Sunday, November 24, 2024
Homeಸುದ್ದಿಗಳುಸಕಲೇಶಪುರಸಕಲೇಶಪುರ : ಬಾಗೆ ಪಿಡಿಓ ಚಿನ್ನಸ್ವಾಮಿ ವಿರುದ್ಧ ಭ್ರಷ್ಟಾಚಾರ ಆರೋಪ.

ಸಕಲೇಶಪುರ : ಬಾಗೆ ಪಿಡಿಓ ಚಿನ್ನಸ್ವಾಮಿ ವಿರುದ್ಧ ಭ್ರಷ್ಟಾಚಾರ ಆರೋಪ.

ಸಕಲೇಶಪುರ : ಬಾಗೆ ಪಿಡಿಓ ಚಿನ್ನಸ್ವಾಮಿ ವಿರುದ್ಧ ಭ್ರಷ್ಟಾಚಾರ ಆರೋಪ.

 ತಕ್ಷಣವೇ ಪಿಡಿಒ ಅಮಾನತ್ತು ಮಾಡುವಂತೆ ಗ್ರಾಮ ಪಂಚಾಯತಿ ಸದಸ್ಯ ಚಾರ್ಲ್ಸ್ ಅಗ್ರಹ.

 ಸುಮಾರು 58 ಲಕ್ಷ ರೂಪಾಯಿ ನಷ್ಟು ಅವ್ಯವಹಾರ ಬಗ್ಗೆ ಅನುಮಾನ.

 

ಸಕಲೇಶಪುರ : ದಿನನಿತ್ಯ ಸುದ್ದಿಯಲ್ಲಿರುವ ಗ್ರಾಮ ಪಂಚಾಯಿತಿ ಎಂದರೆ ಅದು ತಾಲೂಕಿನ ಬೆಳಗೋಡು ಹೋಬಳಿ ಬಾಗೆ ಗ್ರಾಮ ಪಂಚಾಯಿತಿ.

 ಒಂದೆಡೆ ಅಭಿವೃದ್ಧಿ ಕೆಲಸಗಳಲ್ಲಿ ಸುದ್ದಿ ಆದರೆ ಮತ್ತೊಂದೆಡೆ ಭ್ರಷ್ಟಾಚಾರದಲ್ಲಿ ಈ ಗ್ರಾಮ ಪಂಚಾಯಿತಿ ಹೆಸರುವಾಸಿಯಾಗಿದೆ.

 ಇದೀಗ ಈ ಗ್ರಾಮ‌ ಪಂಚಾಯತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದಲೇ ನಡೆದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ವಾಸ್ತವ ನ್ಯೂಸ್ ನೊಂದಿಗೆ ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ಹಾಗೂ ಬಾಗೆ ಗ್ರಾಮ ಪಂಚಾಯಿತಿ ಸದಸ್ಯ ಚಾರ್ಲ್ಸ್ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭಿವೃದ್ಧಿ ಅಧಿಕಾರಿ ಚಿನ್ನಸ್ವಾಮಿ ಭ್ರಷ್ಟಾಚಾರದಲ್ಲಿ ಮುಳುಗಿದ್ದು ತಾನೇ ಪ್ರಾಮಾಣಿಕತೆ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ಕಿಡಿಕಾರಿದ್ದಾರೆ.

 14 ಹಾಗೂ 15 ನೇ ಹಣಕಾಸು ಯೋಜನೆಯಲ್ಲಿ ಸುಮಾರು 58 ಲಕ್ಷ ರೂಪಾಯಿನಷ್ಟು ಹಣವನ್ನು ಪಿಡಿಒ ಚಿನ್ನಸ್ವಾಮಿ ದುರುಪಯೋಗಪಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪರಿಹಾರದ ಹಣವಾಗಿ 15 ಲಕ್ಷ ರೂಪಾಯಿ ಬಂದಿದ್ದು ಹಣವನ್ನು ಸಾರ್ವಜನಿಕ ಕೆಲಸಗಳಿಗೆ ಬಳಸದೆ ಸ್ವಂತಕ್ಕೆ ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಎಸ್ಕ್ರೋ ನಲ್ಲಿ ಮೀಸಲಿರಿಸಿದ್ದ 8 ಲಕ್ಷ ರೂಪಾಯಿಗಳನ್ನು ವಿದ್ಯುತ್ಪಕ್ತಿ ಬಳಕೆಗೆ ಮಾತ್ರ ಅವಕಾಶವಿದ್ದು ಆದರೆ ಬುದ್ಧಿವಂತ ಪಿಡಿಒ ಹಾಸನದ ರಂಗನಾಥ ಎಲೆಕ್ಟ್ರಿಕಲ್ ಎಂಬ ಅಂಗಡಿಯವರಿಗೆ ಹಣವನ್ನು ವರ್ಗಾವಣೆ ಮಾಡಿ ಅಲ್ಲಿಂದ ಪಡೆದುಕೊಂಡಿದ್ದಾರೆ. ಈ ಹಣ ಬಳಕೆ ಬಗ್ಗೆ ಯಾವುದೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರದೆ ಏಕ ಪಕ್ಷಿಯವಾಗಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. 15ನೇ ಹಣಕಾಸು ಯೋಜನೆ ಅಡಿ ಕ್ರಿಯಾಯೋಜನೆ ಸಿದ್ಧಪಡಿಸಿ ಹಣವನ್ನು ಖರ್ಚು ಮಾಡಬೇಕು ಆದರೆ ಇವರು ಒಂದಕ್ಕೊಂದು ಸಂಬಂಧವಿಲ್ಲದಂತೆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಭ್ರಷ್ಟಾಚಾರದ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಶುಕ್ರವಾರದೊಳಗೆ ಈ ಭ್ರಷ್ಟ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಪಂಚಾಯತಿ ಮುಂಭಾಗ ಏಕಾಂಗಿಯಾಗಿ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯವರಿಗೆ ಮನವಿ ಸಲ್ಲಿಸುತ್ತೇನೆ ಅವರು ಕೂಡ ಕ್ರಮ ಕೈಗೊಳ್ಳದಿದ್ದರೆ ನನ್ನ ಮುಂದಿನ ನಡೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಲೋಕಾಯುಕ್ತದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ಪ್ರತಿ ವರ್ಷ ನಡೆಯುವ ಜಮಾಬಂಧಿ ಲೆಕ್ಕ ಪರಿಶೋಧನೆ ಕಾರ್ಯಕ್ಕೆ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು 3 ಲಕ್ಷ ಹಣವನ್ನು ನೀಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಇವರು ಲೆಕ್ಕ ಪರಿಶೋಧನೆ ಮಾಡಿಸಿಲ್ಲ ,ಈ ಬಗ್ಗೆ ಅಧಿಕಾರಿಗಳು ಪುಸ್ತಕದಲ್ಲಿ ಇವರ ಲೋಪಗಳನ್ನು ತೋರಿಸಿ ಬರೆದಿಟ್ಟು ಹೋಗಿದ್ದಾರೆ ಇದಕ್ಕೆಲ್ಲ ನೇರವಾಗಿ ಪಿಡಿಒ ಚಿನ್ನಸ್ವಾಮಿ ಯಾಗಿದ್ದಾನೆ. ತಕ್ಷಣವೇ ಆತನನ್ನು ಅಮಾನತ್ತು ಮಾಡಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

 ತನ್ನ ಭ್ರಷ್ಟಾಚಾರವನ್ನು ಮುಚ್ಚಿ ಹಾಕಿಕೊಳ್ಳಲು ಈತ ವಾಟ್ಸಪ್ ಗ್ರೂಪ್ ನಲ್ಲಿ ನಾನು ಪ್ರಾಮಾಣಿಕನಂತೆ ಬಿಂಬಿಸಿಕೊಳ್ಳಲು ನನ್ನನ್ನು ಬೇರೆಡೆಗೆ ವರ್ಗಾವಣೆ ಸಂದೇಶ ಹಾಕುತ್ತಾನೆ ಇವ ಅಧಿಕಾರಿಯೋ ಅಥವಾ ಭ್ರಷ್ಟಾಚಾರದ ಏಜೆಂಟ್ ಎಂಬುದು ತಿಳಿಯುತ್ತಿಲ್ಲ. ಇದಕ್ಕೆ ಪೂರಕವಾಗಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷನೊಬ್ಬ ತಾನು ನಿಮ್ಮ ಜೊತೆಗಿರುವುದಾಗಿ ಹೇಳುತ್ತಾರೆ, ಕೆಲ ಗ್ರಾಮ ಪಂಚಾಯಿತಿಯ ಸದಸ್ಯರು ಭ್ರಷ್ಟಾಚಾರದಲ್ಲಿ ಮುಳುಗಿದ್ದು ಇಂಥ ಭ್ರಷ್ಟ ಪಿಡಿಒ ಗೆ ಸಹಕಾರ ನೀಡುತ್ತಾ ಬಾಗೆ ಪಂಚಾಯಿತಿಯ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ವಾಟ್ಸಪ್ ಗ್ರೂಪ್ ನಲ್ಲಿ ಬ್ಲಾಕ್ ಮೇಲ್ ಮಾಡುತ್ತೇನೆಂದು ಮೆಸೇಜ್ ಹಾಕಿದ್ದಾನೆ ನಾನೇನಾದರೂ ಬ್ಲಾಕ್ ಮೇಲ್ ಮಾಡಿರುವ ಬಗ್ಗೆ ದಾಖಲಾತಿ ಇದ್ದರೆ ತಕ್ಷಣವೇ ನನ್ನ ಗ್ರಾಮ ಪಂಚಾಯಿತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದ ಎಂದು ಸವಾಲು ಎಸೆದರು

 ಗ್ರಾಮ ಪಂಚಾಯಿತಿಯ ಖಾತೆಯಿಂದ ಹಣ ಡ್ರಾ ಮಾಡಲು ಅಧ್ಯಕ್ಷ ಹಾಗೂ ಪಿಡಿಒ ಇಬ್ಬರು ಇದ್ದಾರೆ. ಈ ಬಗ್ಗೆ ಎಲ್ಲರ ಮೇಲೆಯೂ ತನಿಖೆ ಆಗಬೇಕು. ಒಂದು ವೇಳೆ ಒತ್ತಡಕ್ಕೆ ಮಾಡಿದ ತನಿಖೆ ಮಾಡದಿದ್ದರೆ ಸಂಬಂಧಪಟ್ಟ ಎಲ್ಲಾ ತಾಲೂಕು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹೊಣೆಗಾರರನ್ನು ಮಾಡಿ ಕೋರ್ಟ್ ಮೊರೆ ಹೋಗುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

 ಸಾರ್ವಜನಿಕರ ಹಣವನ್ನು ಲೂಟಿ ಮಾಡಿ ಸರಿಯಾದ ಸಮಯಕ್ಕೆ ಕಾಮಗಾರಿ ನಡೆಸದೆ 4.5 ಲಕ್ಷ ರೂಪಾಯಿ ದಂಡವನ್ನು ಈ ಭ್ರಷ್ಟ ಪಿಡಿಒ ಚಿನ್ನಸ್ವಾಮಿ ಕಟ್ಟಿದ್ದಾನೆ. ಈತನ ಮೇಲೆ ಈಗಾಗಲೇ ವಿಜಿಲೆನ್ಸ್ ನವರು FIR ದಾಖಲು ಮಾಡಿದ್ದಾರೆ. ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈತನ ವಿರುದ್ಧ ಇದುವರೆಗೂ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದರೆ ಎಲ್ಲಾರು ಕೂಡ ಭ್ರಷ್ಟಾಚಾರದಲ್ಲಿ ಕೈಜೋಡಿಸಿದ್ದಾರೆ ಇದರ ವಿರುದ್ಧ ನನ್ನ ಕೊನೆಯ ಉಸಿರಿರುವರೆಗೂ ಹೋರಾಡುತ್ತೇನೆ ಎಂದು ವಾಸ್ತವ ನ್ಯೂಸ್ ತಿಳಿಸಿದ್ದಾರೆ.

RELATED ARTICLES
- Advertisment -spot_img

Most Popular