Sunday, April 20, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ರಸ್ತೆ ಅಪಘಾತ ಪಟ್ಟಣದ ಯುವಕ ದಾರುಣ ಸಾವು

ಸಕಲೇಶಪುರ : ರಸ್ತೆ ಅಪಘಾತ ಪಟ್ಟಣದ ಯುವಕ ದಾರುಣ ಸಾವು

ಸಕಲೇಶಪುರ : ರಸ್ತೆ ಅಪಘಾತ ಪಟ್ಟಣದ ಯುವಕ ದಾರುಣ ಸಾವು

ಸಕಲೇಶಪುರ: ಪಟ್ಟಣದ ಅಗ್ರಹಾರ ನಿವಾಸಿ ಸಂತೋಷ್ (28) ಎಂಬಾತ ಬುಧುವಾರ ರಾತ್ರಿ ಅಪಘಾತದಲ್ಲಿ ನಿಧನರಾಗಿದ್ದಾರೆ. ಪಟ್ಟಣದ ಎಸ್.ಬಿ.ಎಂ ವೃತ್ತದ ಸಮೀಪ ಕಳೆದ ರಾತ್ರಿ ಬೈಕ್ ನಲ್ಲಿ ಹೋಗುವಾಗ ಮುಂದೆ ವೇಗವಾಗಿ ಹೋಗುತ್ತಿದ್ದ ಲಾರಿ ಚಾಲಕ ತಕ್ಷಣ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಹಿಂದಿನಿಂದ ಬೈಕ್ ನಲ್ಲಿ ಬರುತ್ತಿದ್ದ ಸಂತೋಷ್ ಲಾರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾನೆ. ಆ್ಯಂಬುಲೆನ್‌ಸ್ ಚಾಲಕರಾದ ಅಪ್ಪಯ್ಯ ಹಾಗೂ ಅಭಿ ತಕ್ಷಣ ಈತನನ್ನು ಪಟ್ಟಣದ ಕ್ರಾರ್ಡ್ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದು ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಜೀವ ಹೋಗಿದೆ. ಮೃತನು ಪಟ್ಟಣದ ಅಗ್ರಹಾರ ಬಡಾವಣೆಯ ನಿವಾಸಿ ಪರಮೇಶ್ ಎಂಬುವರ ಪುತ್ರನಾಗಿದ್ದು ಬೆಂಗಳೂರಿನ ಕೊರಿಯರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಜಾತ್ರೆ ನಿಮಿತ್ತ ಪಟ್ಟಣಕ್ಕೆ ಕೆಲದಿನಗಳ ಹಿಂದಷ್ಟೆ ಬಂದಿದ್ದನೆಂದು ತಿಳಿದು ಬಂದಿದೆ. ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES
- Advertisment -spot_img

Most Popular