ ಪ್ರೀತಿಗೆ ಪಾತ್ರರಾಗಿದ್ದರು. ಈ ನೆಲೆಯಲ್ಲಿ ಅವರ ಹಿತೈಷಿಗಳು, ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಬೇಕೆಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಕಾಡಿನೊಳಗೆ ಸಿಲುಕಿದ್ದ ಸುಂದರೇಶ್ ಅವರನ್ನು ಸಾಗರ್ ಜನಕೆರೆ ಹಾಗೂ ಅವರ ತಂಡ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲು ನೆರವಾಗಿತ್ತು.